ಶ್ರೀ ಗುರುರಾಯರ ಜಯಂತಿ : ಕೆಲವು ಚಿತ್ರ ಮಾಹಿತಿ

ಗುರು ರಾಘವೇಂದ್ರ ಸ್ವಾಮಿಗಳು ಆಧುನಿಕ ಕಾಲಮಾನದಲ್ಲಿ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಆಚಾರ್ಯರಾಗಿದ್ದಾರೆ. ಜಾತಿಮತ ಭೇದವಿಲ್ಲದೆ ಎಲ್ಲ ಬಗೆಯ ಭಕ್ತರೂ ಮಂತ್ರಾಲಯದಲ್ಲಿರುವ ರಾಯರ ಸನ್ನಿಧಿಗೆ ತೆರಳಿ ಪೂಜೆ – ಪ್ರಾರ್ಥನೆ ಸಲ್ಲಿಸುತ್ತಾರೆ. ಆದ್ದರಿಂದಲೇ ಗುರು ರಾಯರನ್ನು ‘ಕಲಿಯುಗದ ಕಾಮಧೇನು’ ಎಂದೂ ಕರೆಯಲಾಗುತ್ತದೆ.  ಇಂದು ರಾಘವೇಂದ್ರ ಸ್ವಾಮಿಗಳ ಜಯಂತಿ. ಈ ನಿಮಿತ್ತ ರಾಯರ ಕಿರು ಪರಿಚಯ ಮಾಡಿಸುವ ಚಿತ್ರಿಕೆಗಳು ಇಲ್ಲಿವೆ: ಪೂರ್ವಾಶ್ರಮ ಗುರು ಪರಂಪರೆ ಅವತಾರ ಪವಾಡಗಳು   ಕೃತಿಗಳು ಗುರು ರಾಯರು ರಚಿಸಿದ ಕೃತಿಗಳ ಸಂಖ್ಯೆ […]

ಶಿವಾಜಿ ಮಹಾರಾಜರನ್ನು ನಾವು ಮರೆತುಬಿಟ್ಟಿದ್ದೇವೆಯೆ?

ಫೆಬ್ರವರಿ 19, ಈ ಅಪ್ರತಿಮ ವ್ಯಕ್ತಿತ್ವದ ಜನ್ಮದಿನ.  ಶಿವಾಜಿ ಬಹಿರಂತರಂಗ ಯುದ್ಧಗಳೆರಡರಲ್ಲೂ ಹೋರಾಟ ನಡೆಸಿದವರು.  ಕ್ಷಾತ್ರ ತೇಜ ಮಾತ್ರವಲ್ಲ, ಆಧ್ಯಾತ್ಮಿಕ ಸಾಧನೆ – ಶ್ರದ್ಧೆಯಲ್ಲೂ ಉನ್ನತಿ ಸಾಧಿಸಿದ್ದ ಶಿವಾಜಿ ಪರಿಪಕ್ವತೆಗೊಂದು ಸಾರ್ವಕಾಲಿಕ ನಿದರ್ಶನ. ಈ ನಿಟ್ಟಿನಲ್ಲಿ ನಾವು ಶಿವ್ ಬಾ ಅವರನ್ನು ನೆನೆಯಬೇಕಲ್ಲವೆ?

ಸರ್ವಧರ್ಮಸ್ವರೂಪಿ ಶ್ರೀ ರಾಮಕೃಷ್ಣ ಪರಮಹಂಸ

ಈ ಆಧುನಿಕ ಯುಗಕ್ಕೆ ಬೇಕಾದ ಸಮನ್ವಯ ಧರ್ಮವನ್ನು ರಾಮಕೃಷ್ಣ ಪರಮಹಂಸರು ಸ್ಥಾಪಿಸಿದರು. ಅದು ಏಕಕಾಲಕ್ಕೆ ಎಲ್ಲ ಧರ್ಮಗಳನ್ನೂ ಒಳಗೊಂಡ ಮತ್ತು ಎಲ್ಲದರಿಂದಲೂ ಹೊರತಾದ ವಿಶ್ವ ಧರ್ಮ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಪರಮಹಂಸರನ್ನು ‘ಸ್ಥಾಪಕಾಯ ಚ ಧರ್ಮಸ್ಯ’ ಎಂದು ಸ್ತುತಿಸಿರುವುದು. ಶ್ರೀರಾಮಕೃಷ್ಣರು ಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ. ಯಾವುದನ್ನೂ ಅವರು ಅಲ್ಲಗಳೆಯಲಿಲ್ಲ. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ಎಲ್ಲ ಧರ್ಮಗಳ ಹಿಂದೆ ಇರುವುದೊಂದೇ ಸತ್ಯ ಎಂಬುದನ್ನು […]

