ತಾವೋ ತಿಳಿವು #25 ~ ತಾವೋದಲ್ಲಿ ಒಂದಾಗುವುದೆಂದರೆ ಹೀಗೆ….

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತಾವೋದಲ್ಲಿ ಒಂದಾದವನು ಈಗ ತಾನೇ ಹುಟ್ಚಿದ ಹಸುಗೂಸಿನಂತೆ. ಮೂಳೆಗಳು ಮೃದು, ಸ್ನಾಯುಗಳು ನಾಜೂಕು ಆದರೂ ಹಿಡಿತ ಮಾತ್ರ ಭಾರಿ ಬಿಗಿ. ಗಂಡು ಹೆಣ್ಣಿನ ಕೂಡುವಿಕೆಯ ಬಗ್ಗೆ ಗೊತ್ತಿರದಿದ್ದರೂ ಶಿಶ್ನ ಮಾತ್ರ ನಿಗುರಿ ನಿಲ್ಲಬಲ್ಲದು ಅಷ್ಟೊಂದು ಉತ್ಕಟ ಜೀವ ಶಕ್ತಿ. ರಾತ್ರಿಯಿಡೀ ಕಿರುಚಬಲ್ಲದಾದರೂ ದನಿ, ಒರಟಾಗಿದ್ದೇ ಇಲ್ಲ. ತಾವೋದಲ್ಲಿ ಒಂದಾಗುವುದೆಂದರೆ ಹೀಗೆ…. ಸಂತನ ಶಕ್ತಿಯೆಂದರೆ, ರಾಗ ದ್ವೇಷಗಳಿಲ್ಲದೆ ಎಲ್ಲವೂ ನಿರಾಯಾಸವಾಗಿ ಬಂದು ಹೋಗುವುದನ್ನು ಆಸಕ್ತಿಯಿಂದ ಗಮನಿಸುವುದು. […]

ತಾವೋ ತಿಳಿವು #13 : ತಾವೋ ಯಾಕೆ ಶಾಶ್ವತ?

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತಾವೋ ಶಾಶ್ವತ, ಅನಂತ. ಯಾಕೆ ಶಾಶ್ವತ ? ಅದು ಹುಟ್ಟೇ ಇಲ್ಲ ಎಂದಮೇಲೆ ಸಾಯುವ ಮಾತೆಲ್ಲಿಂದ ಬಂತು. ಯಾಕೆ ಅನಂತ ? ಸ್ವಂತದ್ದು ಏನೂ ಇಲ್ಲ ಎಂದಮೇಲೆ ಎಲ್ಲಕ್ಕೂ ಒದಗಬಲ್ಲದು ಎಂದೇ ಅರ್ಥ. ಸಂತ ಹಿಂದಿದ್ದಾನೆ, ಹಾಗೆಂದೇ ತಾವೋ ಮುಂದಿದೆ. ಯಾವುದಕ್ಕೂ ಅಂಟಿಕೊಂಡಿಲ್ಲ ಎಂದೇ ಎಲ್ಲದರಲ್ಲೂ ಒಂದಾಗಿದೆ. ತನ್ನಿಂದ ತನ್ನನ್ನು ಕಳೆದುಕೊಂಡಿದ್ದರಿಂದಲೇ ಪರಿಪೂರ್ಣವಾಗಿ ಮೈದುಂಬಿಕೊಂಡಿದೆ.

ತಾವೋ ತಿಳಿವು #11 : ನಿಜದ ನಾಯಕರಿವರು…

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ನಿಜದ ನಾಯಕರು ಹಿಂಬಾಲಕರಿಗೂ ಅಪರಿಚಿತರು. ಆಮೇಲೆ, ಜನ ಗೌರವಿಸುವ ನಾಯಕರು ನಂತರ, ಜನರನ್ನು ಹೆದರಿಸುವವರು ಜನರ ತಾತ್ಸಾರಕ್ಕೆ ಒಳಗಾದವರು ಕೊನೆಯವರು. ಜನರನ್ನು ನಂಬದೇ ಹೋದರೆ ಜನ ನಂಬಿಕೆ ಕಳೆದುಕೊಳ್ಳುತ್ತಾರೆ ಉತ್ತಮರಿಗೆ ಮಾತಿಗಿಂತ ಕೆಲಸದಲ್ಲಿ ಹೆಚ್ಚು ಹುರುಪು ಅವರು ಕೆಲಸ ಮಾಡುವ ರೀತಿ ಹೇಗಿರುತ್ತದೆಯೆಂದರೆ ಜನರಿಗೆ ತಾವೇ ಕೆಲಸ ಮಾಡಿದಷ್ಟು ತೃಪ್ತಿ.

ತಾವೋ ತಿಳಿವು #6 : ಭರವಸೆ ಭಯದಷ್ಟೇ ಪೊಳ್ಳು!

