ಭಕ್ತಿ, ನಿಷ್ಠೆ : ತಾವೋ ಧ್ಯಾನ ~ 5

ದಾರಿ ಸ್ಪಷ್ಟವಿದ್ದಾಗ, ವ್ಯಕ್ತಿತ್ವಗಳು ಒಂದಾದಾಗ ಒಳ ಜಗತ್ತು ಮತ್ತು ಹೊರ ಜಗತ್ತುಗಳ ನಡುವೆ ಯಾವುದೇ ಅಂತರವಿಲ್ಲ. ಆಗ ಯಾವದೂ ದೂರವಲ್ಲ, ಯಾವ ಬಾಗಿಲೂ ನಮಗಾಗಿ ತೆರೆದುಕೊಳ್ಳಲು ನಿರಾಕರಿಸುವುದಿಲ್ಲ  ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ಬಾಗಿರುವುದ ನೇರ ಮಾಡು ನೇರವಾಗಿರುವುದ ಹರಿಯಗೊಡು ನೀರು, ಬೆಂಕಿ, ಬೆಳಕು ಕಲೆಹಾಕಿ ಜಗವನ್ನು ಬಿಂದುವಿನಲಿ ನಿಲಿಸು ಅಧ್ಯಾತ್ಮದ ದಾರಿಯ ಬಗ್ಗೆ ಭಕ್ತಿ, ನಿಷ್ಠೆ, ಶೃದ್ಧೆ ಮತ್ತು ಬದ್ಧತೆ, ನಿಜವಾಗಿಯೂ ನಮ್ಮೊಳಗೆ ಮನೆ ಮಾಡಿದ್ದೇ ಆದಲ್ಲಿ ನಮ್ಮ ಧೃಢತೆ ಸಹಜವಾಗಿ ಚಲನಶೀಲವಾಗುವುದು. […]

ಪ್ರತಿಫಲನ : ತಾವೋ ಧ್ಯಾನ ~ 4

ಪ್ರತಿಬಿಂಬ ಸ್ಷಷ್ಟವಾಗುವಲ್ಲಿ ಚಂದ್ರನ ಶ್ರಮವೂ ಇಲ್ಲ ನೀರಿನ ಪ್ರಯತ್ನವೂ ಇಲ್ಲ. ಹಾಗೆಯೇ ಧ್ಯಾನ, ಸಹಜ ಮತ್ತು ತಕ್ಷಣದ ಲೀಲೆ ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ನೀರ ಮೇಲೆ ಚಂದ್ರ ಉಸಿರ ಗಮನಿಸುತ್ತ ಕೂಡು ಸರೋವರ ಪ್ರಶಾಂತವಾಗಿದ್ದಾಗ ಚಂದ್ರನ ಬಿಂಬವೂ ಪರಿಪೂರ್ಣ. ಹಾಗೆಯೇ ಪ್ರಶಾಂತ ಮನುಷ್ಯ, ದಿವ್ಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತಾನೆ. ನಮ್ಮ ಉದ್ವಿಗ್ನತೆ, ಪ್ರಕೃತಿಯ ಸಹಜ ವ್ಯವಹಾರಗಳಲ್ಲಿ ನಿರಂತರ ಹಸ್ತಕ್ಷೇಪ, ಅಷ್ಟೇ ಅಲ್ಲ ಅಂತರಂಗದ ವಹಿವಾಟುಗಳಲ್ಲೂ ‘ನಾನು’ ಮುಂದಾಳಾಗಿ ಎಲ್ಲವನ್ನೂ ನಿಯಂತ್ರಿಸುವುದು ನಮ್ಮ ಪ್ರಶಾಂತತೆಯನ್ನು […]