‘ನಾನು’ ಇಲ್ಲವಾದಾಗ ಘಟಿಸುವುದೇ ಸತ್ಯದ ಸಾಕ್ಷಾತ್ಕಾರ. ‘ನಾನು’ ಅರಿಯುತ್ತೇನೆ ಎಂಬ ಅಹಂಭಾವ ಸ್ವಲ್ಪವೂ ಕೂಡ ಅಲ್ಲಿರಬಾರದು – ಇದು ಅಲ್ಲಮ ಪ್ರಭುವಿನ ತಾತ್ಪರ್ಯ
ಸಮುರಾಯ್ ಸಕವಾನಿಗೆ ಜ್ಞಾನೋದಯವಾಗಿದ್ದು : Tea time story
ದೇವಸ್ಥಾನದ ನಿರ್ವಾಹಕನನ್ನು ಕರೆದು ಕೇಳಿದ, “ಜಿಝೋನ ಸಹಸ್ರ ರೂಪಗಳಲ್ಲಿ ಯಾವುದು ಶ್ರೇಷ್ಠ?”
ಮೂರು ಮಹಾ ಬೆಳದಿಂಗಳುಗಳ ಮೊತ್ತ : ಬುದ್ಧ ಹುಣ್ಣಿಮೆ
ತಿಳಿವು ಘಟಿಸುವ ಘಳಿಗೆಯೇ ಜ್ಞಾನೋದಯ
ಈವರೆಗೆ ಜ್ಞಾನೋದಯ ಹೊಂದಿದವರೆಲ್ಲರೂ ಹುಟ್ಟು – ಬೆಳವಣಿಗೆಯೊಂದಿಗೆ ತಮ್ಮ ಸುತ್ತ ಕಟ್ಟಿಕೊಂಡ ಗೋಡೆ – ಮಾಡುಗಳನ್ನು ಭಂಜಿಸುವ ಪ್ರಯತ್ನ ನಡೆಸಿದವರೇ. ಆ ಪ್ರಯತ್ನದ ಕೊನೆಯ ಉಳಿಪೆಟ್ಟು ಬಿದ್ದ ಘಳಿಗೆಯೇ ಜ್ಞಾನೋದಯದ ಘಟನೆ ~ ಚೇತನಾ ತೀರ್ಥಹಳ್ಳಿ ವಾಸ್ತವದಲ್ಲಿ ಕತ್ತಲೆಂಬುದಿಲ್ಲ. ಇರುವುದೇನಿದ್ದರೂ ಬೆಳಕಿನ ಗೈರು ಹಾಜರಿಯಷ್ಟೆ. ಬೇಕಿದ್ದರೆ ಪರಿಶೀಲಿಸಿ. ಕತ್ತಲು ತುಂಬಿದ ಕೋಣೆಯಲ್ಲಿ ಒಂದು ದೀಪದ ಕುಡಿ ಬೆಳಕು ತರಬಲ್ಲದು. ಆದರೆ ಬೆಳಕೇ ಬೆಳಕಾಗಿರುವ ಕಡೆ ಕತ್ತಲನ್ನು ತಂದು ತುಂಬಲು ಸಾಧ್ಯವಿಲ್ಲ. ಬೆಳಕನ್ನು ತಡೆದು, ಕೃತಕವಾಗಿ ಕತ್ತಲನ್ನು ಸೃಷ್ಟಿಸಬಹುದು. […]
ಆಲಸ್ಯವೇ ನಮ್ಮನ್ನು ಕೆಟ್ಟವರನ್ನಾಗಿಸುವುದು!