ವಿಶ್ವದಭಿರಾಮ ಕೇಳು ವೇಮ! : ಇಂದು ವೇಮನ ಜಯಂತಿ

ಇಂದು 15ನೇ ಶತಮಾನದಲ್ಲಿ ಜೀವಿಸಿದ್ದ (ಜ.19) ಮಹಾಯೋಗಿ ವೇಮನ ಜಯಂತಿ. ಯೌವನದ ಆರಂಭದ ದಿನಗಳಲ್ಲಿ ಸ್ವೇಚ್ಛಾಜೀವನ ನಡೆಸುತ್ತಿದ್ದ ವೇಮನ, ಜ್ಞಾನೋದಯ ಪಡೆದು ದಾರ್ಶನಿಕ ಕವಿಯೂ ಅನುಭಾವಿಯೂ ಆಗಿ ರೂಪುಗೊಂಡರೆಂದು ಐತಿಹ್ಯವಿದೆ. ಯೋಗಿ ವೇಮನ, ವಚನಗಳ ಮೂಲಕ ತನ್ನ ಕಾಣ್ಕೆಗಳನ್ನು ಲೋಕಕ್ಕೆ ಹಂಚಿದ್ದು, ಈ ವಚನಗಳು ಇಂದಿಗೂ ಪ್ರಸ್ತುತವಾಗಿವೆ.  ವೇಮನನ ಜನಿಸಿದ್ದು ೧೬೫೨ ರಲ್ಲಿ. ಶ್ರೀಮಂತ ಕುಟುಂಬದಲ್ಲಿ ಈತನ ಜನನವಾಯಿತು. ಅವನ ಹುಟ್ಟೂರು ಮೂಗಚಿಂತ ಪಲ್ಲೆಯಾದರೂ ಬೆಳೆದಿದ್ದು ಕೊಂಡವೀಡುವಿನಲ್ಲಿ. ಬಾಲ್ಯದಿಂದಲೂ ಸುಖದಲ್ಲಿ ಬೆಳೆದ ವೇಮನ ಕೊನೆಗಾಲದಲ್ಲಿ ಬೈರಾಗಿಯಾಗಿ ಅಲೆದಾಡುವವರೆಗಿನ […]

ಸ್ತ್ರೀಶಕ್ತಿಯ ಮೂರ್ತ ರೂಪ : ಶ್ರೀಮಾತೆ ಶಾರದಾ ದೇವಿ

ಇಂದು (ಡಿ.22) ಶ್ರೀಮಾತೆ ಶಾರದಾದೇವಿಯವರ ಜಯಂತಿ. ಭಾರತದ ಆಧುನಿಕ ಆಧ್ಯಾತ್ಮಿಕ ಯುಗದ ಪ್ರೇರಕ ಶಕ್ತಿಯಾಗಿ, ಒಂದು ಪರಂಪರೆಗೆ ಮಾರ್ಗದರ್ಶನ ನೀಡಿ ಮುನ್ನಡೆಸಿದ ಧೀಮಂತ ಶಕ್ತಿ, ಶ್ರೀಮಾತೆ.  ~ ಚೇತನಾ ತೀರ್ಥಹಳ್ಳಿ ಪವಿತ್ರಂ ಚರಿತಂ ಯಸ್ಯಾಃ ಪವಿತ್ರಂ ಜೀವನಂ ತಥಾ | ಪವಿತ್ರತಾ ಸ್ವರೂಪಿಣ್ಯೈ ತಸ್ಯೈ ಕುರ್ಮೋ ನಮೋನ್ನಮಃ – ಯಾರು ಪವಿತ್ರವಾದ ಚಾರಿತ್ರ್ಯವನ್ನು ಹೊಂದಿರುವಳೋ ಪವಿತ್ರವಾದ ಜೀವನವನ್ನು ನಡೆಸಿರುವಳೋ ಸ್ವತಃ ಪಾವಿತ್ರ್ಯವೇ ಆಗಿದ್ದಾಳೆಯೋ ಆಕೆಗೆ ಶಿರಬಾಗಿ ನಮಿಸೋಣ… ಶ್ರೀಮಾತೆ ಶಾರದಾ ದೇವಿ ಎಂದ ಕೂಡಲೆ ಕಣ್ಮುಂದೆ ಹಾಯುವುದು ಅವರ […]

