ಮಹಾವಿಷ್ಣುವಿನ ದಶಾವತಾರ : 10 ಕಾಲಕ್ರಮ ಚಿತ್ರಿಕೆಗಳು

ಭಾರತೀಯ ಪುರಾಣಗಳಲ್ಲಿ ಮಹಾವಿಷ್ಣುವಿನ ಅವತಾರಗಳ ಕಥನ ಅತ್ಯಂತ ರೋಚಕವಾಗಿವೆ. ಪೂರ್ಣಾವತಾರ, ಅಂಶಾವತಾರ, ಆವೇಶಾವತಾರ, ಛಾಯಾವತಾರ ಹೀಗೆ ಭಗವಂತ ಇಪ್ಪತ್ತಕ್ಕೂ ಹೆಚ್ಚು ಅವತಾರ ತಾಳಿದ್ದಾನೆಂದು ಹೇಳಲಾಗಿದ್ದರೂ ‘ದಶಾವತಾರ’ವೆಂದು ಖ್ಯಾತವಾಗಿರುವ 10 ಅವತಾರಗಳಿಗೇ ಹೆಚ್ಚಿನ ಪ್ರಾಶಸ್ತ್ಯ. ಈ ಹತ್ತು ಅವತಾರಗಳ ಉಲ್ಲೇಖದಲ್ಲಿ ಕೂಡಾ ಪಾಠಾಂತರಗಳಿದ್ದು, ಕೆಲವೆಡೆ ಬಲರಾಮನ ಬದಲು ಬುದ್ಧನನ್ನು ಸೂಚಿಸುತ್ತವೆ.  ಈ 10 ಚಿತ್ರಿಕೆಗಳಲ್ಲಿ, ಮಹಾವಿಷ್ಣುವಿನ ಅವತಾರಗಳು ಹಾಗೂ ಅವತಾರಕ್ಕೆ ಕಾರಣಗಳನ್ನು ಕಾಲಾನುಕ್ರಮದಲ್ಲಿ ನೀಡಲಾಗಿದೆ.  1 ಮತ್ಸ್ಯಾವತಾರ 2. ಕೂರ್ಮ 3. ವರಾಹ 4. ನರಸಿಂಹ 5. ವಾಮನ […]

ಭಾರತೀಯ ಪುರಾಣ ಸರಣಿ ~ ದಶಾವತಾರದ ಕಥನಗಳು

ಅವತಾರಗಳ ಪೌರಾಣಿಕ ಕಥನಗಳು ಬಹುಶಃ ಪ್ರಾಚೀನದಲ್ಲಿ ನಡೆದ ಘಟನೆಗಳ ಉತ್ಪ್ರೇಕ್ಷಿತ ಕಥನಗಳೂ ಇರಬಹುದು. ಅಥವಾ ನಿರ್ದಿಷ್ಟ ಮೌಲ್ಯ ಅಥವಾ ಜ್ಞಾನವನ್ನು ಸಾರುವ ಸಂಕೇತಗಳೂ ಇರಬಹುದು. ಧರ್ಮಭೀರುಗಳ ಪಾಲಿಗೆ ಯಥಾವತ್ತಾಗಿ ನಡೆದಿರಬಹುದಾದ ಘಟನೆಗಳು ಅನ್ನುವುದಂತೂ ಸರಿಯೇ. ಈ ಕಥನಗಳು ಬೇರೆ ಯಾವ ಉದ್ದೇಶಗಳೂ ಇಲ್ಲದ ಶುದ್ಧ ಸಾಹಿತ್ಯವೂ ಇರಬಹುದು, ಸಂಪೂರ್ಣವಾಗಿ ಕವಿಕಲ್ಪಿತ ಘಟನೆಗಳಾಗಿಯೂ ಇರಬಹುದು. ಅದೇನೇ ಇದ್ದರೂ, ಯಾವುದೇ ಕಥನದ ಅರ್ಥ ಘಟಿಸುವುದು ನಮ್ಮೊಳಗೆ…. ~ ಅರಳಿಬಳಗ ಭಗವಂತ ಯಾವಾಗ ಯಾವ ರೂಪ ಧರಿಸಿ ಬರುತ್ತಾನೋ ಗೊತ್ತಿಲ್ಲ. ಅಥವಾ ಹೀಗೂ […]