ಸಹಿಸಲಾಗದೆ ಹೋದರೆ ಸತ್ಯವೂ ದ್ವೇಷಕ್ಕೆ ಒಳಗಾಗುತ್ತದೆ : ಅಧ್ಯಾತ್ಮ ಡೈರಿ

ತಿರುಳು ಒಂದೇ ಆಗಿದ್ದರೂ ಅದರ ಹೊದಿಕೆಗೆ ತಕ್ಕಂತೆ ನಮ್ಮ ಪ್ರತಿಕ್ರಿಯೆ ಇರುತ್ತದೆ. ಶುಗರ್ ಕೋಟೆಡ್ ಮಾತ್ರೆಗಳ ಹಾಗೆ – ಒಳಗೆ ಕಹಿಯೇ ಇದ್ದರೂ ಅದನ್ನು ಸಾಧ್ಯವಾದಷ್ಟು ಸಹ್ಯಗೊಳಿಸಿಕೊಂಡರಷ್ಟೆ ನಮಗೆ ನುಂಗಲು ಸಾಧ್ಯ ~ ಅಲಾವಿಕಾ  ಬೀರಬಲ್ಲನ ಕಥೆಯೊಂದು ಹೀಗಿದೆ. ಒಮ್ಮೆ ಬೀರಬಲ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ, ಅರಳಿಕಟ್ಟೆಯ ಕೆಳಗೆ ಜ್ಯೋತಿಷಿಯೊಬ್ಬನು ತಲೆ ಹೊತ್ತು ಕುಳಿತಿರೋದನ್ನು ನೋಡ್ತಾನೆ. “ಏನಾಯ್ತು?” ಅಂತ ವಿಚಾರಿಸಿದಾಗ. “ನಾನು ಶ್ರೀಮಂತ ವ್ಯಾಪಾರಿಯೊಬ್ಬನಿಗೆ ಜಾತಕ ನೋಡಿ ಹೇಳಿದೆ. ಅವನು ಸಿಕ್ಕಾಪಟ್ಟೆ ಕೋಪ ಮಾಡಿಕೊಂಡು ನನ್ನ ಮೇಲೇರಿ […]

ಅಧ್ಯಾತ್ಮ ಡೈರಿ : ಕೊರತೆಯ ಕೊರಗಿಗೆ ಮುಲಾಮು ಕಂಡುಕೊಳ್ಳಿ

ನಮ್ಮ ಹೆಸರಿನ ಕ್ರಾಸ್ಡ್ ಚೆಕ್‌ನಲ್ಲಿ ನೆಮ್ಮದಿಯ ಬದುಕು ಬರೆದು ಕಳಿಸಿರುವಾಗ, ನಾವೇ ಅದನ್ನ ಎನ್‌ಕ್ಯಾಶ್ ಮಾಡ್ಕೊಳ್ಳಬೇಕಲ್ವಾ? ಇಲ್ಲಾ ಅಂದ್ರೆ, ಅದು ಹಾಗೇ ವೇಸ್ಟ್ ಆಗಿಹೋಗುತ್ತೆ. ಹೀಗೆ ನಷ್ಟ ಮಾಡಿಕೊಳ್ಳೋದಾದರೂ ಯಾವ ಪುರುಷಾರ್ಥಕ್ಕೆ!? ~ ಅಲಾವಿಕಾ ಪ್ರತಿ ವರ್ಷ ಕೊಡಮಾಡುವ ಪ್ರಶಸ್ತಿಯೊಂದಕ್ಕೆ ಕೊಡುವಾತನ ಮಗಳ ಹೆಸರಿದೆ. ಅಲ್ಲೊಬ್ಬ ಹೆಣ್ಣುಮಗಳು ತನ್ನ ಗಂಡನ ಹೆಸರಲ್ಲಿ ಶಾಲೆ ತೆರೆದಿದ್ದಾಳೆ. ಪ್ರತಿ ಊರು, ಹಳ್ಳಿಯಲ್ಲೂ ದೊಡ್ಡ ಮೊತ್ತದಿಂದ ಹಿಡಿದು ಚಿಕ್ಕ ಸರ್ಟಿಫಿಕೇಟ್‌ವರೆಗೂ `ಸ್ಮಾರಕ ಪ್ರಶಸ್ತಿ’ ಒಂದಾದರೂ ಇರುತ್ತದೆ. ಅದರ ಹಿಂದೆ ಇಲ್ಲವಾದವರ ಬಗೆಗಿನ […]

