ಸಂಪ್ರದಾಯವೊಂದು ಅವನತಿಯ ಹಾದಿ ಹಿಡಿದಾಗ…

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಸಂಪ್ರದಾಯವೊಂದು ಅವನತಿಯ ಹಾದಿ ಹಿಡಿದಾಗ ಕರುಣೆ ಮತ್ತು ನೈತಿಕತೆ ಹುಟ್ಟಿಕೊಳ್ಳುತ್ತವೆ. ಕಲಿಕೆ ಮತ್ತು ಜಾಗರೂಕತೆ ಮೇರೆ ಮೀರುತ್ತಿದ್ದಂತೆಯೇ ಬೂಟಾಟಿಕೆ ಹುಟ್ಟಿಕೊಳ್ಳುತ್ತದೆ. ಒಡೆದ ಮನೆಯಲ್ಲಿ ಮಕ್ಕಳು ಮತ್ತು ತಂದೆ ತಾಯಂದಿರು ಕರ್ತವ್ಯಪರಾಯಣರು. ಛಿದ್ರಗೊಂಡ ಸಮಾಜದ ತುಂಬ ನಂಬಿಕಸ್ತ ಭಕ್ತರ ಮೆರವಣಿಗೆ, ಉರವಣಿಗೆ.

ತಾವೋ ತಿಳಿವು #78 ~ ಸಂತನಿಗೆ ಈ ಸೂಕ್ಷ್ಮ ಗೊತ್ತು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತಾವೋದಲ್ಲಿ ಒಂದಾದಾಗ ಆಕಾಶ, ಶುಭ್ರ, ತಿಳಿ ಭೂಮಿ, ಸುಭದ್ರ ಚೈತನ್ಯ, ಸೃಷ್ಟಿಶೀಲ ಕಣಿವೆ, ಬಸಿರು ಒಂದನ್ನೊಂದು ಹುಟ್ಟಿಸುತ್ತ ಸತತವಾಗಿ ಹೊಸದಾಗುತ್ತ ಬದುಕು, ಜೀವಂತಿಕೆಯ ತಾಣ ಈ ಬಂಧ ತುಂಡಾದಾಗ ಆಕಾಶ, ಚೂರು ಚೂರು ಭೂಮಿಯಲ್ಲಿ ಬಿರುಕು ಚೈತನ್ಯ ನಿರ್ವೀರ್ಯ ಮತ್ತು ಕಣಿವೆ, ಬರಡು. ಸಂತನಿಗೆ ಈ ಸೂಕ್ಷ್ಮ ಗೊತ್ತು ಅಂತೆಯೇ ಸೃಷ್ಟಿಯ ಬಗ್ಗೆ ಅವನಿಗೆ ಅಪಾರ ಅಂತಃಕರಣ ವಿನಮ್ರತೆಯತ್ತ ಅವನ ಸಾಧನೆ ರತ್ನದಂತೆ ಹೊಳೆಯುವದಕ್ಕಿಂತ […]

ತಾವೋ ತಿಳಿವು #76 ~ ತಾವೋ ರುಚಿ ನಾಲಿಗೆಗೆ ಸಿಕ್ಕುವುದೇ ಇಲ್ಲ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಅಗೋಚರ ತಾವೋ ಕಣ್ಣಿಗೆ ಕಟ್ಚಿಕೊಂಡಾಗ ಜಗತ್ತು ಮೊಣಕಾಲೂರುವುದು. ಇಲ್ಲಿ ಭಯಕ್ಕೆ ಜಾಗವಿಲ್ಲ ಅಶಾಂತಿಗೆ ನೆಲೆ ಇಲ್ಲ ಆತಂಕಕ್ಕೆ ಕಾರಣವಿಲ್ಲ. ಹಾಯ್ದು ಹೋಗುವ ಪ್ರವಾಸಿಗರಿಗೆ ಏರಿಳಿತದ ಹಾಡು ಇಷ್ಟ ರುಚಿ ರುಚಿಯಾದ ಊಟ ಪಂಚಪ್ರಾಣ. ಆದರೆ ತಾವೋ, ಪಕ್ಕಾ ಮಂದ್ರ ಸ್ಥಾಯಿ ರುಚಿ ನಾಲಿಗೆಗೆ ಸಿಕ್ಕುವುದೇ ಇಲ್ಲ. ಕಣ್ಣಿಗೆ ಕಾಣಿಸದು, ಕಿವಿಗೆ ಕೇಳಿಸದು ಬಳಸಿದರೆ ಮಾತ್ರ, ತೀರದು ಉಕ್ಕಿ ಉಕ್ಕಿ ಹರಿಯುವುದು

