ದುಃಖ ಹೇಗೆ ಹುಟ್ಟುತ್ತದೆ? ಅದನ್ನು ಹೋಗಲಾಡಿಸುವುದು ಹೇಗೆ!?

ನಮ್ಮ ದುಃಖಕ್ಕೆ ನಾವೇ ಕಾರಣ. ನಾವೇ ಉಂಟುಮಾಡಿಕೊಂಡ  ದುಃಖದಿಂದ ಹೊರಬರಬೇಕೆಂದರೆ, ಶಾಶ್ವತದ ಹಂಬಲವನ್ನು ಬಿಟ್ಟುಬಿಡಬೇಕು. ನಮ್ಮ ನಮ್ಮ ಬದುಕಿನ ಶಾಶ್ವತದ ಪರಿಕಲ್ಪನೆಗಳು ನಮ್ಮ ಆಯಸ್ಸಿನವರೆಗೆ ಇರುತ್ತವೆ. ನಾವು ಬದುಕಿರುವಷ್ಟೂ ಕಾಲ ನಾವು ಬಯಸಿದ್ದೆಲ್ಲಾ ಜೊತೆಗಿರಬೇಕು ಅನ್ನುವ ಬಯಕೆಯೇ ದುಃಖಕ್ಕೆ ಮೂಲವಾಗುತ್ತದೆ.  ~ ಸಾ. ಹಿರಣ್ಮಯಿ ದುಃಖ ಹೇಗೆ ಹುಟ್ಟುತ್ತದೆ? ತಾತ್ಕಾಲಿಕ ಸಂಗತಿಗಳು ಶಾಶ್ವತವಾಗಿರಲೆಂದು ನೀವು ನಿರೀಕ್ಷಿಸಿದಾಗ ದುಃಖ ಹುಟ್ಟುತ್ತದೆ. ನಾವು ಬಯಸುವ ವಸ್ತು, ವ್ಯಕ್ತಿಗಳನ್ನು ಶಾಶ್ವತವಾಗಿ ಉಳಿಸಿಕೊಳ್ಳುತ್ತೇನೆ ಎಂಬ ಭ್ರಮೆಯು ದುಃಖಕ್ಕೆ ದಾರಿಯಾಗುತ್ತದೆ. ವಯಸ್ಸಾದಂತೆಲ್ಲ ನಮ್ಮ ರೂಪ, ಸೌಂದರ್ಯ, […]

ಇಬ್ನ್ ಅರಬಿ ಹೇಳಿದ್ದು : ಅರಳಿಮರ POSTER

“ಭಗವಂತನು ಕಲ್ಲಿನಲ್ಲಿ ನಿದ್ರಿಸುತ್ತಾನೆ, ಸಸ್ಯಗಳಲ್ಲಿ ಕನಸುತ್ತಾನೆ, ಪ್ರಾಣಿಗಳಲ್ಲಿ ಮಿಸುಕಾಡುತ್ತಾನೆ ಮತ್ತು ಮನುಷ್ಯನಲ್ಲಿ ಎಚ್ಚರಾಗುತ್ತಾನೆ” ಅನ್ನುತ್ತಾನೆ ಸೂಫಿ ಇಬ್ನ್ ಅರಬಿ.  ಸೃಷ್ಟಿಯ ಪ್ರತಿಯೊಂದು ಜಡ – ಚಲನಶೀಲ ವಸ್ತುವಿನಲ್ಲೂ ಪರಮ ಅಸ್ತಿತ್ವದ ಚೈತನ್ಯವಿರುತ್ತದೆ. ಅದು ಯಾವ ವಸ್ತುವನ್ನು ಎಷ್ಟು ಪ್ರಮಾಣದಲ್ಲಿ ಆವರಿಸಿಕೊಂಡಿರುತ್ತದೆ ಅನ್ನುವುದರ ಮೇಲೆ ಆಯಾ ವಸ್ತುವಿನ ವಿಕಸನ ನಿರ್ಧಾರಗೊಳ್ಳುತ್ತದೆ ಅನ್ನುವುದು ಇಬ್ನ್ ಅರಬಿಯ ಹೇಳಿಕೆಯ ವಿಸ್ತೃತಾರ್ಥ.