ಎರಡು ಬಾರಿ ಸತ್ತ ಮನುಷ್ಯ : ಡೈರಿ ಕಥೆಗಳು

ಮೈ ತಣ್ಣಗಾಯಿತು. ತನ್ನನ್ನು ತಾನು ಮುಟ್ಟಿ ನೋಡಿಕೊಂಡ. ಹೆಂಡತಿಯ ಮಾತು ನೆನಪಾಯಿತು. “ಹಾಗಾದರೆ ನಾನೀಗ ಸತ್ತುಹೋಗಿದ್ದೇನೆ!” ಅವನು ಯೋಚಿಸಿದ…. ~ ಅಲಾವಿಕಾ ಒಂದೂರಲ್ಲಿ ಒಬ್ಬನಿಗೆ ಸಾವು ಅಂದರೆ ವಿಪರೀತ ಭಯ. ಊರಿನಲ್ಲಿ ಯಾರಾದರೂ ಸತ್ತುಹೋದರು ಎಂದು ಗೊತ್ತಾದರೆ ತಾನು ನಡುಗಿಹೋಗುತ್ತಿದ್ದ. ತಾನು ಯಾವಾಗ, ಎಲ್ಲಿ, ಹೇಗೆ ಸಾಯಬಹುದು ಎಂದು ಚಿಂತೆಗೆ ಬೀಳುತ್ತಿದ್ದ. ಒಂದು ದಿನ ಅವನ ಪಕ್ಕದ ಮನೆಯವನ ಹೆಂಡತಿ ಸತ್ತುಹೋದಳು. ಚಿಕ್ಕವಯಸ್ಸಿನ ಹೆಂಗಸು. ಅವಳ ಸಾವಿನ ಸುದ್ದಿ ಕೇಳಿದ ಮೇಲೆ ಈತನಿಗೆ ವಿಪರೀತ ಭಯವಾಗತೊಡಗಿತು. ಗಂಡ […]

ಅಧ್ಯಾತ್ಮ ಡೈರಿ : ಮಡಕೆಯೊಳಗೆ ಕೈಹಾಕಿದ ಮಂಗನ ಸ್ಥಿತಿ ನಮ್ಮದು

ಸಂಬಂಧದ ಸವಿಯನ್ನು ನಾವು ಉಣ್ಣಬೇಕು. ಹಾಗೆ ಉಣ್ಣಬೇಕೆಂದರೆ ಅದನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಬೇಕೆಂದು ನಾವು ಭಾವಿಸುತ್ತೇವೆ. ಮಡಕೆಯನ್ನು ಬೋರಲು ಹಾಕಿದರೆ ಒಳಗಿರುವ ತಿನಿಸು ಹೊರಗೆ ಬರುತ್ತದೆ ಎಂದು ಯೋಚಿಸುವ ವ್ಯವಧಾನವೂ ನಮಗಿರುವುದಿಲ್ಲ. ನಾವು ಸಂಬಂಧವನ್ನು ಹಿಡಿದಿಟ್ಟುಕೊಂಡು ಅನುಭವಿಸಲು ಬಯಸುತ್ತೇವೆ ~ ಅಲಾವಿಕಾ ಒಂದು ಮಂಗ ಮಡಕೆಯಲ್ಲಿ ಕೈ ಹಾಕಿದೆ. ಮಡಕೆಯೊಳಗಿನ ತಿಂಡಿಯನ್ನು ತೆಗೆದುಕೊಳ್ಳಲು ಅದು ಕೈ ಹಾಕಿದ್ದು. ಆದರೀಗ ಕೈಯನ್ನು ಹೊರಗೆ ತೆಗೆಯಲಾಗದೆ ಪರದಾಡುತ್ತಿದೆ. ಕೀಚ್ ಕೀಚ್ ಎಂದು ಕೂಗುತ್ತಾ ಆತಂಕದಲ್ಲಿ ಕುಣಿದಾಡುತ್ತಿದೆ. ಅದರ ಈ ‘ಮಂಗಾಟ’ವನ್ನು […]

