ತಿಳಿವು ಪಡೆದ ಮೇಲೆ ಪರಿಕರದ ಹಂಗೇಕೆ? : ಬೆಳಗಿನ ಹೊಳಹು

ಪರಿಕರಗಳೇ ಜ್ಞಾನವಲ್ಲ. ಅವನ್ನು ಬಳಸಿ, ಜ್ಞಾನವನ್ನು ಹೊಂದಿದ ಮೇಲೂ ಪರಿಕರಗಳಿಗೆ ಜೋತುಬೀಳಬಾರದು. ಅದನ್ನು ಬಿಟ್ಟು ಮುನ್ನಡೆಯಬೇಕು. ಗ್ರಂಥಾನಭ್ಯಸ್ಯ ಮೇಧಾವೀ ಜ್ಞಾನವಿಜ್ಞಾನತತ್ಪರಃ ಪಲಾಲಮಿವ ಧಾನ್ಯಾರ್ಥೀ ತ್ಯಜೇತ್ಸರ್ವಮಶೇಷತಃ || ಸುಭಾಷಿತ || “ಗ್ರಂಥಗಳನ್ನು ಓದಿ ಜ್ಞಾನಿಯಾಗುವ ಅಭ್ಯಾಸಿಯು, ಅಧ್ಯಯನದ ನಂತರ ಅವುಗಳ ಹಂಗಿನಿಂದ ಹೊರಗೆ ಬರಬೇಕು. ಧಾನ್ಯವನ್ನು ಪಡೆಯಲಿಚ್ಛಿಸುವವನು ಉಳಿದೆಲ್ಲವನ್ನೂ ತೂರಿ, ಕಾಳುಗಳನ್ನು ಮಾತ್ರ ಇಟ್ಟುಕೊಳ್ಳುವಂತೆ, ಜ್ಞಾನವನ್ನು ಮಾತ್ರ ತನ್ನಲ್ಲಿ ಇರಿಸಿಕೊಳ್ಳಬೇಕು” ಎನ್ನುತ್ತದೆ ಒಂದು ಸುಭಾಷಿತ. ನಾವು ಸಾಮಾನ್ಯವಾಗಿ ಪರಿಕರಗಳ ಮೇಲೆ ಮೋಹ ಬೆಳೆಸಿಕೊಂಡುಬಿಡುತ್ತೇವೆ. ಬೋಧೆಗಿಂತ ಬೋಧಕರ ಮೇಲೆ, ಅರಿವಿಗಿಂತ […]

ನೆಮ್ಮದಿಯ ಬದುಕಿಗೆ 10 ದಾವ್ ಸೂತ್ರಗಳು : Be Positive Video

ನಾವು ಸಹಜವಾಗಿದ್ದರೆ ನಮ್ಮ ಬದುಕೂ ಅತ್ಯಂತ ಸರಳವಾಗಿರುತ್ತದೆ. ಆದರೆ ನಾವು ಹತ್ತು ಹಲವು ಸಂಕೀರ್ಣತೆಗಳನ್ನು ಹೇರಿಕೊಂಡು ಬದುಕನ್ನು ಸಿಕ್ಕುಸಿಕ್ಕಾಗಿಸಿಕೊಳ್ಳುತ್ತೇವೆ.  ದಾವ್, ವೈಯಕ್ತಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ನಮ್ಮ ಬದುಕನ್ನು ಹೇಗಿಟ್ಟುಕೊಳ್ಳಬೇಕೆಂದು ತಿಳಿಸುತ್ತದೆ. ಅವುಗಳಲ್ಲಿ 10 ಹೇಳಿಕೆಗಳನ್ನಾಯ್ದು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿ ನೀಡಲಾಗಿದೆ.   

ತಳವಿಲ್ಲದ ಕೊಳವಾಗಬೇಕು… : ಝೆನ್ ತಿಳಿವು

ಈ ತಳವಿಲ್ಲದ ನಿಗೂಢ ಕೊಳದಾಚೆ ತುದಿಯಲ್ಲಿ ಸತ್ಯ ದರ್ಶನವಾಗುವುದು. ಅದರ ಹಾದಿಗುಂಟದ ನಡಿಗೆಯ ಅನುಭವ ಅತ್ಯಂತ ರಹಸ್ಯ. ಈ ಕೊಳದಲ್ಲಿ ನೀರು ಇರುವಂತೆ ತೋರುವುದಷ್ಟೆ. ಆದರೆ ವಾಸ್ತವದಲ್ಲಿ ಇರದು ~ ಅಲಾವಿಕಾ ತಳವಿಲ್ಲದಾಳಕ್ಕೆ ಒಂದು ಕಲ್ಲು, ಕಂಪನಕ್ಕೆ ಕಾಯೋದು ಎಂಥ ಮರುಳು! ಝೆನ್ ತಳವಿಲ್ಲದ ಕೊಳದ ಬಗ್ಗೆ ಹೇಳುತ್ತೆ. ಎಲ್ಲ ಕೊಳದ ಕೊಳ, ತಳವಿಲ್ಲದಾಳದ ಕೊಳ; ಎಲ್ಲ ರಹಸ್ಯಗಳ ಹೆಬ್ಬಾಗಿಲು ತಾನು ಎಂದು ಹೇಳಿಕೊಳ್ಳುತ್ತೆ ಝೆನ್. ತಳವಿಲ್ಲದಾಳ… ಬಹುಶಃ ಅದರ ಆಚೆ ತುದಿ ಮುಕ್ತವಾಗಿಯೇ ಇದೆಯೇನೋ. ಅದಂತೂ ಸಧ್ಯಕ್ಕೆ […]