ತಾವೋ ತಿಳಿವು #65 ~ ಕೋಗಿಲೆಯ ಹಾಗೆ ಸರಾಗ, ತಾವೋ ರಾಗ…

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ ಜಗತ್ತಿನ ಪ್ರತಿಯೊಂದೂ ತಾವೋ ಹಾಡಿದಂತೆ. ಹುಟ್ಟುವಾಗ ಭೋಳೆ, ಪರಿಪೂರ್ಣ, ರೆಕ್ಕೆ ಬಿಚ್ಚಿದ ಹಕ್ಕಿ. ಆಮೇಲೆ, ಸುತ್ತ ಮುತ್ತಲಿನ ಸನ್ನಿವೇಶಗಳೇ ತಂದೆ, ತಾಯಿ. ರಾಜ ದರ್ಬಾರುಗಳಲ್ಲಿ ಹಾಡಿದಂತಲ್ಲ ಇದು ಕೋಗಿಲೆಯ ಹಾಗೆ ಸರಾಗ ತಾವೋ ರಾಗ ಕೇವಲ ಹುಟ್ಟಿಸುವುದಲ್ಲ ಆರೈಕೆ, ಲಾಲನೆ ಪಾಲನೆ, ರಕ್ಷಣೆ ಎಲ್ಲ ತಾವೋ ಜವಾಬ್ದಾರಿ, ಕೊನೆಗೆ ತನ್ನೊಳಗೆ ವಾಪಸ್ ಕರೆಸಿಕೊಳ್ಳುವ ತನಕ. ಸ್ವಾಧೀನದ ಹುಕಿಯಿಲ್ಲದ ಸೃಷ್ಟಿ, ನಿರೀಕ್ಷೆಗಳ ಆಸೆಯಿಲ್ಲದ ಕ್ರೀಯೆ, ತಲೆ […]

ತಾವೋ ತಿಳಿವು #64 ~ ಎಷ್ಟು ಸಾಕು ಎನ್ನುವುದು ಗೊತ್ತಿದ್ದರೆ ಅಷ್ಟೇ ಸಾಕು

ಮೂಲ : ಲಾವೋ ತ್ಸು | ಮರು ನಿರೂಪಣೆ : ಚಿದಂಬರ ನರೇಂದ್ರ ತಾವೋ ಆಳುವ ಜಗತ್ತಿನಲ್ಲಿ ಯುದ್ಧದ ಕುದುರೆಗಳು, ನೆಲ ಊತು ಹದ ಮಾಡಿದರೆ ತಾವೋ ವಿಮುಖ ಜಗತ್ತಿನ ನೆಲದಲ್ಲಿ ಯುದ್ಧದ ಕುದುರೆಗಳನ್ನು ಬೆಳೆಯಲಾಗುತ್ತದೆ. ಭಯಕ್ಕಿಂತ ದೊಡ್ಡ ಭ್ರಮೆ ಅತೃಪ್ತಿಗಿಂತ ಘೋರ ಆಪತ್ತು ವೈರಿಗಳಿರುವ ಮಹಾ ಅದೃಷ್ಟ ಯಾರಿಗೂ ಬೇಡ. ಎಷ್ಟು ಸಾಕು ಎನ್ನುವುದು ಗೊತ್ತಿದ್ದರೆ ಅಷ್ಟೇ ಸಾಕು.

ತಾವೋ ತಿಳಿವು #63 ~ ಸಮಾಧಾನವೇ ಜಗದ ಆಶಯ

ಮೂಲ : ಲಾವೋ ತ್ಸು | ಮರು ನಿರೂಪಣೆ : ಚಿದಂಬರ ನರೇಂದ್ರ ಯಾವುದು ಪರಿಪೂರ್ಣವೋ ಅದರ ಮೇಲೆಯೇ ಕಳಂಕದ ಆರೋಪ, ಆದರೂ ಬಾಗಿಲು ತೆರೆಯಿರಿ ಈ ಬೆಳಕನ್ನು ಮೊಗೆದು ಮೊಗೆದು ಬಳಸಿರಿ. ಯಾವುದು ತುಂಬಿಕೊಂಡಿದೆಯೋ ಅದರ ಮೇಲೆಯೇ ಖಾಲೀ ಎನ್ನುವ ಆಪಾದನೆ ಬೊಗಸೆ ಒಡ್ಡಿ, ದಾಹ ತೀರುವಷ್ಟು ಕುಡಿಯಿರಿ ಇದು ತೀರದ ಬಾವಿ. ಪಕ್ಕಾ ನೇರವಾಗಿರುವುದು, ಬಾಗಿದ ಹಾಗೆ ಕೌಶಲ್ಯ, ಮಹಾ ಕಠಿಣ ಸರಾಗ ಮಾತು ಕೂಡ, ಒಂದು ಥರದ ಉಗ್ಗು. ಚಳಿಯಾದರೆ ನಡೆಯುತ್ತಾ ಇರಿ […]

ತಾವೋ ತಿಳಿವು #50 ~ ಸಂತನಿಗೆ ಸಮಸ್ಯೆಯೇ ಅಲ್ಲ!