ಅರಿವು ಹದ ಬೆರೆತ ಭಕ್ತ ಶ್ರೇಷ್ಠ : ಕನಕ ದಾಸರು

ಕನಕದಾಸರ ಬಗ್ಗೆ ನಾವು ಬಹುವಾಗಿ ಕೇಳಿರುವ ಕಥೆಗಳು ಮೂರು. ಮೊದಲನೆಯದು, ‘ದೇವರು ಇಲ್ಲದೆ ಇರುವಲ್ಲಿ ಬಾಳೆಹಣ್ಣು ತಿನ್ನುವ’ ಕಥೆ. ಎರಡನೆಯದು, ‘ಕೋಣ .. ಕೋಣ.. ಎಂದು ಜಪಿಸಿ ಕೋಣವೇ ಪ್ರತ್ಯಕ್ಷವಾದ ಕಥೆ. ಮತ್ತು ಮೂರನೆಯದು, ಸಾಕ್ಷಾತ್ ಉಡುಪಿ ಕೃಷ್ಣ ತಿರುಗಿ ದರ್ಶನ ನೀಡಿದ ಕಥೆ. ಸೂಕ್ಷ್ಮವಾಗಿ ಗಮನಿಸಿದರೆ, ಈ ಮೂರೂ ಕಥೆಗಳು ಒಂದಕ್ಕೊಂದು ಸಂಬಂಧ ಹೊಂದಿವೆ ~ ಆನಂದಪೂರ್ಣ ‘ಬಾಡ’ದ ತಿಮ್ಮಪ್ಪ ನಾಯಕ ಕಾಗಿನೆಲೆಯ ಕನಕದಾಸರಾದ ಕತೆ ನಮಗೆಲ್ಲ ತಿಳಿದಿದೆ. ದಾಸಶ್ರೇಷ್ಠ, ಉತ್ತಮ ಕವಿ, ಕರ್ನಾಟಕ ಸಂಗೀತಕ್ಕೆ ಮಹತ್ವದ ಕಾಣಿಕೆಯನ್ನಿತ್ತ […]

ಶ್ರದ್ಧಾಪ್ರೇಮದ ಅಪ್ರತಿಮ ಜ್ಞಾನಿ : ಗುರು ನಾನಕ್

‘ಇಕ್ ಓಂಕಾರ್ ಸತ್ ನಾಮ್’ – ಓಂಕಾರವೊಂದೇ ಸತ್ಯ ಎಂದು ಘೋಷಿಸಿದ ಗುರುನಾನಕ್ ಅಪ್ರತಿಮ ಜ್ಞಾನಿ. ಶ್ರದ್ಧಾಪ್ರೇಮದ ಸಾಕಾರ ಮೂರ್ತಿ. ಜ್ಞಾನ ಭಕ್ತಿಗಳ ಅಪರೂಪದ ಸಂಗಮ. ಸಿಕ್ಖ್ ಮತದ ಸ್ಥಾಪಕರೂ ಆದ ಗುರು ನಾನಕ್ ಜನಿಸಿದ ದಿನ ಇಂದು ~ ಗಾಯತ್ರಿ ಒಂದೂರಿನಲ್ಲಿ ಒಬ್ಬ ಬಾಲಕ. ಅವನು ವ್ಯವಹಾರ ಜ್ಞಾನ ಕಲಿಯಲೆಂದು ತಂದೆ ಶಾಲೆಗೆ ಸೇರಿಸಿದರು. ಅವನು ತಪ್ಪಿಸಿಕೊಂಡು ಕಾಡು ಸೇರುತ್ತಿದ್ದ, ಭಗವಂತನನ್ನು ಧ್ಯಾನಿಸುತ್ತಾ ಕುಳಿತುಬಿಡುತ್ತಿದ್ದ. ಒಮ್ಮೆ ಅದೇ ಊರಿನ ವೃದ್ಧನೊಬ್ಬ ತೀರ್ಥಯಾತ್ರೆ ಹೊರಟ. ತನ್ನ ಗದ್ದೆ […]

