ನಾನಾ ವಿಧದ ನವರಾತ್ರಿ ~ 5 : ಗುಜರಾತಿನ ರಾಸಗರ್ಬಾ, ಮಹಾರಾಷ್ಟ್ರದ ಖಂಡೇ ನವಮಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, ಈ ಕಂತಿನಲ್ಲಿ  ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಮಾಹಿತಿ ಇದೆ.  ಗುಜರಾತಿನ ದಾಂಡಿಯಾ ದಸರೆ! ನವರಾತ್ರಿ ಎಂದಾಕ್ಷಣ ನಮಗೆ ನೆನಪಾಗುವುದು ಗುಜರಾತಿ ಬಂಧುಗಳ ‘ರಾಸ-ಗರ್ಬಾ’ ಮತ್ತು ’ದಾಂಡಿಯಾ ರಾಸ’ ನೃತ್ಯಗಳು. ಇದರ ವೈಭವವನ್ನು ನೋಡಬೇಕೆಂದರೆ ನೀವು ಅಹಮದಾಬಾದಿಗೆ ಬರಬೇಕು. ಆಗ ಊರಿಗೆ ಊರೇ ನರ್ತಿಸುತ್ತಿದೆಯೇನೋ ಎಂಬಷ್ಟು ಸಂಭ್ರಮದ ವಾತಾವರಣ. ನವರಾತ್ರಿಯಲ್ಲಿ  ಗುಜರಾತಿನ ಯಾವ ಮೂಲೆಗೆ ಹೋದರೂ ನೀವು […]