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಕೆಲಸದಲ್ಲಿ ದುಡಿಮೆ ಬೇಡ, ಹೆದೆಯೇರಿಸಿದರೂ ಸ್ನಾಯುಗಳು ಮೈ ಮುರಿಯದಿರಲಿ, ಕಣ್ಣೀರಿನಲ್ಲಿ ಸಮುದ್ರ ಕಾಣಿಸಲಿ, ಕೆಲವನ್ನು ಹಲವೆಂದು ಬಗೆ, ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ದೊಡ್ಡ ಬೆಟ್ಟವನ್ನು ಹತ್ತು. ಮಹತ್ವಕ್ಕೆ ಕೈಚಾಚದಿರುವುದರಿಂದಲೇ ಸಂತ ಮಹಾತ್ಮನಾಗಿದ್ದಾನೆ; ಹುಲಿ ಏರಿ ಬಂದಾಗ ಅವ ಓಡಿ ಹೋಗುವುದಿಲ್ಲ ಅದನ್ನು ಹಾರಿ ತಬ್ಬಿಕೊಳ್ಳುತ್ತಾನೆ; ಪರಿಹಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಂತೆಯೇ ಅವನಿಗೆ ಸಮಸ್ಯೆ, ಸಮಸ್ಯೆಯೇ ಅಲ್ಲ.

ತಾವೋ ತಿಳಿವು #49 ~ ಊರಿನ ದೊರೆ ಐಲಾದರೆ….

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಹಗುರ, ಸಾಮಾನ್ಯ ಅಲ್ಲ ಬೇರು ಭಾರೀ ಗಟ್ಚಿ. ಯಾವುದು ನಿಶ್ಚಲವೋ ಅದೇ ಎಲ್ಲ ಚಲನೆಯ ಮೂಲ. ಅಂತೆಯೇ ಸಂತ ಎಲ್ಲ ಕಡೆ ಕಾಣಿಸಿಕೊಂಡರೂ ಮನೆ ಮಾತ್ರ ಬಿಟ್ಟು ಹೋಗಿರುವುದಿಲ್ಲ. ಎಷ್ಚೇ ಆಕರ್ಷಣೆಗಳಿದ್ದಾಗಲೂ ಕೊಂಚವೂ ಉದ್ವಿಗ್ನನಾಗಿರುವುದಿಲ್ಲ. ಆದರೆ, ಊರಿನ ದೊರೆ ಐಲಾದರೆ ಜನರ ಕಣ್ಣಲ್ಲಿ ಹಗುರ. ಹಗುರ ಆಗುತ್ತಿದ್ದಂತೆಯೇ ದಿಕ್ಕು ತಪ್ಪುತ್ತದೆ, ಮನೆಯ ವಿಳಾಸ ಮರೆತುಹೋಗುತ್ತದೆ.

ತಾವೋ ತಿಳಿವು #48 ~ ಸಂತ ಕಂಡದ್ದನ್ನಷ್ಟೆ ನಂಬುತ್ತಾನೆ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಬಣ್ಣ ಕಾರಣ ಕಣ್ಣ ಕುರುಡಿಗೆ ಕಿವಿಯ ಕಿವುಡಿಗೆ ಶಬ್ದವು. ಸ್ವಾದ, ಪರಿಮಳ, ರುಚಿಗೆ ಕಂಟಕ ಹೊಳಹು ಬುದ್ಧಿಗೆ ವೈರಿಯು. ಜೂಜು, ಬೇಟೆ, ಮನದ ಸೊಕ್ಕು ಬಯಕೆ, ಭಯಕೆ ಬೀಜವು. ಕಣ್ಣು ಕಂಡ ಬೆರಗ ಸೋಸಿ ಚೆಲುವ ಬಸಿಯಿತು ಮಮತೆಯು ಬೆಳಕ ಕಳಚಿ ಇರುಳ ರಮಿಸಿ ಸಂತ ಜಗಕೆ ತಾಯಿಯು.

ತಾವೋ ತಿಳಿವು #44 ~ ಉಸಿರಿನ ಹಾಗೆ ಸರಾಗ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಖಾಲಿ ಕಣಿವೆಯ ಚೈತನ್ಯ, ಅನನ್ಯ. ಅಂತೆಯೇ ತಾವೋ ಮಹಾಮಾಯಿ ಸಕಲ ಜಗತ್ತುಗಳ ಹಡೆದವ್ವ. ಗಾಳಿಯ ಹಾಗೆ, ಕಾಣಿಸದಿದ್ದರೂ ಉಸಿರಿನ ಹಾಗೆ ಸರಾಗ.