ನಿಮ್ಮ ಆಯ್ಕೆಯ ಬಣ್ಣ ಯಾವುದು ತಿಳಿಸಿ… ನಿಮ್ಮ ಗುಣವನ್ನು ಹೇಳುತ್ತೇವೆ!!

ಕೆಲವರಿಗೆ ಕೆಲವು ಬಣ್ಣ ಇಷ್ಟವಾಗುವುದೇ ಇಲ್ಲ. ಮತ್ತೆ ಕೆಲವರಿಗೆ ಕೆಲವು ಬಣ್ಣಗಳು ಬಹಳ ಇಷ್ಟ. ಹಲವು ಬಣ್ಣಗಳು ನಮಗೆ ಖುಷಿ ಕೊಟ್ಟರೂ ‘ನಮ್ಮ ಮೊದಲ ಮತ್ತು ಕೊನೆಯ ಆಯ್ಕೆ’ ಎಂಬುದೊಂದು ಇದ್ದೇ ಇರುತ್ತದೆ. ವಿಶೇಷವಾಗಿ ಹೆಣ್ಣುಮಕ್ಕಳು ತಮ್ಮ ಕ್ಲೋಸೆಟ್ ತೆಗೆದು ನೋಡಿದರೆ, ತಮಗೇ ಅರಿವಿಲ್ಲದಂತೆ ತಮಗಿಷ್ಟದ ಬಣ್ಣದ ಬಟ್ಟೆಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದನ್ನು ನೋಡಬಹುದು. ನಮಗೆ ನಿರ್ದಿಷ್ಟ ಬಣ್ಣವು ಇಷ್ಟವಾಗಲು ಕಾರಣವೇನು? ನಮ್ಮ ಬಣ್ಣದ ಆಯ್ಕೆ ನಮ್ಮ ಯಾವ ಗುಣವನ್ನು ತೋರುತ್ತದೆ? ಇಲ್ಲಿದೆ, ಭಾವಕ್ಕೆ ತಕ್ಕಂತೆ ಬಣ್ಣಗಳ ಚುಟುಕು […]

ಮನಸ್ಸನ್ನು ಓದುವ ಮಂಡಲಗಳು : ಯಾವ ಮಂಡಲ ಏನು ಹೇಳುತ್ತದೆ?

ಚಿತ್ರಗಳು, ಬಣ್ಣಗಳು, ಜ್ಯಾಮಿತಿ ಆಕಾರಗಳು – ಇವೆಲ್ಲವನ್ನು ಮಾನಸಿಕತೆಯ ಅಧ್ಯಯನಕ್ಕೆ, ಥೆರಪಿಗೆ ಬಳಸುವುದು ಪ್ರಾಚೀನ ಪದ್ಧತಿ. ಈಗ ಇದು ಪರ್ಸನಾಲಿಟಿ ಡೆವಲಪ್ಮೆಂಟ್ ಹಾಗೂ ಲೈಫ್ ಸ್ಟೈಲ್ ತರಗತಿಗಳಲ್ಲಿ ಸಾಮಾನ್ಯ. ಇವು ಮೂಢ ನಂಬಿಕೆಗಳಲ್ಲ. ಇವು ನಮ್ಮ ಇಷ್ಟಾನಿಷ್ಟಗಳು ನಮ್ಮ ಮಾನಸಿಕತೆಯ ಪ್ರತಿನಿಧಿಗಳೇ ಆಗಿರುವುದರಿಂದ, ಅದರ ಆಧಾರದ ಮೇಲೆ ನಡೆಸುವ ಮನೋವೈಜ್ಞಾನಿಕ ವಿಶ್ಲೇಷಣೆ. ಈಗಾಗಲೇ ಅರಳಿಮರ ಇಂತಹ ಕೆಲವು ಲೇಖನಗಳನ್ನು ಪ್ರಕಟಿಸಿದ್ದು, ಈ ಸರಣಿಯಲ್ಲಿ ‘ಮಂಡಲ’ಗಳು ನಮ್ಮ ಮನಸ್ಸು ಬಿಚ್ಚಿಡುವ ಕೆಲವು ಹೊಳಹುಗಳನ್ನು ನೀಡಿದ್ದೇವೆ.  ಈ ಮೂರು ಮಂಡಲಗಳನ್ನು […]

