ಅಧ್ಯಾತ್ಮ ಡೈರಿ ~ ಕಳೆದುಕೊಳ್ಳುವುದರ ಸುಖ ದುಃಖ

ಯಾವುದೇ ವಸ್ತು – ವ್ಯಕ್ತಿಗಳ ಪಾತ್ರವಿಷ್ಟೇ –  ನಮ್ಮ  ಜೀವನದ ತಿರುವುಗಳಿಗೆ, ಅನುಭವಗಳಿಗೆ, ಸುಖ ದುಃಖಗಳಿಗೆ ನಿಮಿತ್ತವಾಗುವುದು. ಕಾಲಕ್ರಮೇಣ ಎಲ್ಲವೂ ನಮ್ಮಿಂದ ಕಳಚಿಕೊಳ್ಳಲೇಬೇಕು. ನಮ್ಮ ಆಯುಷ್ಯವೇ ನಮ್ಮ ಕಣ್ಣೆದುರು ಕಳೆದುಹೋಗುತ್ತಿರುವಾಗ, ವಸ್ತುಗಳ ಬಗ್ಗೆ ಎಷ್ಟು ಕಾಲ ಶೋಕಿಸಬಲ್ಲೆವು? ~ ಅಲಾವಿಕಾ ಕಳಕೊಳ್ಳುವ ನೋವು, ಕಳಕೊಂಡವರಿಗಷ್ಟೆ ಗೊತ್ತು! ನಿಜ… ಆದರೆ ಕಳಕೊಳ್ಳುವುದು ಎಂದರೆ ಹಗುರಾಗುವುದು ಕೂಡಾ!ಏನನ್ನಾದರೂ ಕಳಕೊಂಡಾಗ ನಾವು ಅದನ್ನು ಹುಡುಕಲು ಯತ್ನಿಸುತ್ತೇವೆ. ಅದು ನಮ್ಮ ಜವಾಬ್ದಾರಿಯೂ ಹೌದು. ಆ ವಸ್ತು ಸಿಗುವುದಿಲ್ಲ  ಎಂದರಿವಾದಾಗಲೂ ಹುಡುಕಾಟ  ಮುಂದುವರೆಸುತ್ತೇವೆ. ಉದಾಹರಣೆಗೆ, ನಾವು […]

ಅಧ್ಯಾತ್ಮ ಡೈರಿ : ನಾವು ನಡೆದ ದಾರಿಗಳ ಮೊತ್ತವೇ ನಮ್ಮ ಗುರುತು!

ನಮಗೆ ನಾವು ಎಲ್ಲಿ ತಲುಪುತ್ತೀವಿ ಅಂತ ಗೊತ್ತಿರೋದಿಲ್ಲ. ಯಾವ ದಾರಿಯಲ್ಲಿ ಹೋಗಬೇಕಂತಲೂ ಗೊತ್ತಿರೋದಿಲ್ಲ. ಹಾಗಂತ ನಿಂತಲ್ಲೇ ಇದ್ದುಬಿಟ್ಟರೆ ಅಲ್ಲೇ ಮುಗಿದುಹೋಗಬೇಕಾಗುತ್ತೆ. ಆದ್ದರಿಂದ ಯಾವುದಾದರೊಂದು ಗುರಿ ತಲುಪಲಿಕ್ಕೆ, ಏನಾದರೊಂದು ಸಾಧನೆ ಮಾಡಲಿಕ್ಕೆ ನಡಿಗೆ ನಿಲ್ಲಿಸದಿರುವುದೊಂದೇ ಉಪಾಯ ~ ಅಲಾವಿಕಾ “ನೀನು ಯಾರು?” ಕಂಬಳಿ ಹುಳು ಆಲೀಸ್’ಳನ್ನು ಕೇಳಿತು. ಸಂಭಾಷಣೆ ಇಂಥದೊಂದು ಪ್ರಶ್ನೆಯಿಂದ ಶುರುವಾದರೆ ಮುಂದುವರಿಯೋದು ಹೇಗೆ? ಆಲಿಸ್ ಗಲಿಬಿಲಿಯಾದಳು. ಸಾವರಿಸಿಕೊಂಡು, “ನಾನು ಯಾರು ಅಂದ್ರೆ…. ಇವತ್ತು ಬೆಳಗ್ಗೆ ಏಳುವಾಗ ನಾನು ಏನಾಗಿದ್ದೆ ಅನ್ನೋದು ನನಗೆ ಗೊತ್ತಿದೆ ಸರ್. ಆದ್ರೆ, […]