ಜ್ಞಾನೋದಯ ಹೊಂದುವುದು ಬಹಳ ಕಷ್ಟದ ಕೆಲಸ. ಆದರೆ ದೂಷಿಸುವುದು ಬಹಳ ಸುಲಭ. ಜ್ಞಾನೋದಯ ಹೊಂದುವುದು ಎಂದರೆ ಎಲ್ಲಕ್ಕಿಂತ ಮೊದಲು ನಮ್ಮ ಅಹಂ ಪ್ರವೃತ್ತಿಯನ್ನು ಕುಟ್ಟಿ ಪುಡಿ ಮಾಡಿ ಬಿಸುಟುವುದು. ಆಲಸಿಗಳಿಗೆ ಅದು ಸಾಧ್ಯವಿಲ್ಲದ ಮಾತು. ಉತ್ತಮರಾಗುವಿಕೆಯ ಪ್ರಯತ್ನದಲ್ಲಿ ಆಲಸ್ಯ ತೋರುವುದೇ ಯಾವುದೇ ವ್ಯಕ್ತಿಯು ದುಷ್ಟನಾಗುವುದಕ್ಕೆ ಮುಖ್ಯ ಕಾರಣವಾಗಿರುತ್ತದೆ ~ ಓಶೋ ಒಳ್ಳೆಯವರಿಗೆ ಕೆಟ್ಟದ್ದನ್ನ ಮಾಡುವುದು ಎಂದರೆ ಅದು ಆಕಾಶಕ್ಕೆ ಉಗುಳಿದಂತೆ. ಆದ್ದರಿಂದ ಸಜ್ಜನರ ತಂಟೆಗೆ ಹೋಗಬಾರದು. ಮೊದಲು ನಾವು ಕೆಟ್ಟ ಜನರೇಕೆ ಒಳ್ಳೆಯವರ ತಂಟೆಗೆ ಹೋಗುತ್ತಾರೆಂದು ಅರ್ಥ ಮಾಡಿಕೊಳ್ಳೋಣ. […]
ತೀರಿಕೊಂಡ ಝೆನ್ ಗುರುವಿಗೆ ಜ್ಞಾನೋದಯವಾಗಿತ್ತೆ? : Tea time Story Poster
ಮಾಂಸದಂಗಡಿಯಲ್ಲಿ ಜ್ಞಾನೋದಯ : ಝೆನ್ ಕಥೆ
ಸಾಧನೆಯ ಹಾದಿಯಲ್ಲಿದ್ದ ಒಬ್ಬ ಝೆನ್ ಸನ್ಯಾಸಿ ಒಮ್ಮೆ ಮಾರ್ಕೇಟ್ ಮೂಲಕ ಹಾಯ್ದು ಹೋಗುವಾಗ ಮಾಂಸದ ಅಂಗಡಿಯೊಂದರಲ್ಲಿ ನಡೆಯುತ್ತಿದ್ದ ಸಂಭಾಷಣೆಯನ್ನು ಕಿವಿಗೊಟ್ಟು ಕೇಳಿದ. ಗ್ರಾಹಕ : ನಿನ್ನ ಅಂಗಡಿಯಲ್ಲಿರುವ ಒಳ್ಳೆಯ ಮಾಂಸದ ತುಣುಕು ನನಗೆ ಬೇಕು ಅಂಗಡಿಯವ: ನನ್ನ ಅಂಗಡಿಯಲ್ಲಿರೋದೆಲ್ಲ ಒಳ್ಳೆಯ ಮಾಂಸವೇ. ಇಲ್ಲಿಯ ಯಾವ ಮಾಂಸದ ತುಣುಕೂ ಕಳಪೆಯಲ್ಲ. ಈ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದಂತಯೇ ಝೆನ್ ಸನ್ಯಾಸಿಗೆ ಜ್ಞಾನೋದಯವಾಯಿತು. (ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)
ಲಾವೋ ತ್ಸು’ವಿಗೆ ಹೀಗನಿಸಿತು… : ಅರಳಿಮರ POSTER
“ನೆಲೆ ಕಳಚಿದ ಎಲೆ ಮುಂದೇನು ಎಂದು ಯೋಚಿಸುತ್ತದೆಯೇ? ಅಸ್ತಿತ್ವ ಅದರ ಕಾಳಜಿ ವಹಿಸುತ್ತೆ. ಕಾಲದ ಹರಿವಿನ ಜೊತೆಗೆ ಅದು ಸದ್ಯಕ್ಕೆ ಹುಲ್ಲು ಹಾಸಿನ ಮೇಲೆ ನೆಲೆಸಿದೆ. ಮತ್ತೆ ಹರಿವಿನ ಜೊತೆಗೇ ಅದರ ಭವಿಷ್ಯವೂ ನಿರ್ಧಾರವಾಗುತ್ತೆ” ಎಂದು ಲಾವೋ ತ್ಸುಗೆ ಅನಿಸಿತು… ಲಾವೋ ತ್ಸು, ಚೀನಾದ ಮಹಾ ದಾರ್ಶನಿಕ. ಝೆನ್ ಕವಲಿನ ಅನುಭಾವಿ ಸಂತ. ಅವನು ತನ್ನ ಸ್ವಂತ ತಿಳಿವನ್ನಾಧರಿಸಿ ತನ್ನದೇ ಆದ ದಾರಿಯೊಂದನ್ನು ಹಾಕಿಕೊಂಡ. ಅದನ್ನು `ದಾವ್’ ಎಂದು ಕರೆದ. ದಾವ್ ಎಂದರೇನೇ `ದಾರಿ’. ಪ್ರತಿಯೊಬ್ಬರೂ ತಮ್ಮ […]
ಜ್ಞಾನೋದಯವಾಗಿದೆ ಎಂದು ಗೊತ್ತಾಗೋದು ಹೇಗೆ?