ಮಿನಿ ಧ್ಯಾನ ವಿಧಾನ : ಮೂರು ಬಗೆಗಳು

ಜೀವನ ಶೈಲಿಯನ್ನು ಉತ್ತಮಪಡಿಸಲೆಂದೇ ಹಲವು ಬಗೆಯ ಧ್ಯಾನಗಳನ್ನು ರೂಪಿಸಲಾಗಿದೆ. ಈ ಸಂಚಿಕೆಯಲ್ಲಿ, ಕಡಿಮೆ ಅವಧಿಯಲ್ಲಿ ಯಾವ ಪೂರ್ವಸಿದ್ಧತೆಯನ್ನೂ ಬಯಸದ ‘ಮಿನಿ ಧ್ಯಾನ’ ಬಗೆಗಳನ್ನು ಈ ಸರಣಿಯಲ್ಲಿ ಪರಿಚಯಿಸಲಿದ್ದೇವೆ  ~ ಚಿತ್ಕಲಾ ಧ್ಯಾನ ಮೂಲತಃ ಆಧ್ಯಾತ್ಮಿಕ ಸಂಗತಿಯಾಗಿದ್ದರೂ ಈ ದಿನಗಳಲ್ಲಿ ಜೀವನಶೈಲಿಯಾಗಿ ಚಾಲ್ತಿಯಲ್ಲಿರುವುದೇ ಹೆಚ್ಚು. ಒತ್ತಡದ ದಿನಚರಿಯನ್ನು ನಿಭಾಯಿಸಲು, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು, ವ್ಯಕ್ತಿತ್ವ ವಿಕಸನಕ್ಕಾಗಿ – ಹೀಗೆ ಹಲವು ಬಗೆಯಲ್ಲಿ ಧ್ಯಾನ ಸಹಕಾರಿ. ವ್ಯಕ್ತಿತ್ವ ವಿಕಸನವಾಗದೆ ಆಧ್ಯಾತ್ಮಿಕ ವಿಕಸನ ಸಾಧ್ಯವಾಗದು ಅನ್ನುವುದು ‘ಅರಳಿಬಳಗ’ದ ನಿಲುವು. ಆದ್ದರಿಂದಲೇ, […]

ಅಧ್ಯಾತ್ಮ ಡೈರಿ : ಮುಕ್ತವಾಗಿ ಇರುವುದೆಂದರೆ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಎಂದಲ್ಲ

ನಮ್ಮ ಹೊಣೆಯನ್ನೇ ಹೊರದೆ ಮುಕ್ತವಾಗಿರಲು ಬಯಸುತ್ತೇವೆ. ನಾವು ನಿಜವಾಗಿಯೂ ಮುಕ್ತವಾಗಿ ಇರಬೇಕೆಂದರೆ, ಮೊದಲು ನಮ್ಮ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಬೇಕು ~ ಅಲಾವಿಕಾ ನಮಗೆ ಬಹುತೇಕರಿಗೆ ಇದೊಂದು ಬಯಕೆ ಇರುತ್ತದೆ. “ಫ್ರೀ ಆಗಿರಬೇಕು. ಯಾವ ಜಂಜಡವೂ ಇಲ್ಲದೆ ಮುಕ್ತವಾಗಿರಬೇಕು” ಎಂದು ನಾವು ಹಂಬಲಿಸುತ್ತಲೇ ಇರುತ್ತೇವೆ. ನಮ್ಮ ಹಂಬಲ ಹೇಗೆಂದರೆ, ರೆಂಬೆ ಕೊಂಬೆಗಳನ್ನು ಪೊರೆಯಲು ಬೇರುಗಳೂ ಬೇಕು, ಆಕಾಶದಲ್ಲಿ ಹಾರಲು ರೆಕ್ಕೆಗಳೂ ಬೇಕು! ನಮ್ಮ ವ್ಯಾಖ್ಯಾನದ ಪ್ರಕಾರ ‘ಫ್ರೀ ಆಗಿರುವುದು’ ಅಂದರೇನು? ಇದನ್ನು ಮೊದಲು ಕಂಡುಕೊಳ್ಳೋಣ. ಆಮೇಲೆ ನಮ್ಮ ಈ […]