ಅಧ್ಯಾತ್ಮ ಡೈರಿ : ಉಪ್ಪಿಟ್ಟು ಹೋಟೆಲಿನ ಹುಡುಕಾಟ ಮತ್ತು ವಾರಾಂತ್ಯದ ಗೊಣಗಾಟ

ಹೊಸ ಅನುಭವಗಳಿಗೆ ನಮ್ಮನ್ನು ತೆರೆದುಕೊಳ್ಳಲು, ಅವನ್ನು ನಮ್ಮದಾಗಿಸಿಕೊಳ್ಳಲು ನಾವು ಅದೆಷ್ಟು ಕಣಿ ಹಾಡುತ್ತೇವೆಂದರೆ, ತೋಳು ತೆರೆಯಲಿಕ್ಕೇ  ನೂರೊಂದು ನೆವ ಹೇಳುತ್ತೇವೆ. ನಮ್ಮದೇನಿದ್ದರೂ ಗುರುತು ಪರಿಚಯ ಇರುವ ಏರಿಯಾದಲ್ಲಷ್ಟೆ ವ್ಯವಹಾರ. ಇದೊಂದು ಮಜವಾದ ಸಂಗತಿ. ನಮ್ಮಲ್ಲಿ ಬಹಳಷ್ಟು ಜನ ಹೀಗೆ ಮಾಡುತ್ತೇವೆ. ಕಶ್ಮೀರಕ್ಕೆ ಹೋಗಿ ಇಡ್ಲಿ, ಉಪ್ಪಿಟ್ಟು ಸಿಗುವ ಹೋಟೆಲ್ ಹುಡುಕುತ್ತೇವೆ. ಅಲ್ಲಿನ ಸೌಂದರ್ಯವನ್ನು ಮನಸಾರೆ ಅನುಭವಿಸಿಯೂ ಇನ್ನೇನು ಊರು ತಲುಪಲಿದ್ದೇವೆ ಅನ್ನುವಾಗ “ಎಷ್ಟು ದೇಶ ಸುತ್ತಿದರೂ ನಮ್ಮ ಊರೇ ನಮಗೆ ಚೆಂದ” ಅಂತ ಡೈಲಾಗು ಹೊಡೆಯುತ್ತೇವೆ. ನಾವ್ಯಾಕೆ […]

ಅ ಈ ಕಥೆಯಲ್ಲಿ ನೀತಿಯನ್ನು ನೀವೇ ಹುಡುಕಿಕೊಳ್ಳಿ : ಅಧ್ಯಾತ್ಮ ಡೈರಿ

ಇದು ಎಷ್ಟಾಯಿತೆಂದರೆ, ಬೆಳಗಾಗುವ ಹೊತ್ತಿಗೆ ಊರ ಪಂಚಾಯ್ತಿ ಕಟ್ಟೆಯಲ್ಲಿ ಜನ ಸೇರಿದರು. ಭೀಮ್ಯಾನ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎಂದು ನಿಶ್ಚಯಿಸಿದರು. ಮೊದಲು ಪ್ರತಿಭಟನೆ ನಡೆಸುವುದೆಂದು ತೀರ್ಮಾನಿಸಲಾಯಿತು. ಆಮೇಲೆ ಮುತ್ತಿಗೆ ಹಾಕುವುದು, ಆಮೇಲೆ ಭೀಮ್ಯಾನ ಕೊಲೆಗಾರರ ಮೇಲೆ ಮುಗಿಬೀಳುವುದು – ಎಂದು ನಿರ್ಧಾರವಾಯಿತು ~ ಅಲಾವಿಕಾ ಒಮ್ಮೆ ಊರಿನ ಅಂಚಿನಲ್ಲೊಬ್ಬ ವ್ಯಕ್ತಿ ಅವಡುಗಚ್ಚಿಕೊಂಡು ಶಾಪ ಹಾಕುತ್ತಾ, ಆಗಾಗ ಕುತ್ತಿಗೆಗೆ ಸುತ್ತಿಕೊಂಡ ಟವಲಿನ ತುದಿಯಿಂದ ಕಣ್ಣೊರೆಸಿಕೊಳ್ಳುತ್ತಾ ಕುಳಿತಿದ್ದ. “ಪಾಪಿಗಳು ಅವನನ್ನು ಕೊಂದೇಬಿಟ್ಟರು! ಭೀಮ್ಯಾ…. ನೀನು ಕೈತಪ್ಪಿ ಹೋದಲ್ಲೋ….” ಎಂದು ಬಂಡೆಗಲ್ಲಿಗೆ […]

