ನಾವು ಸಹಜವಾಗಿದ್ದರೆ ನಮ್ಮ ಬದುಕೂ ಅತ್ಯಂತ ಸರಳವಾಗಿರುತ್ತದೆ. ಆದರೆ ನಾವು ಹತ್ತು ಹಲವು ಸಂಕೀರ್ಣತೆಗಳನ್ನು ಹೇರಿಕೊಂಡು ಬದುಕನ್ನು ಸಿಕ್ಕುಸಿಕ್ಕಾಗಿಸಿಕೊಳ್ಳುತ್ತೇವೆ. ದಾವ್, ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ನಮ್ಮ ಬದುಕನ್ನು ಹೇಗಿಟ್ಟುಕೊಳ್ಳಬೇಕೆಂದು ತಿಳಿಸುತ್ತದೆ. ಅವುಗಳಲ್ಲಿ 10 ಹೇಳಿಕೆಗಳನ್ನಾಯ್ದು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿ ನೀಡಲಾಗಿದೆ.
ಆರಂಭ : The Beginning ~ ತಾವೋ ಧ್ಯಾನ – 1
ಅಧ್ಯಾತ್ಮಿಕ ಸಾಧನೆಗಾಗಿ ಜಗತ್ತಿನೊಡನೆ ನಾವು ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಂತೆಯೇ, ಪರ್ವತಗಳೂ, ಕಣಿವೆಗಳು, ಝರಿ, ನದಿ, ಸಮುದ್ರಗಳೂ ಮತ್ತು ಸಮಸ್ತ ಪ್ರಕೃತಿ ನಮ್ಮ ಸಂಕಲ್ಪದ ದನಿಯನ್ನು ಪ್ರತಿಧ್ವನಿಸಲು ಶುರು ಮಾಡುತ್ತವೆ ~ ಡೆಂಗ್ ಮಿಂಗ್-ದಾವೋ | ಅನುವಾದ : ಚಿದಂಬರ ನರೇಂದ್ರ ಇದು ಆರಂಭದ ಘಳಿಗೆ, ಎಲ್ಲ ಶುಭ ಶಕುನಗಳು ನಮ್ಮನ್ನು ಸ್ವಾಗತಿಸಲು ಸಿದ್ಧವಾಗಿವೆ. ~ ಆರಂಭದಲ್ಲಿ ಎಲ್ಲವೂ ಆಶಾದಾಯಕ. ಒಂದು ಹೊಸ ಶುರುವಾತಿಗೆ ನಾವು ಸರ್ವ ಸನ್ನದ್ಧರಾಗಿರಾಗುತ್ತಿದ್ದೇವೆ. ಅದ್ಭುತ ಪ್ರಯಾಣಕ್ಕೆ ನಾವು ಸಿದ್ಧರಾಗುತ್ತಿರುವ ಈ ಮೊದಲ ಘಳಿಗೆಯಲ್ಲಿಯೇ ಕೈ […]
ಸುಂದರ ಬದುಕಿಗೆ 8 ತಾವೋ ಸೂತ್ರಗಳು : ಅರಳಿಮರ video
ಯಶಸ್ವಿ ಬದುಕಿಗೆ 10 ತಾವೋ ಸೂತ್ರಗಳು : Be Positive Video
ಶಾಶ್ವತವನ್ನು ಅನುಭವಿಸುವ ವಿಧಾನ : ತಾವೋ ಪದ್ಯ
ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಬ್ರಹ್ಮಾಂಡದ ಹುಟ್ಟಿನಲ್ಲಿ ನಮ್ಮೆಲ್ಲರ ಗುಟ್ಟು. ತಾಯಿಯನ್ನು ಹುಡುಕಾಡುವುದೆಂದರೆ ಮಕ್ಕಳನ್ನು ಮಾತಾಡಿಸುವುದು. ಮಕ್ಕಳ ಹೆಗಲ ಮೇಲೆ ನಿಂತು ತಾಯಿಯನ್ನು ಅಪ್ಪಿಕೊಂಡಾಗ ಸಾವಿಗೂ ಭಯ. ಬಾಯಿ, ಬಾಗಿಲು ಮುಚ್ಚಿದಾಗ ಬದುಕು ತೆರೆದುಕೊಳ್ಳುವುದು. ಮಾತು ಗೆದ್ದಾಗ, ವ್ಯವಹಾರ ದ್ವಿಗುಣವಾದಾಗ ಬದುಕಿಗೆ ಬರೆ. ಸಂತನಿಗೆ ಸಣ್ಣದೂ ಸ್ಪಷ್ಟ ಯೋಧನಿಗೆ ಸೋಲೂ ಒಂದು ಶಕ್ತಿ ತಾವೋ ಬೆಳಕಲ್ಲಿ ಒಳಗಿನದನ್ನು ಕಾಣುವುದೇ ಶಾಶ್ವತವನ್ನು ಅನುಭವಿಸುವ ವಿಧಾನ.
