ವಿಶ್ವದೆಲ್ಲೆಡೆ ಮಾತೃದೇವತೆಯ ಪರಿಕಲ್ಪನೆ : ಜನನಿ ಮಾತ್ರವಲ್ಲ, ಮೃತ್ಯು ದೇವತೆ ಕೂಡಾ!

ಸಕಲ ಜೀವಿಗಳಲ್ಲಿ ಭಗವಂತನ  ಅಂಶ ತಾಯಿ ಭಾವದಲ್ಲಿ ನೆಲೆಸಿರುತ್ತದೆ. ಪುರುಷರಲ್ಲೂ ಕೂಡಾ ಅದು ಇರುತ್ತದೆ. ನಮ್ಮನಮ್ಮಲ್ಲಿನ ಮಾತೃಭಾವವನ್ನು ಜಾಗೃತಗೊಳಿಸಿಕೊಂಡರೆ, ಮಾತೃದೇವತೆಯ ಅನುಗ್ರಹ ಪಡೆಯುವುದು ಕೂಡ ಸುಲಭ. ಆದರೆ, ಆ ಭಾವ ಜಾಗೃತಿ, ಜೈವಿಕವಾಗಿ ತಾಯಿಯಾಗಬಲ್ಲ ಮಹಿಳೆಯರಿಗೂ ಕಷ್ಟ!  ~ ಗಾಯತ್ರಿ ಮಾತೃದೇವತೆಯ ಪರಿಕಲ್ಪನೆ ಮತ್ತು ಆರಾಧನೆ ಅತ್ಯಂತ ಪ್ರಾಚೀನವಾದವೆಂಬುದಕ್ಕೆ ಪ್ರಾಚೀನ ವಿಗ್ರಹಗಳು ಹಾಗೂ ವರ್ಣಚಿತ್ರಗಳು ಪುರಾವೆ ಒದಗಿಸುತ್ತವೆ. ಭಾರತ ಸೇರಿದಂತೆ ಪೂರ್ವ ಪಶ್ಚಿಮ ಎನ್ನದೆ ವಿಶ್ವಾದ್ಯಂತ ಮಾತೃದೇವತೆಗೆ ಪ್ರಾಧಾನ್ಯವಿತ್ತೆಂದು ಪುರಾಣ ಕಥನಗಳು ತಿಳಿಸುತ್ತವೆ. ಪಶ್ಚಿಮ ದೇಶಗಳಲ್ಲಂತೂ ಉತ್ಖನನದಲ್ಲಿ […]

ಜನಪದ ಹೆಣ್ಣಿನ ಪಂಚಮಿ ಹಾಡು : ನಾಗರ ಪಂಚಮಿ ವಿಶೇಷ

ಶಿವಪುತ್ರಿ, ನಾಗದೇವತೆ ಮಾನಸಾ ದೇವಿಯ ಪೂಜೆ ಎಂದು ಕೆಲವು ಕಡೆ; ಮಹಾಸರ್ಪ ಸಂಕರ್ಷಣನ ಗೌರವಕ್ಕೆ ಎಂದು ಕೆಲವು ಕಡೆ; ವಾಸುಕಿಯ ನೆನಪಿಗೆ ಎಂದು ಕೆಲವರು. ತಕ್ಷನ ನೆನಪಿಗೆ ಎಂದು ಕೆಲವರು… ಹೀಗೆ ಭಿನ್ನ ಕಥನಗಳು ಸಿಗುವುದುಂಟು. ಆತ್ಯಂತಿಕವಾಗಿ ಧರ್ಮ, ಆಧ್ಯಾತ್ಮ, ಜಾನಪದಗಳೆಲ್ಲ ಒಂದನ್ನೇ ಹೇಳುತ್ತಿದ್ದರೂ ಹೇಳುವ ಬಗೆ ಭಾವಗಳು ಬೇರೆ ಬೇರೆ. ಹಾವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಅಧ್ಯಾತ್ಮದಲ್ಲಿ ಅದು ಕುಂಡಲಿನಿ. ಅದು ಪ್ರಜ್ಞೆ. ಧರ್ಮದಲ್ಲಿ ಅದು ದೇವತೆ. ಜನಪದರ ಪಾಲಿಗೆ ಹಾವು ದೈನಂದಿನ ಬದುಕಿನ ಸಮತೋಲನ ಕೊಂಡಿ. […]

