ಈ ಪ್ರೀತಿ ಕೂಡ, ಈ ಹೊತ್ತಿನ ನಿಜ ಮಾತ್ರ! : ಪ್ರೇಮಿಯ ದಿನಚರಿ

ಖಾಲಿಯಲ್ಲಿ ಬದುಕೋದು ಕಲಿತರೆ ಆವರಣ ಬೇಕಾಗೋದಿಲ್ಲ. ಆವರಣ ಕಟ್ಟಿಕೊಂಡ ಕೂಡಲೆ ಅಲ್ಲೊಂದು ಮಿತಿ. ಜಿಗಿದಾಡುವ ಚೈತನ್ಯಕ್ಕೆ ಉಬ್ಬಸ. ಮತ್ತೆ, ಈ ಆವರಣ ಇದೆಯಲ್ಲ, ಅದು ತನ್ನನ್ನ ತಾನು ಸುರಕ್ಷೆ ಅಂತ ತೋರಿಸಿಕೊಳ್ಳುತ್ತೆ. ಅದೇ ಹೊತ್ತಿಗೆ ನಮ್ಮ ದೌರ್ಬಲ್ಯವೂ ಆಗಿರುತ್ತೆ. ಅದಕ್ಕೇ ಅವನು ನನ್ನ ಆವರಣವೂ ಅಲ್ಲ, ದೌರ್ಬಲ್ಯವೂ ಆಗೋದಿಲ್ಲ. ಅಂವ ನನ್ನ ರಕ್ಷೆ ಅಂದುಕೊಂಡಾಗ ಮಾತ್ರ ಅದು ಕದಲುವ ಆತಂಕ ಹುಟ್ಟೋದು ~ ಚೇತನಾ ತೀರ್ಥಹಳ್ಳಿ ಅಲೆಮಾರಿ ಗಾಳಿ ಎಳೆಯೊಟ್ಟಿಗೆ ಕಾದ ಮಣ್ಣಿನ ಘಮ ತೂರಿ ಹಿತಾನುಭವ. […]

ಓ ನನ್ನ ಚೇತನಾ… : ಅರಳಿಮರ POSTER

“ರೂಪರೂಪಗಳನು ದಾಟಿ, ನಾಮಕೋಟಿಗಳನು ಮೀಟಿ, ಎದೆಯ ಬಿರಿಯೆ ಭಾವದೀಟಿ…. ಓ ನನ್ನ ಚೇತನಾ, ಆಗು ನೀ ಅನಿಕೇತ” ಎನ್ನುತ್ತಾರೆ ರಸಋಷಿ ಕುವೆಂಪು.  ರಸಋಷಿ ಎಂದೇ ಖ್ಯಾತರಾಗಿರುವ ಕುವೆಂಪು, ಕನ್ನಡದ ದಾರ್ಶನಿಕ ಕವಿಯೂ ಹೌದು. ಇವರ  “ಓ ನನ್ನ ಚೇತನಾ, ಆಗು ನೀ ಅನಿಕೇತನ” ಎಂದು ಸಾರುವ ವಿಶ್ವಮಾನವ ಗೀತೆಯು ಮನುಷ್ಯನು ಬದುಕಬೇಕಾದ ಬಗೆಯನ್ನು ಅತ್ಯಂತ ಅರ್ಥಪೂರ್ಣವಾಗಿ ನಿರ್ದೇಶಿಸುತ್ತದೆ. “ಚೇತನವು ಸದಾ ಚಲನಶೀಲ. ಅದು ನಿಂತರೆ, ಅದಕ್ಕೆ ಮುಕ್ತಿಯಿಲ್ಲ. ಚೇತನವು ತನ್ನ ಚಲನೆಯನ್ನು ಕಾಯ್ದುಕೊಳ್ಳಬೇಕೆಂದರೆ, ಅದು ಯಾವುದಕ್ಕೂ ಅಂಟಿಕೊಳ್ಳಬಾರದು” – ಇದು […]