ಜೇಡ ಹೆಣೆದ ಬಲೆಯಂತೆ ಭಗವಂತನ ಸೃಷ್ಟಿ : ಬೆಳಗಿನ ಹೊಳಹು

ಯಥೋರ್ಣ ನಾಭಿಃ ಸೃಜತೇ ಗೃಹ್ಣತೇ ಚ : ತನ್ನದೇ ಹೊಕ್ಕುಳಿಂದ ಸ್ರವಿಸಿ ಬಲೆ ಹೆಣೆದು ಜೇಡವು ಅದನ್ನು ಪ್ರವೇಶಿಸುವಂತೆ.. (ಪರಮ ಅಸ್ತಿತ್ವವು ಜಗತ್ತನ್ನು ಸೃಷ್ಟಿಸಿ ಅದರೊಳಗೆ ಒಂದಾಗಿದೆ) ~ ಮುಂಡಕ ಉಪನಿಷತ್ತು   “ಜೇಡವು ತನ್ನೊಳಗಿನ ದ್ರವವನ್ನು ಸ್ರವಿಸಿ, ಅದರಿಂದ ಬಲೆಯನ್ನು ಸೃಷ್ಟಿಸುತ್ತದೆ. ಅನಂತರ ಆ ಬಲೆಯನ್ನು ಪ್ರವೇಶಿಸಿ, ಅದರೊಳಗೆ ನಡೆಯುವ ವಿದ್ಯಮಾನಗಳಿಗೆ ಸೂತ್ರಧಾರನಾಗಿಯೂ ಸ್ವತಃ ಪಾತ್ರಧಾರಿಯೂ ಆಗುತ್ತದೆ. ಈ ಸೃಷ್ಟಿ ಮತ್ತು ಅದರೊಳಗೆ ಭಗವಂತನ ಲೀಲೆಯನ್ನು ಅರ್ಥ ಮಾಡಿಕೊಳ್ಳಬೇಕಾದ ವಿಧಾನ ಇದು” ಅನ್ನುತ್ತದೆ ಮುಂಡಕ ಉಪನಿಷತ್ತು.  […]

ಯುವ ಸನ್ಯಾಸಿಯನ್ನು ಕಾಡುತ್ತಿದ್ದ ಜೇಡ ಯಾವುದು? : ಝೆನ್ ಕಥೆ

ಒಬ್ಬ ಯುವ ಸನ್ಯಾಸಿಗೆ ಧ್ಯಾನಕ್ಕೆ ಕೂತಾಗಲೆಲ್ಲ ಒಂದು ಜೇಡ ತನ್ನ ಎದುರು ಇಳಿದು ಬಂದಂತೆ ಭಾಸವಾಗತೊಡಗಿತು. ದಿನ ಕಳೆದಂತೆಲ್ಲ ಜೇಡ ದೊಡ್ಡದಾಗುತ್ತ ಹೋಯಿತು. ತೀವ್ರ ಆತಂಕಕ್ಕೊಳಗಾದ ಸನ್ಯಾಸಿ ತನ್ನ ಗುರುವಿನ ಮುಂದೆ ತನ್ನ ಸಂದಿಗ್ಧತೆಯನ್ನು ತೋಡಿಕೊಂಡ “ಮಾಸ್ಟರ್, ಧ್ಯಾನಕ್ಕೆ ಕೂರುವಾಗ ಒಂದು ಚೂರಿ ಇಟ್ಟುಕೊಳ್ಳುತ್ತೇನೆ, ಈ ಸಲ ಬರಲಿ ಆ ಜೇಡ, ಮುಗಿಸಿಬಿಡುತ್ತೇನೆ” ಎಂದ. ಒಂದು ನಿಮಿಷ ಧ್ಯಾನಿಸಿ, ಗುರುಗಳು ಉತ್ತರಿಸಿದರು, “ಬೇಡ, ಚೂರಿ ಬೇಡ, ಬದಲಾಗಿ ಒಂದು ಸುಣ್ಣದ ಕಡ್ಡಿ ಇಟ್ಟುಕೊ, ಜೇಡ ಬಂದಾಗ ಅದರ […]

ಪ್ರಪಂಚದ ಮೊಟ್ಟ ಮೊದಲ ಜೇಡ ಹುಟ್ಟಿದ ಕಥೆ : ಗ್ರೀಕ್ ಪುರಾಣ ಕಥೆಗಳು ~ 2

ಅಥೆನಾಳ ಶಾಪದಿಂದ ಭೂಮಿಯ ಮೇಲೆ ಮೊದಲ ಜೇಡದ ಸೃಷ್ಟಿಯಾಯಿತು. ಇಡ್ಮೊನ್ನ ಮಗಳು, ಶಪಿತ ಅರಕ್ನೆಯ ಹೆಸರಿನಿಂದಲೇ ಜೇಡ ಮತ್ತು ಎಂಟು ಕಾಲುಗಳ ಕೀಟಪ್ರಭೇದಕ್ಕೆ ‘ಅರಾಕ್ನಿಡಾ’ ಎಂಬ ಹೆಸರು ಬಂದಿರುವುದು! ಸಂಗ್ರಹ ಮತ್ತು ಅನುವಾದ: ಚೇತನಾ ತೀರ್ಥಹಳ್ಳಿ ಕಲೆ ಮತ್ತು ಕರಕುಶಲ ದೇವತೆ ಅಥೆನಾಗೆ ತನ್ನಷ್ಟು ಚೆಂದ ಕಸೂತಿ ಹಾಕುವವರು ಯಾರೂ ಇಲ್ಲವೆಂದು ಜಂಭವಿತ್ತು. ಹಾಗೆ ಯಾರೂ ಇರಲೂಕೂಡದು ಅನ್ನೋದು ಅವಳ ಹೆಬ್ಬಯಕೆ. ಭೂಮಿಯಲ್ಲಿ ಅರಕ್ನೆ ಎಂಬ ಹುಡುಗಿಯುಬ್ಬಳಿದ್ದಳು. ಅವಳು ಇಡ್ಮೊನ್ ಎಂಬ ಕುರಿಗಾಹಿಯ ಮಗಳು. ಚಿಕ್ಕವಳಿರುವಾಗಿಂದಲೂ ಕಸೂತಿ ಹಾಕುವುದು ಅವಳ […]