ಮುಲ್ಲಾ ನಸ್ರುದ್ದೀನ್ ಊರಿನ ಮುಖ್ಯ ಬೀದಿಯಲ್ಲಿ ನಡೆದು ಹೋಗುತ್ತಿದ್ದ. ಅವನನ್ನು ಒಂದು ಪುಟ್ಟ ಹಿಂಡು ಹಿಂಬಾಲಿಸುತ್ತಿತ್ತು. ಆ ಹಿಂಡಿನಲ್ಲಿದ್ದ ಜನರು ನಸ್ರುದ್ದೀನ್ ಏನೆಲ್ಲ ಮಾಡುವನೋ ಅವನ್ನು ಹಾಹಾಗೇ ಅನುಕರಿಸುತ್ತಿದ್ದರು. ಅವನು ಒಂದು ಹೆಜ್ಜೆ ಮುಂದಿಟ್ಟರೆ ತಾವೂ ಮುಂದಿಡುವರು. ನಿಂತರೆ ತಾವೂ ನಿಲ್ಲುವರು. ನಸ್ರುದ್ದೀನ್ ಎರಡೂ ಕೈ ಎತ್ತಿ ‘ಹಹಹಾ…’ ಎಂದು ಗಹಗಹಿಸಿ ನಗಾಡಿದ. ಅವನನ್ನು ಅನುಕರಿಸುತ್ತಿದ್ದ ಹಿಂಡೂ ಹಾಗೆಯೇ ಮಾಡಿತು. ಮುಖ್ಯ ಬೀದಿಯ ಅಂಗಡಿ ಸಾಲಿನಲ್ಲಿ ನಸ್ರುದ್ದೀನನ ಒಬ್ಬ ಗೆಳೆಯನಿದ್ದ. ನಸ್ರುದ್ದೀನನನ್ನೂ ಅವನನ್ನು ಹಿಂಬಾಲಿಸುತ್ತಿದ್ದ ಹಿಂಡಿನ ವರ್ತನೆಯನ್ನೂ […]
ದಕ್ಷಿಣ ಜಪಾನಿನ ವಿದ್ಯಾರ್ಥಿಗೆ ಜ್ಞಾನೋದಯ ಮಾಡಿಸಿದ ಸುಯಿವೊ
ಸುಯಿವೊ ಒಬ್ಬ ಝೆನ್ ಬೋಧಕ. ಅವನೊಂದು ಗುರುಕುಲವನ್ನು ನಡೆಸುತ್ತಿದ್ದ. ಝೆನ್ ಕಲಿಯಲು ಅಲ್ಲಿಗೆ ದೂರದೂರದಿಂದ ವಿದ್ಯಾರ್ಥಿಗಳು ಬಂದರು. ಹೀಗೊಂದು ಬೇಸಿಗೆ ದಿನದಂದು ದಕ್ಷಿಣ ಜಪಾನಿನಿಂದ ಒಬ್ಬ ವಿದ್ಯಾರ್ಥಿ ಬಂದ. ಸುಯಿವೊ ಎಲ್ಲರಿಗೂ ನೀಡುವಂತೆ ಅವನಿಗೂ ಒಂದು ಒಗಟು ನೀಡಿ ಬಿಡಿಸುವಂತೆ ಹೇಳಿದ. “ಒಂದು ಕೈ ಚಪ್ಪಾಳೆ ಸದ್ದು ಹೇಗಿರುತ್ತೆ?” ಇದೇ ಆ ಒಗಟು. ದಕ್ಷಿಣ ಜಪಾನಿನ ಆ ವಿದ್ಯಾರ್ಥಿಗೆ ಹರಸಾಹಸ ಪಟ್ಟರೂ ಆ ಒಗಟನ್ನು ಅರ್ಥ ಮಾಡಿಕೊಳ್ಳಲೂ ಸಾಧ್ಯವಾಗಲಿಲ್ಲ. ಒಂದು ವರ್ಷ ಕಳೆಯಿತು. ಎರಡನೇ ವರ್ಷ ಉರುಳಿತು. […]