ಜಪ, ಭಗವಂತನನ್ನು ನೆನೆಯುವ ಸುಂದರವಾದ ಸಾಧನ. ಜಪ ನಮ್ಮ ಮನಸ್ಸನ್ನು ತೈಲಧಾರೆಯಂತೆ ಜಗನ್ನಿಯಾಮಕ ಶಕ್ತಿಯಲ್ಲಿ ನೆಲೆಯಾಗಿರಿಸುತ್ತದೆ. ಇಂಥಾ ಜಪದ ಬಗ್ಗೆ ಮತ್ತು ಜಪವಿಧಾನಗಳ ಬಗ್ಗೆ ಸನಾತನ ಶಾಸ್ತ್ರಗಳು ಏನು ಹೇಳುತ್ತವೆ? ಇಲ್ಲಿ ನೋಡಿ…
ನಾನು ಎಂಬ ಚಿಂತನೆ : ರಮಣ ವಿಚಾರ ಧಾರೆ
ಭಗವಂತನಿಗೆಷ್ಟು ಕೋಪ ಬಂದಿರಬೇಕು! : ಒಂದು ದೃಷ್ಟಾಂತ ಕಥೆ
ಒಂದು ಆಶ್ರಮದಲ್ಲಿ ಸಂನ್ಯಾಸಿಯೊಬ್ಬ ಬಹಳ ಕಟ್ಟುನಿಟ್ಟಿನಿಂದ ಜಪಾದಿಗಳನ್ನು ಮಾಡುತ್ತಿದ್ದ. ಪ್ರತಿ ದಿನವೂ ನಿರ್ದಿಷ್ಟ ಸಮಯದಲ್ಲಿ ಜಪಮಾಲೆ ತಿರುಗಿಸುತ್ತ ನಿರ್ದಿಷ್ಟ ಸಂಖ್ಯೆಯ ಜಪ ಮಾಡುತ್ತಿದ್ದ. ಹತ್ತು ವರ್ಷ ಇಷ್ಟು ನಿಷ್ಠೆಯಿಂದ ಸಾಧನೆ ಮಾಡಿದರೂ ಅವನಲ್ಲಿ ಯಾವ ಪರಿವರ್ತನೆಯೂ ಆಗಲಿಲ್ಲ. ಎಲ್ಲರೊಡನೆಯೂ ಜಗಳ ಕಾಯುತ್ತಿದ್ದ. ಕೊಟ್ಟ ಕೆಲಸ ಸರಿಯಾಗಿ ಮಾಡುತ್ತಿರಲಿಲ್ಲ. ವಿಪರೀತ ಸಿಡುಕು ಸ್ವಭಾವ. ಒಂದು ದಿನ ಅವನಿಗೆ ಬುದ್ಧಿ ಕಲಿಸಬೇಕೆಂದು ಇನ್ನೊಬ್ಬ ಸಂನ್ಯಾಸಿ ನಿರ್ಧರಿಸಿದ. ಈತ ಕೋಣೆಯ ಬಾಗಿಲು ಮುಚ್ಚಿ, ಚಿಲಕ ಹಾಕಿಕೊಂಡು ಜಪಕ್ಕೆ ಕುಳಿತ. ಅದೇ ವೇಳೆಗೆ ಆ […]