ಅಮೃತಮತಿಯ ಕಥೆ

ಅಷ್ಟಾವಕ್ರ ಮತ್ತು ಅಮೃತಮತಿಯರ ಪ್ರಣಯ ಪ್ರಸಂಗ ಕನ್ನಡದ ಮಹಾಕವಿ ಜನ್ನನ `ಯಶೋಧರ ಚರಿತ’ ಮಹಾಕಾವ್ಯದಲ್ಲಿ ಬರುತ್ತದೆ. ಮೂಲದಲ್ಲಿ ಈ ಕಥನದ ಉದ್ದೇಶ ಹಿಂಸೆಯ ಸಂಕಲ್ಪವೇ ಮಹಾಪಾಪ ಎನ್ನುವುದನ್ನು ಸಾರುವುದಾಗಿದೆ. ಯಶೋಧರ ಒಬ್ಬ ಸದ್ಗುಣಿ ರಾಜ. ಅಮೃತಮತಿ ಅವನ ಸ್ಫುರದ್ರೂಪಿ ಹೆಂಡತಿ. ಸಾತ್ತ್ವಿಕ ಗುಣದ ರಾಜನಲ್ಲಿ ರುಚಿ ಕಾಣದ ಅಮೃತಮತಿ, ಇರುಳಲ್ಲಿ ಪಾನಮತ್ತನಾಗಿ ಹಾಡುವ ಮಾವುತನ ಮೋಹಕ್ಕೆ ಬೀಳುತ್ತಾಳೆ. ಅವನೋ ಎಂಟು ಕಡೆ ಗೂನುಳ್ಳ ಕುರೂಪಿ ಅಷ್ಟಾವಕ್ರ. ಕ್ರೂರಿ, ಶುದ್ಧ ಒರಟ. ಅವನೊಡನೆ ಪ್ರಣಯ ಸಲ್ಲಾಪದ ಬಯಕೆಯಿಂದ ರಾಣಿ […]