ದೋಷ ಆತ್ಮಕ್ಕಲ್ಲ, ಅಹಂಭಾವಕ್ಕೆ… | ರಮಣರ ಜೊತೆ ಮಾತುಕತೆ ~ ಭಾಗ 6

ನವೆಂಬರ್ 17, 1936ರಂದು ರಮಣ ಮಹರ್ಷಿಗಳು ತಮ್ಮ ಶಿಷ್ಯರೊಬ್ಬರ ಪ್ರಶ್ನೆಗಳಿಗೆ ಉತ್ತರಿಸಿದ ಚುಟುಕು ಸಂಭಾಷಣೆ ಇಲ್ಲಿದೆ : ಶಿಷ್ಯ : ಮನುಷ್ಯನು ‘ಜಿತಸಂಗದೋಷ’ನಾಗುವುದು ಹೇಗೆ? ರಮಣ ಮಹರ್ಷಿ: ಸತ್ಸಂಗದಿಂದ. “ಸತ್ಸಂಗತ್ವೇ ನಿಸ್ಸಂಗತ್ವಂ, ನಿಸ್ಸಂಗತ್ವೇ ನಿರ್ಮೋಹತ್ವಂ, ನಿರ್ಮೋಹತ್ವೇ ನಿಶ್ಚಲ ತತ್ತ್ವಂ, ನಿಶ್ಚಲತತ್ತ್ವೇ ಜೀವನ್ಮುಕ್ತಿಃ” ಸತ್ಸಂಗವೆಂದರೆ ಸತ್’ನೊಡನೆ ಸಹವಾಸ. ‘ಸತ್’ ಎಂದರೆ ಆತ್ಮವೆಂದೇ. ಆದರೆ ಈಗ, ಆತ್ಮವೆಂದರೆ ‘ಸತ್’ ಎಂದು ತಿಳಿದಿರುವುದರಿಂದ, ಹಾಗೆ ಯಾರಿಗೆ ತಿಳಿದಿದೆಯೋ ಅಂತಹ ಸಂತನ ಸಹವಾಸವನ್ನು ಮಾಡಬೇಕು. ಅದೇ ಸತ್ಸಂಗ. ಅಂತಹ ಸತ್ಸಂಗದಿಂದ ಅಂತರ್ಮುಖತೆ ಸಿದ್ಧಿಸುತ್ತದೆ. […]