ಅಧ್ಯಾತ್ಮ ಡೈರಿ : ನಮ್ಮೊಳಗೂ ಇರಲಿ ಒಬ್ಬ ಮುರಾರಿ ಲಾಲ್, ಒಬ್ಬ ಜೈಚಂದ್…

ಸಂಬಂಧಗಳು ಬೆಸೆದುಕೊಳ್ಳೋಕೆ ಹೆಸರೇನೂ ಮುಖ್ಯವಲ್ಲ ಅನ್ನುವ ಪಾಸಿಟಿವ್ ಚಿಂತನೆಯನ್ನಿದು ಕಟ್ಟಿಕೊಡುತ್ತೆ. ನಾವೂ ಹೀಗೆ ‘ಹೆಸರು ಏನಿದ್ದರೇನು? ಒಳಗಿನ ಮನುಷ್ಯತ್ವ ಮುಖ್ಯ’ ಎಂದು ಬಗೆದು ಬಾಳಿದರೆಷ್ಟು ಚೆಂದ ಅಲ್ಲವೆ? ~ ಅಲಾವಿಕಾ ಒಬ್ಬ ಝೆನ್ ಗುರು ಮತ್ತು ಶಿಷ್ಯ ಹೋಗ್ತಾ ಇರುತ್ತಾರೆ. ದಾರಿಯಲ್ಲಿ ಮತ್ತೊಬ್ಬ ಎದುರಾಗ್ತಾನೆ. “ನಮಸ್ಕಾರ ಇಕೊಯಿ” ಎದುರಾದವನು ಹೇಳ್ತಾನೆ. “ನಮಸ್ಕಾರ ಟೊಬೊಕು” ಝೆನ್ ಗುರು ಸ್ಪಂದಿಸ್ತಾನೆ. ಅವನು ಆಚೆಗೆ ಇವನು ಈಚೆಗೆ ಹೊರಡ್ತಾರೆ. ಒಂದು ಕ್ಷಣ ಸುಮ್ಮನಿದ್ದ ಶಿಷ್ಯ ಕೇಳ್ತಾನೆ, “ಗುರುವೇ, ನಿನ್ನ ಹೆಸರು ಇಕೊಯಿ […]

ಅಧ್ಯಾತ್ಮ ಡೈರಿ : ಪ್ರೇಮ ಕಟ್ಟುಬೀಳಿಸುವ ಸರಪಳಿಯಲ್ಲ, ಬಿಡುಗಡೆಯ ರೆಕ್ಕೆ

ಪ್ರೇಮವೊಂದು ಸಂಬಂಧವಲ್ಲ. ಅದೊಂದು ಭಾವನೆ. ಅದೂ ಕೂಡಾ ನಮ್ಮ ಸಂತೋಷಕ್ಕಾಗಿ ನಾವು ನಮ್ಮೊಳಗೆ ಉದ್ದೀಪಿಸಿಕೊಳ್ಳುವ ಭಾವನೆ. ನಾವು ಪ್ರೇಮ ಭಾವನೆಯನ್ನು ತೋರ್ಪಡಿಸದ ಹೊರತು ನಾವು ಪ್ರೇಮಿಯಾಗಲಾರೆವು. ನಾವು ಯಾರ ಮೇಲೆ ಪ್ರೇಮವನ್ನು ತೋರುತ್ತೇವೋ ಅವರು ಅದನ್ನು ಸ್ವೀಕರಿಸದ ಹೊರತು ಅವರು ಕೂಡಾ ನಮ್ಮ ಪ್ರಿಯತಮರಾಗಲಾರರು ~ ಅಲಾವಿಕಾ ಮನುಷ್ಯ ಜೀವಿಯ ಅತ್ಯಂತ ಅಮಾಯಕ ನಂಬಿಕೆಗಳಲ್ಲಿ ಪ್ರೇಮವೊಂದು ಸಂಬಂಧ ಎನ್ನುವುದೂ ಒಂದು. ಎಷ್ಟೋ ಜನರು ಸಂಬಂಧ ಬೆಳೆಸುವುದಕ್ಕಾಗಿಯೇ ಪ್ರೇಮಿಸುತ್ತಾರೆ; ತಮ್ಮ ಪ್ರೇಮ ಮದುವೆಯಲ್ಲಿ ಅಥವಾ ಬದ್ಧತೆಯ ಸಂಬಂಧದಲ್ಲಿ ಕೊನೆಯಾಗಬೇಕೆಂದು […]