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಗೆಲುವು ಸೋಲಿನಷ್ಟೇ ಅಪಾಯಕಾರಿ ಭರವಸೆ, ಭಯದಷ್ಟೇ ಪೊಳ್ಳು. ಗೆಲುವು ಸೋಲಿನಷ್ಟೇ ಅಪಾಯಕಾರಿ ಹಾಗೆಂದರೇನು? ಒಡೆಯನಾದವನು ಇನ್ನೊಬ್ಬನ ಆಳು ವಿಶ್ವಾಸ ಗಳಿಸುವುದು ಕಳೆದುಕೊಳ್ಳುವುದು ಎರಡೂ ಆತಂಕದ ವಿಷಯಗಳೇ ಆದ್ದರಿಂದಲೇ, ಗೆಲುವು ಸೋಲಿನಷ್ಟೇ ಅಪಾಯಕಾರಿ. ಭರವಸೆ, ಭಯದಷ್ಟೇ ಪೊಳ್ಳು. ಹಾಗೆಂದರೇನು? ಭಯ-ಭರವಸೆ ‘ನಾನು’ ಹುಟ್ಟಿಸಿದ ಅತೃಪ್ತ ಅವಳಿಗಳು ‘ನಾನು’ ನಾನಾಗಿ ಉಳಿಯದ ಮೇಲೆ ಭಯಕ್ಕೆಂಥ ಭರವಸೆ? ಭರವಸೆಗೆಲ್ಲಿ ಭಯ? ಜಗತ್ತು ಸ್ವಂತ ಆದಾಗ ಮಾತ್ರ ಪ್ರೀತಿಸುವುದು ಸುಲಭ ಸಾಧ್ಯ.

ತಾವೋ ತಿಳಿವು #2

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ           ಇರುವುದು ಮತ್ತು ಇರದಿರುವುದು ಹುಟ್ಟಿಸುತ್ತವೆ ಒಂದನ್ನೊಂದು. ಸರಳ ಮತ್ತು ಸಂಕೀರ್ಣ, ಆಸರೆ ಒಂದಕ್ಕೊಂದು. ದೂರ – ಸಮೀಪ ವ್ಯಾಖ್ಯಾನ ಮಾಡುತ್ತವೆ, ಒಂದು ಇನ್ನೊಂದನ್ನು. ಆಳ ಮತ್ತು ಎತ್ತರ ಸವಾರಿ ಮಾಡುತ್ತವೆ, ಒಂದರ ಮೇಲೊಂದು. ಭೂತ ಮತ್ತು ಭವಿಷ್ಯ ಹಿಂಬಾಲಿಸುತ್ತವೆ, ಒಂದನ್ನೊಂದು. ಆದ್ದರಿಂದಲೇ ಸಂತನ ಕೆಲಸದಲ್ಲಿ ದುಡಿಮೆ ಇಲ್ಲ, ಕಲಿಸುವಿಕೆಯಲ್ಲಿ ಮಾತಿಲ್ಲ. ತೊಟ್ಟಿಲು ತೂಗುವಲ್ಲಿ ಇರುವಷ್ಟೇ ನಿಷ್ಠೆ ಹೆಣ ಹೊರುವಲ್ಲಿಯೂ; ತಾಯಿಯಾಗಲೊಲ್ಲ, […]

ಕೆಲಸ ಮಾಡುವುದು ಕಷ್ಟವಲ್ಲ, ಸುಮ್ಮನಿರುವುದೇ ಸವಾಲು!

ಅಧ್ಯಾತ್ಮದಲ್ಲಿ ಕ್ರಿಯೆಗಿಂತ ಹೆಚ್ಚು, ಏನನ್ನಾದರೂ ಮಾಡಬೇಕು ಅನ್ನುವ ನಿರ್ದೇಶನಕ್ಕಿಂತ ಹೆಚ್ಚು ‘ಸುಮ್ಮನಿರುವಿಕೆ’ಗೆ ಮಹತ್ವ ಕೊಡಲಾಗಿದೆ. ಆದ್ದರಿಂದ, ಎಷ್ಟು ಬಾರಿ, ಎಷ್ಟು ಬಗೆಯಲ್ಲಿ ಇದರ ಚರ್ಚೆ ನಡೆಸಿದರೂ ಕಡಿಮೆಯೇ. ಅಧ್ಯಾತ್ಮ ಪಥಗಳಲ್ಲಿ ಸುಮ್ಮನಿರುವಿಕೆಯ ಬಗ್ಗೆ ಹೆಚ್ಚು ಸರಳ ಮತ್ತು ನೇರವಾಗಿ ಹೇಳುವುದು ‘ದಾವ್’. ಅದರದೊಂದು ಹೊಳಹನ್ನಿಲ್ಲಿ ನೋಡೋಣ.  ನದಿ ಹರೀತಿದೀನಿ ಅಂದುಕೊಳ್ತೀವಿ.  ಉಹು…. ಅದು, ಉಗಮ – ಅಂತಗಳ ನಡುವೆ ನಿಂತಿದೆ. ನಾವು ಬಾಳುವೆ ನಡೆಸ್ತಿದೀವಿ ಅಂದು ಕೊಳ್ತೀವಿ. ದಾವ್ ಹೇಳುತ್ತೆ, `ಬಾಳು ಅದರ ಪಾಡಿಗೆ ನಡೆಯುತ್ತೆ. ಅಸ್ತಿತ್ವ […]