ಆದಿ ಕವಿ, ದಾರ್ಶನಿಕ ಋಷಿ : ವಾಲ್ಮೀಕಿ ಜಯಂತಿ

ವಿಷ್ಣು ಧರ್ಮೋತ್ತರ ಪುರಾಣವು ವಾಲ್ಮೀಕಿಯನ್ನು ವಿಷ್ಣುವಿನ ಅಂಶಾವತಾರವೆಂದೂ, ರಾಮನ ಕಾರ್ಯ ಸಾಧನೆಯ ಕಥನವನ್ನು ಹಬ್ಬಲಿಕ್ಕಾಗಿಯೇ ತ್ರೇತಾ ಯುಗದಲ್ಲಿ ಅವತರಿಸಿದರೆಂದೂ ಹೇಳುತ್ತದೆ. ಜ್ಞಾನಾರ್ಜನಾಕಾಂಕ್ಷಿಗಳು ಫಲಪ್ರಾಪ್ತಿಗಾಗಿ ವಾಲ್ಮೀಕಿಯನ್ನು ಆರಾಧಿಸಬೇಕೆಂದು ಈ ಪುರಾಣವು ನಿರ್ದೇಶಿಸುತ್ತದೆ ~ ಸಾ.ಹಿರಣ್ಮಯಿ ತಮಸಾ ನದಿಯ ತೀರ. ಸಂಧ್ಯಾವಂದನೆಗೆಂದು ವಯೋವೃದ್ಧ ಮುನಿಗಳೊಬ್ಬರು ಏಕಾಂಗಿ ತೆರಳಿರುತ್ತಾರೆ. ಗಾಢಾರಣ್ಯದ ನೀರವತೆಯೇ ಆ ವಾತಾವರಣಕ್ಕೊಂದು ದೈವೀಕಳೆ ಒದಗಿಸಿರುತ್ತದೆ. ಅಲ್ಲಲ್ಲಿ ಹಕ್ಕಿಗಳ ಕಲರವ. ನೆಮ್ಮದಿಯಿಂದ ಓಡಾಡಿಕೊಂಡಿರುವ ಜಿಂಕೆ – ಚಿಗರೆಗಳ ಚಿನ್ನಾಟ. ಇವುಗಳನ್ನೆಲ್ಲ ನೋಡುತ್ತ ಮಂದಸ್ಮಿತರಾಗಿ ಸಾಗುತ್ತಾರೆ ಮುನಿಗಳು. ತಮಸಾ ನದಿಯ ಪಕ್ಕದಲ್ಲೇ […]

ಗಾಂಧಿ ಅಂದರೆ ‘ಸ್ವರ್ಗದ ನಾಜೂಕು ಹನಿ’

ಗಾಂಧಿ ಸದಾ ನಮ್ಮಲ್ಲಿ ಜಾಗೃತವಾಗಿರಬೇಕಾದ ಪ್ರಜ್ಞೆ. ಗಾಂಧೀಜಿ ಕುರಿತು ನಮ್ಮ ಜನರ ಅಭಿಪ್ರಾಯಗಳನ್ನು ನಾವು ಬಲ್ಲೆವು. ಜಗತ್ತೇ ನಿಬ್ಬೆರಗಾಗಿ ನೋಡಿದ ಈ ಆಧುನಿಕ ಸಂತನ ಕುರಿತು ವಿದೇಶೀಯರು ಏನು ಹೇಳಿದ್ದಾರೆ ಅನ್ನುವುದನ್ನೂ ನಾವು ಅರಿಯಬೇಕು. ಈ ನಿಟ್ಟಿನಲ್ಲಿ ಗಾಂಧೀಜಿ ಕುರಿತು ಡಾ.ಹೇಯ್ನೆಸ್ ನೀಡಿದ್ದ ಉಪನ್ಯಾಸವನ್ನು ಇಲ್ಲಿ ನೀಡಿದ್ದೇವೆ. ಮೂಲ : ರೆ. ಡಾ. ಜಾನ್ ಹೇಯ್ನೆಸ್ ಹೋಮ್ಸ್ | ಅನುವಾದ: ಚೇತನಾ ತೀರ್ಥಹಳ್ಳಿ ಇಂದು ಬೆಳಗ್ಗೆ ನಾನು ಭಾರತದ ಮಹಾತ್ಮಾ ಗಾಂಧಿ ಮತ್ತು ಅವರು ಕೈಗೊಂಡಿರುವ ಕಾರ್ಯದ […]

ಬಸವ ವಚನ ವಾಚನ : ಬಸವಣ್ಣನವರ ವಚನಗಳ ಪ್ರಸ್ತುತಿ

ಸ್ವಸ್ಥ ಬೆಳಗಿನ ಆರಂಭಕ್ಕೆ, ಬಸವಣ್ಣನವರ ಕೆಲವು ವಚನಗಳು…. ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು! ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ !? ~ ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ ಬಡವನಯ್ಯ! ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ… ಕೂಡಲಸಂಗಮದೇವ ಕೇಳಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ! ~ ಎನ್ನ ನಡೆಯೊಂದು ಪರಿ  ಎನ್ನ ನುಡಿಯೊಂದು ಪರಿ  ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ  ನುಡಿಗೆ ತಕ್ಕ ನಡೆಯ […]