ಮರಳಿ ಯತ್ನವ ಮಾಡು : ಪರಮಹಂಸ ವಚನ ವೇದ

ರಾಮಕೃಷ್ಣ ಪರಮಹಂಸರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದರಿಂದ ಎಂಥಾ ಕಷ್ಟದ ಕಾರ್ಯವನ್ನೂ ಸಾಧಿಸಬಹುದು ಎಂದು ದೃಷ್ಟಾಂತಗಳ ಮೂಲಕ ಹೇಳುತ್ತಿದ್ದರು. ಸಾಧನೆಯ ಹಾದಿಯಲ್ಲಿ ತೊಡಕುಗಳು ಎದುರಾಯಿತೆಂದು ಶಿಷ್ಯರು ಅವರ ಬಳಿ ಬಂದಾಗೆಲ್ಲ ಅವರು ಛಲ ಬಿಡದೆ ಪ್ರಯತ್ನ ಮುಂದುವರೆಸಿ ಎಂದೇ ಹೇಳುತ್ತಿದ್ದುದು. ಅಂತಹ ಒಂದು ಪ್ರಸಂಗದಲ್ಲಿ ನೀಡಿದ ಬೋಧನೆ ಇಲ್ಲಿದೆ: ಸಮುದ್ರದಲ್ಲಿ ಒಮ್ಮೆ ಮುಳುಗಿದಾಗ ಅಲ್ಲಿ ಮುತ್ತು ಸಿಗದೇ ಇದ್ದರೆ ಅಲ್ಲಿ ಮುತ್ತೇ ಇಲ್ಲವೆಂದು ತಿಳಿಯಬೇಡಿ. ಸಮುದ್ರದಲ್ಲಿ ಲೆಕ್ಕವಿಲ್ಲದಷ್ಟು ಮುತ್ತುಗಳು ಹುದುಗಿವೆ. ಸ್ವಲ್ಪ ಸಾಧನೆಯನ್ನು ಮಾಡಿದ ಮೇಲೆ ಫಲ ದೊರೆಯುವ […]

ಸೂರ್ಯನ ಮೋಹದ ಹೋಮಾ ಹಕ್ಕಿ

ಎತ್ತರದಲ್ಲಿರುವುದು ಎಂದರೆ ಅದೊಂದು ಬಹಳ ದೊಡ್ಡ ಜವಾಬ್ದಾರಿ. ಆ ಎತ್ತರದಲ್ಲಿ ಅಸ್ತಿತ್ವ ಕಾಯ್ದುಕೊಳ್ಳುತ್ತ ಒಂದಲ್ಲ ಒಂದು ಹಂತದಲ್ಲಿ ದಣಿವು ಆವರಿಸಿಕೊಳ್ಳಲೂಬಹುದು. ಈ ದಣಿವಿಗೆ ಕೈಸೋತಂತೆಲ್ಲ ಹೇಗೆ ಮತ್ತೆ ಛಲ ತುಂಬಿಕೊಂಡು ಮೇಲಕ್ಕೇರಬೇಕು ಎನ್ನುವುದನ್ನೂ ಸಂಕೇತಿಸುತ್ತದೆ ಈ ಹೋಮಾ ಹಕ್ಕಿ ~ಚೇತನಾ ತೀರ್ಥಹಳ್ಳಿ ವೇದ ಹಾಗೂ ಪುರಾಣಗಳಲ್ಲಿ `ಹೋಮಾ’ ಎಂಬ ಹಕ್ಕಿಯ ಉಲ್ಲೇಖವಿದೆ. ಈ ಹಕ್ಕಿ ಆಕಾಶದಲ್ಲಿ ಬಹಳ ಎತ್ತರದಲ್ಲಿ ಹಾರಾಡುತ್ತಲೇ ಇರುತ್ತದೆ. ಅಲ್ಲಿಯೇ ಮೊಟ್ಟೆಯನ್ನೂ ಇಡುತ್ತದೆ. ಅದು ಎಷ್ಟು ಎತ್ತರದಲ್ಲಿ ಹಾರುತ್ತ ಇರುತ್ತದೆ ಅಂದರೆ, ಹಕ್ಕಿ ಇಟ್ಟ […]