ಲಾವೋ ತ್ಸು’ವಿಗೆ ಹೀಗನಿಸಿತು… : ಅರಳಿಮರ POSTER

“ನೆಲೆ ಕಳಚಿದ ಎಲೆ ಮುಂದೇನು ಎಂದು ಯೋಚಿಸುತ್ತದೆಯೇ? ಅಸ್ತಿತ್ವ ಅದರ ಕಾಳಜಿ ವಹಿಸುತ್ತೆ. ಕಾಲದ ಹರಿವಿನ ಜೊತೆಗೆ ಅದು ಸದ್ಯಕ್ಕೆ ಹುಲ್ಲು ಹಾಸಿನ ಮೇಲೆ ನೆಲೆಸಿದೆ. ಮತ್ತೆ ಹರಿವಿನ ಜೊತೆಗೇ ಅದರ ಭವಿಷ್ಯವೂ ನಿರ್ಧಾರವಾಗುತ್ತೆ” ಎಂದು ಲಾವೋ ತ್ಸುಗೆ ಅನಿಸಿತು… ಲಾವೋ ತ್ಸು, ಚೀನಾದ ಮಹಾ ದಾರ್ಶನಿಕ. ಝೆನ್ ಕವಲಿನ ಅನುಭಾವಿ ಸಂತ. ಅವನು ತನ್ನ ಸ್ವಂತ ತಿಳಿವನ್ನಾಧರಿಸಿ ತನ್ನದೇ ಆದ ದಾರಿಯೊಂದನ್ನು ಹಾಕಿಕೊಂಡ. ಅದನ್ನು `ದಾವ್’ ಎಂದು ಕರೆದ. ದಾವ್ ಎಂದರೇನೇ `ದಾರಿ’. ಪ್ರತಿಯೊಬ್ಬರೂ ತಮ್ಮ […]

ಅರೇಬಿಯಾದ ತಿಳಿವು : ಪ್ರಯಾಣದ ಕುರಿತು ~ ಅರಳಿಮರ POSTER

ನಿಂತಿದ್ದು ಕೊಳೆಯುತ್ತದೆ ಎನ್ನುವುದು ಎಲ್ಲ ದೇಶಕಾಲಗಳು ಸಾಬೀತುಪಡಿಸಿರುವ ಸತ್ಯ. ಅರೇಬಿಯಾದ ಪ್ರಾಚೀನ ತಿಳಿವು ಕೂಡಾ ಇದನ್ನು ಹೀಗೆ ಹೇಳಿದೆ ನೋಡಿ: ಪ್ರಯಾಣದ ಲಾಭ ಹಲವು; ಬೆಲೆ ಕಟ್ಟಲಾಗದ ಉತ್ಸಾಹ, ಕಲಿಕೆ ನಿಮ್ಮದಾಗುವವು. ನಿಂತಲ್ಲೇ ಉಳಿದರೆ ನೀರು, ಪಾಚಿಗಟ್ಟಿ ಹುಳು ಹರಿಯುವುದು. ಗುಹೆಯಲ್ಲೇ ಕೂತು ಅಬ್ಬರಿಸುವ ಸಿಂಹಕ್ಕಿಂತ ಅಲೆಮಾರಿ ನಾಯಿ ಮೇಲು.  ಪ್ರಯಾಣ ಮನುಷ್ಯನ ಯೋಗ್ಯತೆಗೆ ಒರೆಗಲ್ಲು. ಪ್ರಯಾಣ ಶುರುವಾದ ದಿನವೇ, ಅದು ಅರ್ಧ ಮುಗಿಯಿತೆಂದು ತಿಳಿ. ಮೂಲ : ಅರೇಬಿಯನ್ ವಿಸ್ಡಮ್ | ಸಂಗ್ರಹ ಮತ್ತು ಅನುವಾದ […]

ತಾವೋ ತಿಳಿವು #4 : ‘ತಾವೋ’ ವನ್ನು ಅರೆದು ಕುಡಿದವರು

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಒಂದಾನೊಂದು ಕಾಲದಲ್ಲಿ ‘ತಾವೋ’ ವನ್ನು ಅರೆದು ಕುಡಿದವರು ಕಣ್ಣಿಗೆ ಕಾಣಿಸಿಯೂ ಕಾಣಿಸದಷ್ಟು ಕೈಗೆ ಸಿಕ್ಕೂ ಸಿಗದಷ್ಟು ಸೂಕ್ಷ್ಮರೂ, ನಿಗೂಢರೂ, ಹರಿತ ಜಗಳಗಂಟರೂ ಆಗಿದ್ದರು. ಅವರ ಆಳ, ಅಗಲಗಳನ್ನು ಬಲ್ಲವರಿಲ್ಲವಾದ್ದರಿಂದ ಅವರು ಹೇಗಿದ್ದಿರಬಹುದು ಎಂದು ನಾನು ಊಹೆ ಮಾತ್ರ ಮಾಡಬಲ್ಲೆ. ~ ಚಳಿಗಾಲದ ನದಿಯಲ್ಲಿ ನಡೆಯುವವರಂತೆ ಹೆಜ್ಜೆ ಮೇಲೆ ಹೆಜ್ಜೆ ಇಡುವವರು, ಪಕ್ಕದ ಮನೆಯ ಕಿಟಕಿಯ ಬಗ್ಗೆ ಮೈಯೆಲ್ಲ ಕಣ್ಣಾದವರು, ಮನೆಗೆ ಬಂದ ದೂರದ ನೆಂಟರಂತೆ ವಿನಮ್ರರು ಮತ್ತು […]