ಅಧ್ಯಾತ್ಮ ಡೈರಿ : ಇರುವಲ್ಲೇ ಖುಷಿ ಕಾಣದೆ ಹೋದರೆ…

“ನೀನು ಇರೋ ಕಡೇನೇ ನಿನಗೆ ಆನಂದ ಸಿಗ್ತಾ ಇಲ್ಲ ಅಂತಾದರೆ ನೀನು ಬೇರೆ ಕಡೆ ಅದನ್ನ ಹುಡುಕೋದು ವ್ಯರ್ಥ” ಅಂತಾನೆ ಡೋಜೆನ್. ಈ ಮಾತು ಎಷ್ಟು ನಿಜ ನೋಡಿ! ನಿಮಗೆ ಕೆಲಸದಲ್ಲಿ ಖುಷಿ ಸಿಗಲಿಲ್ಲ ಎಂದಾದರೆ ಸಂಸಾರದಲ್ಲೂ ಖುಷಿ ಸಿಗುವುದಿಲ್ಲ. ಲೌಕಿಕದಲ್ಲಿ ನೀನು ಆನಂದದಿಂದ ಇರಲು ಸಾಧ್ಯವಾಗದೆ ಹೋದರೆ, ಅಧ್ಯಾತ್ಮದಲ್ಲೂ ನೀವು ಆನಂದದಿಂದ ಇರಲಾರಿರಿ ~ ಅಲಾವಿಕಾ ಇಲ್ಲ… ಎಲ್ಲವನ್ನೂ ಮೇಲಿಂದ ಮೇಲೆ ಅನುಸರಿಸಿ ನೋಡಿಯಾಗಿದೆ. ಯಾವ್ದೂ ಸಮಾಧಾನ ಕೊಡ್ತಾ ಇಲ್ಲ. ವಿಪಸ್ಸನ ಕ್ಲಾಸು, ವೀಕೆಂಡ್ ಮೆಡಿಟೇಶನ್ನು, […]

ಅಧ್ಯಾತ್ಮ ಡೈರಿ : ಉದ್ದನೆಯ ಹಾಸಿಗೆಯನ್ನು ಹೊಂದಿಸುವುದು

ಬಹುತೇಕರ ಪಾಲಿಗೆ ಜೀವನ ಅಂದರೇನೇ ಉದ್ದನೆ ಹಾಸಿಗೆಯನ್ನು ಹೊಂದಿಸುವುದು. ಅವರಿಗೆ ಇದ್ದುರಲ್ಲೇ ಹೊಂದಾಣಿಕೆ ಮಾಡಿಕೊಂಡು ಬದುಕುವುದರಲ್ಲಿ ಆಸಕ್ತಿಯಿಲ್ಲ. ಇಲ್ಲದುದಕ್ಕೆ ಹಂಬಲಪಡದೆ ಸಂತೃಪ್ತರಾಗಿ ಬದುಕುವ ಆಲೋಚನೆ ಮಾಡಲಿಕ್ಕಂತೂ ಅವರಿಂದ ಸಾಧ್ಯವೇ ಇಲ್ಲ! ~ ಅಲಾವಿಕಾ ಕಾಲು ಚಾಚಿ ಮಲಗೋದಂದರೆ ಎಲ್ಲರಿಗೂ ಇಷ್ಟ. ಯಾರು ತಾನೇ ಕಾಲು ಮಡಚಿಕೊಂಡು ಮಲಗುತ್ತಾರೆ? ಕೆಲವರು ಇರುತ್ತಾರೆ. ಹಾಸಿಗೆ ಚಿಕ್ಕದಾಗಿ ಚಾಚಿದ ಕಾಲು ನೆಲದ ಮೇಲೆ ಹೋದರೆ ಅವರಿಗೇನೂ ಚಿಂತೆ ಇಲ್ಲ. ಅವರಿಗೆ ಚಿಕ್ಕ ಹಾಸಿಗೆಯಲ್ಲೂ ಕಾಲುಚಾಚಿ ಮಲಗಿ ನಿದ್ರಿಸುವ ಕಲೆ ಸಿದ್ಧಿಸಿದೆ. ಅವರು […]

ಅಧ್ಯಾತ್ಮ ಡೈರಿ : ಬದುಕು ಭಾಗ್ ಬಾನ್ ಸಿನಿಮಾ ಅಲ್ಲ!

ಮುಂದಿನ ಕ್ಷಣವೇ ಈ ಕ್ಷಣಕ್ಕಿಂತ ಬೇರೆಯಾಗಿರುತ್ತೆ. ಹೀಗಿರುವಾಗ ಮುಂದಿನ ಕ್ಷಣದ ನಾವಾಗಲೀ ಬೇರೆಯವರಾಗಲೀ ಈ ಹೊತ್ತಿನ ನಮ್ಮಂತೆ ಇರೋಕೆ ಹೇಗೆ ಸಾಧ್ಯ? ಇಷ್ಟು ಅರ್ಥವಾಗಿಬಿಟ್ಟರೆ ಸಂಸಾರ ಸಲೀಸು. ಆದರೆ ಅರ್ಥ ಮಾಡಿಕೊಳ್ಳಲು ಬಯಸುವವರ ಸಂಖ್ಯೆಯೇ ಬಹಳ ಕಡಿಮೆ ~ ಅಲಾವಿಕಾ ಪ್ರತಿ ಸಂಜೆ ಅಂವ ಕರೆಕ್ಟಾಗಿ ಇಂತಿಷ್ಟೇ ಸಮಯಕ್ಕೆ ಮನೆಗೆ ಬರ್ತಾನೆ. ಅವನು ಗೇಟು ತೆಗೆದು, ಅಂಗಳದುದ್ದ ನಡೆಯುತ್ತಾ ಇನ್ನೇನು ಹೊಸ್ತಿಲು ತಲುಪಿ ಕದ ತಟ್ಟಬೇಕು, ಅವಳ ಮುಗುಳ್ನಗು ಕದ ತೆರೆಯುತ್ತದೆ. ಅವರ ಮದುವೆಯಾದ ಮೊದಲ ದಿನದಿಂದ […]