ತಿಳಿವು ಘಟಿಸುವ ಘಳಿಗೆಯೇ ಜ್ಞಾನೋದಯ
ಈವರೆಗೆ ಜ್ಞಾನೋದಯ ಹೊಂದಿದವರೆಲ್ಲರೂ ಹುಟ್ಟು – ಬೆಳವಣಿಗೆಯೊಂದಿಗೆ ತಮ್ಮ ಸುತ್ತ ಕಟ್ಟಿಕೊಂಡ ಗೋಡೆ – ಮಾಡುಗಳನ್ನು ಭಂಜಿಸುವ ಪ್ರಯತ್ನ ನಡೆಸಿದವರೇ. ಆ ಪ್ರಯತ್ನದ ಕೊನೆಯ ಉಳಿಪೆಟ್ಟು ಬಿದ್ದ ಘಳಿಗೆಯೇ ಜ್ಞಾನೋದಯದ ಘಟನೆ ~ ಚೇತನಾ ತೀರ್ಥಹಳ್ಳಿ ವಾಸ್ತವದಲ್ಲಿ ಕತ್ತಲೆಂಬುದಿಲ್ಲ. ಇರುವುದೇನಿದ್ದರೂ ಬೆಳಕಿನ ಗೈರು ಹಾಜರಿಯಷ್ಟೆ. ಬೇಕಿದ್ದರೆ ಪರಿಶೀಲಿಸಿ. ಕತ್ತಲು ತುಂಬಿದ ಕೋಣೆಯಲ್ಲಿ ಒಂದು ದೀಪದ ಕುಡಿ ಬೆಳಕು ತರಬಲ್ಲದು. ಆದರೆ ಬೆಳಕೇ ಬೆಳಕಾಗಿರುವ ಕಡೆ ಕತ್ತಲನ್ನು ತಂದು ತುಂಬಲು ಸಾಧ್ಯವಿಲ್ಲ. ಬೆಳಕನ್ನು ತಡೆದು, ಕೃತಕವಾಗಿ ಕತ್ತಲನ್ನು ಸೃಷ್ಟಿಸಬಹುದು. […]
ಅರಳಿಮರ POSTERS : 10 ದಾವ್ ಚಿಂತನೆಗಳು
ಕೆಲವು ದಾವ್ (ತಾವೋ) ಚಿಂತನೆಗಳ ಪೋಸ್ಟರ್’ಗಳು ಇಲ್ಲಿವೆ. ಸಂಗ್ರಹಿಸಲು ಬಯಸುವವರು ಡೌನ್’ಲೋಡ್ ಮಾಡಿಕೊಳ್ಳಿ….
