ಕಂಚು ಸದ್ದು ಮಾಡುವಷ್ಟು ಕಾಂಚನ ಮಾಡುವುದಿಲ್ಲ! : ಸುಪ್ರಭಾತ ಸುಭಾಷಿತ

ಜ್ಞಾನಿ ಬಹುತೇಕ ಮೌನಿ. ಅರೆಬರೆ ತಿಳುವಳಿಕೆಯುಳ್ಳವರು ತಮ್ಮ ಕೊರತೆಯನ್ನು ಮುಚ್ಚಿಕೊಳ್ಳಲೋ ಎಂಬಂತೆ ಸದಾ ತಟವಟ ಮಾಡುತ್ತಾ ಇರುತ್ತಾರೆ. ಸತ್ಯವನ್ನು ಕಂಡುಕೊಂಡವರಿಗೆ ಜಗತ್ತಿನ ಮಿಥ್ಯೆಯನ್ನು ನೋಡಿ ಬಾಯಿಕಟ್ಟಿಬಿಡುತ್ತದೆ! ಸತ್ಯವನ್ನು ವರ್ಣಿಸಲಾಗದ ಕಾರಣಕ್ಕೆ ಮಾತ್ರವಲ್ಲ, ಈ ಕಾರಣದಿಂದಲೂ ಅವರು ಮೌನವಾಗಿದ್ದುಬಿಡುತ್ತಾರೆ!! ತುಂಬಿದ ಕೊಡ ತುಳುಕುವುದಿಲ್ಲ. ಆದರೆ ಅರೆತುಂಬಿದ ಕೊಡದ ನೀರು, ಬಾಕಿ ಇರುವ ಖಾಲಿ ಭಾಗದ ಕೊರತೆ ತುಂಬಲು ಮೇಲೆ ಮೇಲಕ್ಕೆ ಚಿಮ್ಮುತ್ತಲೇ ಇರುತ್ತದೆ. ಆದ್ದರಿಂದಲೇ ಅದರ ಕಲಕಲ ಸದ್ದು ಹೆಚ್ಚುವುದು.  ಯಾರಾದರೂ ಸುಖಾಸುಮ್ಮನೆ ಮಾತಾಡುತ್ತಿದ್ದಾರೆ ಅಂದಾಗ ಈ ಸುಭಾಷಿತ […]

ಭಗವದ್ಗೀತೆಯಲ್ಲಿ ಹೇಳಿರುವ ಜ್ಞಾನಿಯ 18 ಲಕ್ಷಣಗಳು : ಒಂದು ಚಲನಚಿತ್ರಿಕೆ

ಕುರುಕ್ಷೇತ್ರ ರಣಾಂಗಣದಲ್ಲಿ ನಿಂತು ಯುದ್ಧ ಮಾಡಲೊಲ್ಲೆ ಎಂದ ಅರ್ಜುನನಿಗೆ ಶ್ರೀ ಕೃಷ್ಣ ಗೀತೋಪದೇಶ ನೀಡುತ್ತಾನೆ. ಈ ಸುದೀರ್ಘ ಸಂವಾದದಲ್ಲಿ ಅರ್ಜುನ “ಜ್ಞಾನ ಎಂದರೆ ಯಾವುದು? ಜ್ಞಾನಿ ಯಾರು?” ಎಂದು ಕೇಳಿದಾಗ, ಗೀತಾಚಾರ್ಯ 18 ಗುಣಗಳನ್ನು ಉಲ್ಲೇಖಿಸಿ, “ಇವರೇ ಜ್ಞಾನಿಗಳು” ಎನ್ನುತ್ತಾನೆ.  ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಹೇಳಿದ ಜ್ಞಾನಿಯ 18 ಗುಣ ಲಕ್ಷಣಗಳು ಇಲ್ಲಿವೆ:  

ಎಲ್ಲರಲ್ಲೂ ತನ್ನನ್ನು ಕಾಣುವವನೇ ಜ್ಞಾನಿ : ಈಶಾವಾಸ್ಯ ಉಪನಿಷತ್

“ಯಾರ ಬಗ್ಗೆಯೂ ಬೇಸರವನ್ನಾಗಲೀ ಮತ್ಸರವನ್ನಾಗಲೀ ಇಟ್ಟುಕೊಳ್ಳದವರು ಸಹಜವಾಗಿ ಶುದ್ಧಪ್ರೇಮ ಭಾವವನ್ನು ಹೊಂದಿರುತ್ತಾರೆ. ಇಂತಹ ಸಹಜ ಪ್ರೇಮಿಗಳೇ ನಿಜವಾದ ಜ್ಞಾನಿಗಳು” ಎನ್ನುವುದು ಈಶಾವಾಸ್ಯದ ಈ ಶ್ಲೋಕದ ಅಂತರಾರ್ಥ.  ಯಸ್ಮಿನ್ ಸರ್ವಾಣಿ ಭೂತಾನಿ, ಆತ್ಮೈ ವಾ ಭೂದ್ವಿಜಾನತಃ | ತತ್ರ ಕೋ ಮೋಹ ಕಃ ಶೋಕ ಏಕತ್ವಮನುಪಶ್ಯತಃ || “ಯಾರು ಎಲ್ಲ ಜೀವಿಗಳಲ್ಲೂ ತಮ್ಮ ಆತ್ಮವನ್ನೆ ಕಾಣುತ್ತಾರೋ ಅವರಿಗೆಂಥ ಮೋಹ? ಅವರಿಗೆಂಥ ಶೋಕ? ಅವರು ಎಲ್ಲರನ್ನೂ ಸಮಾನವಾಗಿಯೇ ಕಾಣುತ್ತಾರೆ” ಎಂಬುದು ನೇರ ಅರ್ಥ. ಈ ಶ್ಲೋಕದ ಮೂಲಕ ಈಶಾವಾಸ್ಯವು ಎಲ್ಲರನ್ನೂ […]