ನಾರದ ಪುರಾಣದಲ್ಲಿರುವ ದತ್ತಾತ್ರೇಯ ಸ್ತೋತ್ರ; ಕನ್ನಡ ಅರ್ಥ ಸಹಿತ ~ ನಿತ್ಯಪಾಠ

ನಾರದ ಪುರಾಣದಲ್ಲಿರುವ ದತ್ತಾತ್ರೇಯ ಸ್ತೋತ್ರದ ಪೂರ್ಣಪಾಠವನ್ನು ಕನ್ನಡ ಅರ್ಥ ಸಹಿತ ಇಲ್ಲಿ ನೀಡಲಾಗಿದೆ… ದತ್ತಾತ್ರೇಯರು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಹಾಗೂ ಮಹೇಶ್ವರ ಮೂರೂ ದೇವರುಗಳ ಒಟ್ಟಾಗಿನ ಅವತಾರ. ಅತ್ರಿ ಮುನಿಗಳ ಪತ್ನಿಯಾದ ಮಾತೆ ಅನಸೂಯ ದೇವಿಯಿಂದಾಗಿ ದತ್ತಾತ್ರೆಯರು ಅವತಾರ ತಾಳಿದರು. ಪೌರಾಣಿಕ ಹಿನ್ನೆಲೆಯ ಪ್ರಕಾರ ನಾರದ ಮುನಿಗಳು ಸರಸ್ವತಿ ಲಕ್ಷ್ಮಿ ಹಾಗೂ ಪಾರ್ವತಿಯರಿಗೆ ಸತಿ ಅನಸೂಯಾ ದೇವಿಯು ಅವರೆಲ್ಲರಿಗಿಂತ ಶ್ರೇಷ್ಠಳೆಂದು ತಿಳಿಸಿ ಅವರ ಮನಸ್ಸುಗಳನ್ನು ಕೆಡಿಸಿದರು. ಇದರಿಂದ ಅಸೂಯೆಗೊಂಡ ಮೂರೂ ದೇವಿಯರು ತಮ್ಮ ಪತಿಯರನ್ನು ಅನಸೂಯಳ ಬಳಿಗೆ […]