ಸ್ಪಿರಿಚುವಲ್ ಲೈಫ್ ಸ್ಟೈಲ್ : ನೆಮ್ಮದಿ ನೀಡುವ ಮದ್ದು

ನಾವು ಮತ್ಸರವನ್ನಿಟ್ಟುಕೊಂಡು ಗೆಳೆಯರೊಡನೆ ಪಾಸಿಟಿವ್ ಆಗಿ ವರ್ತಿಸಲಾಗುವುದಿಲ್ಲ. ಲೋಭವಿಟ್ಟುಕೊಂಡು ವ್ಯವಹಾರ ನಡೆಸಲಾಗುವುದಿಲ್ಲ. ಮೋಹವಿಟ್ಟುಕೊಂಡು ಸಮಾಜದಲ್ಲಿ ಬೆರೆಯಲಾಗುವುದಿಲ್ಲ. ಆದ್ದರಿಂದ ನಮ್ಮ ಸಾಧ್ಯತೆಯ ಮಟ್ಟದಲ್ಲಿ ಈ ಎಲ್ಲವುಗಳಿಂದ ಹೊರತಾಗಿ ಬದುಕುವ ಪರಿಯೇ ಇಂದಿನ ಸ್ಪಿರಿಚುವಲ್ ಲೈಫ್‍ಸ್ಟೈಲ್  ~ ಚಿತ್ಕಲಾ ಆಧ್ಯಾತ್ಮಿಕತೆ ಏನೆಲ್ಲವನ್ನು ನೀಡುತ್ತದೆ? ಅದು ಮಕ್ತಿಪಥದಲ್ಲಿ ನಮ್ಮನ್ನು ನಡೆಸುತ್ತದೆ ಅನ್ನೋದು ಸಾಧಕರ ಮಾತು. ಸದ್ಯದ ಜೀವನದಲ್ಲಷ್ಟೆ ನಂಬಿಕೆ ಇದ್ದು, ಸಾವಿನ ಅನಂತರದ ವಿದ್ಯಮಾನಗಳ ಬಗ್ಗೆ ತಲೆ ಕೆಡಿಸಿಕೊಳ್ಳದವರಿಗೆ `ಮುಕ್ತಿ’ ಅಷ್ಟೇನೂ ಸ್ವಾರಸ್ಯಕರ ಸಂಗತಿಯಲ್ಲ. ಹಾಗಾದರೆ ಅಂಥವರಿಗೆ ಆಧ್ಯಾತ್ಮಿಕ ಬದುಕಿನ ಅವಶ್ಯಕತೆ […]

ಆದ್ಯತೆಯಂತೆ ಬದುಕು ನಡೆಸುವ ಬಗೆ

ಬುದ್ಧ ನಡುರಾತ್ರಿಯಲ್ಲಿ ಮನೆ ಬಿಟ್ಟು ಹೊರಟಾಗ ಆತನಿಗೆ ತನ್ನ ಹೆಂಡತಿ ಮತ್ತು ಮಗುವಿನ ಮೇಲೆ ಪ್ರೀತಿ ಇರಲಿಲ್ಲ ಎಂದಲ್ಲ. ಆತ ಅವರೆಡೆಗಿನ ತನ್ನ ಕರ್ತವ್ಯಗಳನ್ನು ಖಂಡಿತವಾಗಿಯೂ ಮಾಡಿದ್ದ. ಮುಂದೆಯೂ ಮಾಡಿದ. ಜ್ಞಾನವನ್ನರಸುವುದು, ಬೋಧೆಯನ್ನು ಪಡೆಯುವುದು ಬುದ್ಧನ ಆದ್ಯತೆಯಾಗಿತ್ತು. ಅದರಂತೆ ಆತ ಸಂಸಾರ ಬಿಟ್ಟು ಹೊರಟ. ನೆನಪಿಡಿ. ಬುದ್ಧನ ಬದ್ಧತೆ ಹೊಂದಿರುವವರಿಗೆ ಮಾತ್ರ ಆದ್ಯತೆಯಂತೆ ನಡೆಯುವ ಅಧಿಕಾರ ಇರುತ್ತದೆ. ಸಾಮಾನ್ಯವಾಗಿ ಹೀಗಾಗುತ್ತದೆ; ವಿಶೇಷವಾಗಿ ಸಂಗಾತಿಗಳ ನಡುವೆ ಹಾಗೂ ಸ್ನೇಹಿತರಲ್ಲಿ. “ನಿನಗೆ ನನಗಿಂತ ಅದೇ ಮುಖ್ಯವಾಗಿಹೋಯಿತು” ಎಂದು ಕೆಲಸವನ್ನೋ ನಿಮ್ಮ ಹವ್ಯಾಸವನ್ನೋ […]