ದೇಹವೇ ದೇವಳ, ಕೈಲಾಸ, ಪ್ರಿಯನ ನೈವೇದ್ಯ! : ಕೇಶವ ಮಳಗಿ ಬರಹ

ಮೇ 22ರಂದು ತಾಳ್ಳಪಾಕ ಅನ್ನಮಯ್ಯ ಅವರ ಜನ್ಮದಿನ. ಭಾರತೀಯ ಭಾಷೆಯೊಂದರಲ್ಲಿ ಭಕ್ತಿಶೃಂಗಾರ ಉತ್ತುಂಗಕ್ಕೇರಿಸಿದ ಮಹಾನುಭಾವ ಎಂದು ಅನ್ನಮಯ್ಯನನ್ನು ಗುರುತಿಸಲಾಗುತ್ತದೆ | ಕೇಶವ ಮಳಗಿ ನರನ ’ದೇಹ’ ಮತ್ತು ದೇಹದೊಳಗೆ ಅಗೋಚರವಾಗಿ ಅಡಗಿರುವ ’ಆತ್ಮ’ ಅಥವ ‘ಪ್ರಜ್ಞೆ’ಯೇ ದೈವ ಎಂದು ವಿಶ್ವದ ಬಹುತೇಕ ಧರ್ಮಸಿದ್ಧಾಂತಗಳು ಹೇಳುತ್ತವೆ. ಇಹಲೋಕದಲ್ಲಿ ಏನನ್ನೇ ಸಾಧಿಸಬೇಕಾದರೂ ದೇಹವೇ ಅದಕ್ಕೆ ಪ್ರಾಥಮಿಕ ಮಾಧ್ಯಮ. ಏಕೆಂದರೆ, ಅದರೊಳಗಿನ ಪ್ರಜ್ಞೆ ಇಲ್ಲವೆ ಆತ್ಮ ಅಗೋಚರ. ಆದರೆ, ದೇಹ ಮತ್ತು ಪ್ರಜ್ಞೆಗಳನ್ನು ನಿಯಂತ್ರಿಸಿ, ಸಿದ್ಧಿ-ಸಾಧನೆಗಳ ಮೂಲಕ ಪರಾತ್ಪರವನ್ನು ಪಡೆಯಬಹುದಾಗಿದೆ. ಇದರರ್ಥ […]