ತುಳಸಿ ಎಂಬ ವೃಂದಾ ದೇವಿಯ ಕಥೆ ಗೊತ್ತೇ?

ತುಳಸಿ ಇಷ್ಟೊಂದು ಮಹತ್ವ ಪಡೆದಿರುವುದು ತನ್ನ ಔಷಧೀಯ ಗುಣಗಳಿಂದ ಅನ್ನುವುದು ಒಂದು ಕಾರಣವಾದರೆ, ಶ್ರದ್ಧಾವಂತರು ಮತ್ತು ಆಸ್ತಿಕರ ಪಾಲಿಗೆ ಮತ್ತೊಂದು ಭಾವುಕ ಕಾರಣವೂ ಇದೆ. ಅದು, ವೃಂದಾ ದೇವಿಯ ಜೀವನಗಾಥೆ…. (ಇಂದು ಉತ್ಥಾನ ದ್ವಾದಶಿ – ತುಳಸೀ ಪೂಜೆ) ~ ಗಾಯತ್ರಿ  ತುಳಸಿ ನಾವು ದಿನನಿತ್ಯ ಒಡನಾಡುವ ದೇವತೆ. ನಮ್ಮ ಚಿಕ್ಕಪುಟ್ಟ ಆರೋಗ್ಯಬಾಧೆಗಳಿಗೆಲ್ಲ ಕೈಚಾಚಿನಲ್ಲಿ ಒದಗಿಬರುವ ಮಹಾಮಾತೆ. ಕೆಮ್ಮು, ಗಂಟಲ ಸಮಸ್ಯೆ, ಶೀತ, ಸೊಳ್ಳೆಗಳ ಕಾಟ, ತಲೆ ನೋವು, ಕೆಲಸದ ಒತ್ತಡ – ಅದೇನೇ ಇದ್ದರೂ ತುಳಸಿಯ […]

ಒಂದು ದಳ ಶ್ರೀ ತುಳಸಿ ಪರಮಾತ್ಮಗರ್ಪಿಸಿ….

ಇಂದು ತುಳಸಿ ಪೂಜೆ. ಸಾಗರ ಮಥನ ನಡೆದಾಗ ದೊರೆ ಅಮೃತ ಕಲಶವನ್ನು ಹಿಡಿದು ವಿಷ್ಣು ಆನಂದ ಬಾಷ್ಪ ಸುರಿಸಿದನಂತೆ. ಅದರ ಕೆಲವು ಹನಿ ಕಲಶದಲ್ಲಿ ಬಿದ್ದು ಹೊರಹೊಮ್ಮಿದ ‘ತುಲನೆಯಿಲ್ಲದ’ ಸಸಿಯೇ ತುಲಸಿ (ತುಳಸಿ) ಎನ್ನುತ್ತವೆ ಪುರಾಣಗಳು. ಈ ವಿಶೇಷ ದಿನದಂದು ತುಳಸಿಯ ಮಹತ್ತನ್ನು ಸಾರುವ ಕಥೆ ಇಲ್ಲಿದೆ… ಕೃಷ್ಣನ ಅಷ್ಟಮಹಿಷಿಯರಲ್ಲಿ ರುಕ್ಮಿಣಿ ಮತ್ತು ಸತ್ಯಭಾಮೆಯರ ಮಹತ್ವ ಹೆಚ್ಚು. ಅವರ ಕಥನಗಳು ಭಾಗವತ, ಪುರಾಣಗಳಲ್ಲೂ ಪ್ರಕ್ಷೇಪಗಳಲ್ಲೂ ಸಾಕಷ್ಟು ಕಾಣಿಸಿಕೊಂಡಿವೆ. ಸದಾ ರುಕ್ಮಿಣಿಯ ಜೊತೆ ಪೈಪೋಟಿಗೆ ಇಳಿಯುವುದು ಸತ್ಯಭಾಮೆಗೊಂದು ರೂಢಿ. […]