ಅಧ್ಯಾತ್ಮ ಡೈರಿ : ನಮ್ಮೊಳಗಿನ ಅಮೃತಮತಿಯರೂ… ಅಷ್ಟಾವಕ್ರ ಪ್ರೇಮವೂ…

ಮನಸ್ಸು ಮೃತವಾಗಿರಬೇಕು. ಆದರೆ ನಾವು ಸದಾ ಮನಸ್ಸಿಗೆ ಮೇವುಣಿಸುತ್ತಾ ಅದರ ಹಿಡಿತದಲ್ಲಿ ನಮ್ಮನ್ನು ಸಿಲುಕಿಸಿಕೊಳ್ಳುತ್ತಲೇ ಸಾಗುತ್ತೇವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಾವಿಲ್ಲದ ಮನಸ್ಸಿನವರೇ. ಅಂದರೆ ನಾವೆಲ್ಲರೂ `ಅಮೃತ – ಮತಿ’ಗಳೇ! ~ ಅಲಾವಿಕಾ ಅಷ್ಟಾವಕ್ರ ಮತ್ತು ಅಮೃತಮತಿಯರ ಪ್ರಣಯ ಪ್ರಸಂಗ ಕನ್ನಡದ ಮಹಾಕವಿ ಜನ್ನನ `ಯಶೋಧರ ಚರಿತ’ ಮಹಾಕಾವ್ಯದಲ್ಲಿ ಬರುತ್ತದೆ. ಮೂಲದಲ್ಲಿ ಈ ಕಥನದ ಉದ್ದೇಶ ಹಿಂಸೆಯ ಸಂಕಲ್ಪವೇ ಮಹಾಪಾಪ ಎನ್ನುವುದನ್ನು ಸಾರುವುದಾಗಿದೆ. ಯಶೋಧರ ಒಬ್ಬ ಸದ್ಗುಣಿ ರಾಜ. ಅಮೃತಮತಿ ಅವನ ಸ್ಫುರದ್ರೂಪಿ ಹೆಂಡತಿ. ಸಾತ್ತ್ವಿಕ ಗುಣದ […]

ಅಧ್ಯಾತ್ಮ ಡೈರಿ ~ ಕಳೆದುಕೊಳ್ಳುವುದರ ಸುಖ ದುಃಖ

ಯಾವುದೇ ವಸ್ತು – ವ್ಯಕ್ತಿಗಳ ಪಾತ್ರವಿಷ್ಟೇ –  ನಮ್ಮ  ಜೀವನದ ತಿರುವುಗಳಿಗೆ, ಅನುಭವಗಳಿಗೆ, ಸುಖ ದುಃಖಗಳಿಗೆ ನಿಮಿತ್ತವಾಗುವುದು. ಕಾಲಕ್ರಮೇಣ ಎಲ್ಲವೂ ನಮ್ಮಿಂದ ಕಳಚಿಕೊಳ್ಳಲೇಬೇಕು. ನಮ್ಮ ಆಯುಷ್ಯವೇ ನಮ್ಮ ಕಣ್ಣೆದುರು ಕಳೆದುಹೋಗುತ್ತಿರುವಾಗ, ವಸ್ತುಗಳ ಬಗ್ಗೆ ಎಷ್ಟು ಕಾಲ ಶೋಕಿಸಬಲ್ಲೆವು? ~ ಅಲಾವಿಕಾ ಕಳಕೊಳ್ಳುವ ನೋವು, ಕಳಕೊಂಡವರಿಗಷ್ಟೆ ಗೊತ್ತು! ನಿಜ… ಆದರೆ ಕಳಕೊಳ್ಳುವುದು ಎಂದರೆ ಹಗುರಾಗುವುದು ಕೂಡಾ!ಏನನ್ನಾದರೂ ಕಳಕೊಂಡಾಗ ನಾವು ಅದನ್ನು ಹುಡುಕಲು ಯತ್ನಿಸುತ್ತೇವೆ. ಅದು ನಮ್ಮ ಜವಾಬ್ದಾರಿಯೂ ಹೌದು. ಆ ವಸ್ತು ಸಿಗುವುದಿಲ್ಲ  ಎಂದರಿವಾದಾಗಲೂ ಹುಡುಕಾಟ  ಮುಂದುವರೆಸುತ್ತೇವೆ. ಉದಾಹರಣೆಗೆ, ನಾವು […]