ಪ್ರಯತ್ನ ಯಾವತ್ತೂ ರಹಸ್ಯವಾಗಿರಲಿ : ತಾವೋ ತಿಳಿವು
‘ಶತಾವರಿ’ ತಾವೋಯಿಸಂ ~ ತಾವೋ ಅಗಣಿತ ಸ್ವರೂಪದ 101 ದಾರಿಗಳು
ಒಂದೇ ಮತ, ಒಂದೇ ಧರ್ಮ ಎಂಬ ಏಕಾಂತ ದೃಷ್ಟಿಗೆ ಬದ್ಧವಾಗದೆ, ಮುಕ್ತವಾದ ಮನಸ್ಸಿನ ಅನೇಕಾಂತ ದಾರಿಗಳ ತೆರೆದಬಾಗಿಲೇ ತಾವೋಮಾರ್ಗ ಅಥವಾ ತಾವೋಯಿಸಂ. ತಾವೋಯಿಸಂ ಹೃದಯಪೂರ್ವಕವಾಗಿ ಬದುಕುವ ಬಗೆಯನ್ನು ವ್ಯಕ್ತಿಗೆ ಕಲಿಸುವುದು. ಯಾರನ್ನೂ ಯಾವುದನ್ನೂ ಕುರುಡಾಗಿ ಅನುಸರಿಸದೆ ಕಣ್ಣು ತೆರೆದು ಎಚ್ಚರದಿಂದ ನಡೆಯಬೇಕೆಂದು ಹೇಳುವುದು ~ ಚಂದ್ರಶೇಖರ ನಂಗಲಿ ಸಾಹಿತ್ಯ ಲೋಕದಲ್ಲಿ ‘ಶತಕ’ ಎಂಬ ಪ್ರಕಾರವಿದೆ. ಯಾವುದಾದರೊಂದು ಛಂದೋ ಪ್ರಕಾರದಲ್ಲಿ ಕವಿಯೊಬ್ಬ ನೂರಕ್ಕೂ ಮೇಲ್ಪಟ್ಟು ಪದ್ಯರಚನೆ ಮಾಡಿದರೆ ಅದನ್ನು ‘ಶತಕ’ ಎಂದು ಕರೆಯಬಹುದು. ಶತಕ (ನೂರು) ಸಾಹಿತ್ಯಕ್ಕೆ ನಿರ್ದಿಷ್ಟ ಸಂಖ್ಯಾಮಿತಿಯಿಲ್ಲ. […]
ಅದೃಶ್ಯತೆ : ತಾವೋ ಧ್ಯಾನ ~ 25
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸುಮ್ಮನೇ ನಮ್ಮ ಪಾಡಿಗೆ ನಾವು ಯಾವ ಅಬ್ಬರವೂ ಇಲ್ಲದೆ, ಯಾರನ್ನೂ ನಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡದೇ ಮುನ್ನಡೆಸಿಕೊಂಡು ಹೋಗುವುದು ತಾವೋ ಸ್ವಭಾವ ~ ಡೆಂಗ್ ಮಿಂಗ್ ದಾವೋ | ಚಿದಂಬರ ನರೇಂದ್ರ ಅದೃಶ್ಯತೆ ಒಂದು ಅದ್ಭುತ ಅವಶ್ಯಕತೆ ಸಂಘರ್ಷ, ಕೈ ಎಳೆದು ಕರೆದಾಗ ಬಂಗಾರದ ಖಡ್ಗವನ್ನು ಹಿರಿದು ನಿಲ್ಲು. ~ ಹಲವಾರು ವರ್ಷಗಳ ಹಿಂದೆ ಒಬ್ಬ ವೃದ್ಧ, ರಸ್ತೆ ಬದಿಯಲ್ಲಿ ಅಂಗಡಿ ಹಾಕಿಕೊಂಡು ಬಡ ಬಗ್ಗರಿಗೆ ಸಂಧಿವಾತದ ಔಷಧಿ ಕೊಡುತ್ತಿದ್ದ. ಒಂದು ದಿನ […]