ಅಧ್ಯಾತ್ಮ ಡೈರಿ : ಕೊಟ್ಟ ಕುದುರೆಯ ಬಿಟ್ಟು ಹಲಬುವ…

ಚಿಕ್ಕ  ಚಿಕ್ಕ ವಿಷಯಕ್ಕೆ ನೀವು ಪಡುವ ಫ್ರಸ್ಟ್ರೇಶನ್ ನಿಮ್ಮ ಮುಂದಿನ ಕೆಲಸಗಳ ಮೇಲೆ ನಿಮಗೇ ಅರಿವಿಲ್ಲದಂತೆ ಪರಿಣಾಮ ಬೀರುತ್ತಾ, ಒಂದಕ್ಕೊಂದು ಢಿಕ್ಕಿ ಹೊಡೆಯುವ ಲೋಲಕಗಳಂತೆ ಹೊಯ್ದಾಡತೊಡಗುತ್ತದೆ. ಹಾಗೇ, ಇಷ್ಟು ಚಿಕ್ಕ ವಿಷಯದಲ್ಲಿ, ಕೈಲಿರುವುದಕ್ಕೆ ತೃಪ್ತಿಪಡಲು ಕಲಿತಿರದ ನೀವು, ದೊಡ್ಡ ನಿರೀಕ್ಷೆಗಳ ವಿಷಯದಲ್ಲಿ ಹೇಗೆ ವರ್ತಿಸುವಿರಿ!? ಯೋಚಿಸಿ. ಯಾವುದೋ ಒಂದು ಫನ್ ಗೇಮ್ ಕಾಂಪಿಟೇಶನ್. ಅದರಲ್ಲಿ ನಿಮಗೆ ಬಹುಮಾನ ಬಂದಿರುತ್ತದೆ. ನಿಮ್ಮ ಗೆಳೆಯರಿಗೂ ಬಂದಿರುತ್ತದೆ. ಬಹುಮಾನ ರೂಪದಲ್ಲಿ ನಿಮಗೆ ಕೊಡಲಾಗಿರುವ ವಸ್ತು ಏನಿರಬಹುದು ಅನ್ನುವಷ್ಟೇ, ಅಥವಾ ಅದಕ್ಕಿಂತ ಹೆಚ್ಚಿನ […]

ಅಧ್ಯಾತ್ಮ ಡೈರಿ : ಹೊಂದುವ ಹಂಬಲ ಮತ್ತು ಕಳೆದುಕೊಳ್ಳುವ ಸುಖ

ನೀವು ಗಮನಿಸಿ ಬೇಕಿದ್ದರೆ. ಯಾವ ಬಟ್ಟೆಗಾಗಿ ನೀವು ಶಾಪಿಂಗ್’ಗೆ ಹೋದಿರೋ ಅದು ಸಿಗದಿದ್ದರೆ ನೀವೆಷ್ಟು ಕಳವಳಪಡುತ್ತೀರಿ! ಅದು ಸಿಕ್ಕಾಗ ನೀವದನ್ನು ತೊಡದೆ ಇಡುವುದು ಬೇರೆ ವಿಷಯ.  ಅದು ಸಿಗದೆ ಹೋದರೆ ನೀವು ಪಡುವ ಬೇಸರವು ನಿಮಗೆ ಯಾವ ಅನುಭವ ನೀಡುತ್ತದೆಂದು ಗಮನಿಸಿ. ಅಧ್ಯಾತ್ಮ ಸಾಧಕರಲ್ಲಿ ಕೂಡ ಈ ‘ಕಳವಳಿಸುವ ಸಂಭ್ರಮ’ವಿದೆ. ಬಹಳ ದಿನಗಳಿಂದ ಬ್ರ್ಯಾಂಡ್ ಫ್ಯಾಕ್ಟರಿಯಲ್ಲಿ ಶಾಪಿಂಗ್ ಮಾಡುವ ಪ್ಲ್ಯಾನ್ ಮಾಡಿಕೊಂಡಿರುತ್ತೀರಿ. ಹೇಗೂ ಸಮಯ, ಹಣ ಎಲ್ಲ ಹೊಂದಾಣಿಕೆ ಮಾಡಿಕೊಂಡು ಹೋಗಿಯೂ ಹೋಗುತ್ತೀರಿ. ಅಲ್ಲಿ ನೀವು ಮೇಲಿಂದ […]