ಕೆಂಪು ಜುಟ್ಟಿನ ಹುಂಜ ಮತ್ತು ಅನಾಥ ಅಣ್ಣ ತಂಗಿ : ಒಂದು ರಷ್ಯನ್ ಕಥೆ

ಆಮೇಲೆ, ದಿನದಿನವೂ ಅಣ್ಣ ತಂಗಿ ಥರಥರಾವರಿ ತಿಂಡಿ ತಿನ್ನುತ್ತ ಸುಖವಾಗಿದ್ದರು ಅಂತ ಕಥೆ ಮುಗಿಸಿಬಿಡಬಹುದಿತ್ತು! ಆದರೆ ಹಾಗಾಗಲಿಲ್ಲ!! ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಅವರಿಬ್ಬರಿದ್ದರು; ಪುಟಾಣಿ ಅಣ್ಣ, ಪುಟ್ಟ ತಂಗಿ. ಇಬ್ಬರಂದರೆ, ಇಬ್ಬರೇ. ಪೂರಾ ಅನಾಥರು. ಹಾ! ಅವರ ಹತ್ತಿರ  ಕೆಂಪು ಜುಟ್ಟಿನ ಹುಂಜವೊಂದಿತ್ತು. ಅದೆಂದರೆ ಇಬ್ಬರಿಗೂ ಬಹಳ ಪ್ರೀತಿ. ಒಂದು ದಿನ ತಂಗಿಗೆ ವಿಪರೀತ ಹಸಿವಾಯ್ತು. ಮನೇಲಿ ತಿನ್ನಲಿಕ್ಕೆ ಏನೂ ಇಲ್ಲ! ಸರಿ. ಅಣ್ಣ ಮನೆಯ ಮೂಲೆಮೂಲೆ ಹುಡುಕಿದ. ಕಣಜದ ಬುಡದಲ್ಲೊಂದಷ್ಟು ಗೋಧಿಕಾಳು […]

ಬಸ್ಯ, ಸಿಂಗ ಮತ್ತು ಅಗಸನ ಕಲ್ಲು : ಒಂದು ಜನಪದ ಕಥೆ

ಒಂದೂರಲ್ಲಿ ಒಬ್ಬ ಅಗಸ ಇದ್ದ. ಅವನ ಹೆಸ್ರು ಬಸ್ಯ. ಅವನ ಸಂಗಾತಿ ಸಿಂಗ, ಅವನ ನೆಚ್ಚಿನ ಕತ್ತೆಯೇ ಆಗಿತ್ತು. ಯಾವಾಗ್ಲೂ ಬಸ್ಯನ ಹಿಂದೆ ಸಿಂಗ, ಸಿಂಗನ ಮುಂದೆ ಬಸ್ಯ ಇರ್ಲೇಬೇಕು. ಹಾಂಗಿತ್ತು ಅವರ ದೋಸ್ತಿ. ಒಂದಿನ ಬಸ್ಯ ಮತ್ತು ಸಿಂಗ ಅದೆಲ್ಲಿಗೂ ದೂರದೂರಿಗೆ ಹೊರಟ್ರು. ಹೋಗ್ತಾ ಹೋಗ್ತಾ ಕತ್ಲಾಯ್ತಾ, ಸರಿ. ಒಂದ್ ಮರದ್ ಕೆಳಗೆ ಅಡ್ಡಾದ್ರು. ಸಿಂಗ ತನ್ ಯಜಮಾನನ್ನ “ಒಂದ್ ಕಥೆ ಹೇಳು…. ಒಂದ್ ಕಥೆ ಹೇಳು” ಅಂತ ಪೀಡಿಸ್ದ. ಆದ್ರೆ ಅಗಸಂಗೆ ಅದಾಗ್ಲೇ ಕಣ್ಣು […]

ಸಮುದ್ರವನ್ನು ಸರಿಸಿ ದ್ವೀಪವನ್ನು ಬಿಡಿಸಿ, ಸಂಸಾರ ನಡೆಸಿದ ದೇವ ದಂಪತಿ : ಸೃಷ್ಟಿಕಥನಗಳು #3

ಶಿಂಟೋ, ಜಪಾನ್ ದೇಶದ ಪ್ರಾಚೀನ ಧರ್ಮ. ಇದೊಂದು ಜನಪದವೂ ಹೌದು. ಶಿಂಟೋ ಸೃಷ್ಟಿ ಕಥನಗಳು ಕಮಿ ಎಂದು ಕರೆಯುವ ದೇವತೆಗಳ ಜೋಡಿಯು ಭೂಮಿಗೆ ಬಂದು ಸಂಸಾರ ಹೂಡಿ ಸೃಷ್ಟಿ ಕಾರ್ಯ ನಡೆಸಿದರೆಂದು ಹೇಳುತ್ತವೆ. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಸೃಷ್ಟಿಗೂ ಮೊದಲು ಖಾಲಿ ಅವಕಾಶದಲ್ಲೊಂದು ದೊಡ್ಡ ಮೊಟ್ಟೆ ಇತ್ತು. ಅದರ ಕೆಳಗಿನ ಅರ್ಧದಲ್ಲಿ ಕ್ರಿಮಿ ಕೀಟಗಳೂ, ಕೆಸರೂ ತುಂಬಿಕೊಂಡಿದ್ದವು. ಮೇಲಿನ ಅರ್ಧದಲ್ಲಿ ಸ್ವಚ್ಛ ಮತ್ತು ಘಮಲಿನಿಂದ ಕೂಡಿದ ದ್ರವವಿತ್ತು. ಈ ಮೊಟ್ಟೆಯು ಬಿರಿದು ಎರಡು […]

ಎರೆಹುಳ ನುಂಗಿ ಹೊರಹಾಕಿದ ಮಣ್ಣು ನೆಲವಾಯ್ತು, ಹಂಸದ ಹೊಟ್ಟೆಯಲ್ಲಿ ಮನುಷ್ಯರು ಹುಟ್ಟಿದರು : ಸೃಷ್ಟಿಕಥನಗಳು #1

ವಿಜ್ಞಾನದ ವಿವರಣೆಯಂತೂ ಸರಿ; ಧರ್ಮಗ್ರಂಥಗಳು, ಶಾಸ್ತ್ರಗ್ರಂಥಗಳು ಹೇಳುವ ಸೃಷ್ಟಿ ಕಥನಗಳಾಚೆ ನೂರಾರು ಸ್ವಾರಸ್ಯಕರ, ಕುತೂಹಲಭರಿತ ಸೃಷ್ಟಿಗಾಥೆಗಳಿವೆ. ಜನಪದ ಕಥೆ, ಕಾವ್ಯಗಳ ರೂಪದಲ್ಲಿ ಮೌಖಿಕವಾಗಿ ತಲೆಮಾರುಗಳಿಂದ ಹರಿದುಬಂದ ಈ ಕಥನಗಳು ನಮಗೆ ಆಯಾ ಸಮುದಾಯದ ನಂಬಿಕೆ, ಪ್ರಾಮುಖ್ಯತೆ, ಭೌಗೋಳಿಕ  ವಿವರಗಳೇ ಮೊದಲಾದ ತಿಳಿವನ್ನೂ ನೀಡುತ್ತವೆ. ಆದ್ದರಿಂದಲೇ ‘ಅರಳಿ ಬಳಗ’ ಸೃಷ್ಟಿಕಥನಗಳ ಸರಣಿಯನ್ನು ಆರಂಭಿಸುತ್ತಿದೆ. ಹಲವು ಆಕರಗಳಿಂದ ಸಂಗ್ರಹಿಸಿದ ಕಥನಗಳನ್ನು ಒಂದು ಚೌಕಟ್ಟಿನಲ್ಲಿ ಕೂರಿಸಿ ಅನುವಾದ ಮಾಡಲಾಗಿದೆ. ಈ ಸರಣಿ ನಿಮಗೆ ಇಷ್ಟವಾಗಲೆಂಬ ಆಶಯ ನಮ್ಮದು | ಅರಳಿ ಬಳಗ  ಸಂತಾಲಿ […]