ರೂಮಿ ಹೇಳಿದ್ದು : ಅರಳಿಮರ POSTER

“ಇದು ನಿನ್ನ ದಾರಿ, ಇದು ನಿನ್ನ ಯಾನ. ನಿನ್ನ ಬಾಳಿನ ನಡಿಗೆ ನಿನಗಷ್ಟೇ ಅಧೀನ ” ಅನ್ನುತ್ತಾನೆ ಜಲಾಲುದ್ದೀನ್ ರೂಮಿ ~ ಚೇತನಾ  ಇದು ನಿನ್ನ ದಾರಿ. ಇದು ನಿನ್ನ ಯಾನ. ಮತ್ತೊಬ್ಬರು ನಿನ್ನ ಜೊತೆ ಹೆಜ್ಜೆ ಹಾಕಬಲ್ಲರಷ್ಟೆ. ಹೆಚ್ಚೆಂದರೆ ನಿನ್ನ ದಾರಿಯಲ್ಲಿ ಜೊತೆಯಾಗಿ ನಡೆಯಬಲ್ಲರು. ಆದರೆ ಯಾರೂ ನಿನ್ನ ನಡಿಗೆ ನಡೆಯಲಾರರು. ನಿನ್ನ ಚಲನೆ ನಿನ್ನ ಅಧೀನದಲ್ಲಷ್ಟೆ ಇರುವುದು” ಅನ್ನುತ್ತಾನೆ ಸೂಫಿ ಕವಿ ಜಲಾಲುದ್ದೀನ್ ರೂಮಿ.  ನಮ್ಮ ನಮ್ಮ ಜೀವನದ ಪ್ರಯಾಣವನ್ನು ನಾವಷ್ಟೆ ಮಾಡಲು ಸಾಧ್ಯ. […]

ದೇವರೊಬ್ಬನೇ, ದಾರಿ ಬೇರೆ ಬೇರೆ…. : ಅರಳಿಮರ POSTER

ಧರ್ಮ, ಬದುಕನ್ನು ಸ್ವಸ್ಥವೂ ಸುಂದರವೂ ಆಗಿಸಿಕೊಳ್ಳಲೆಂದೇ ಇರುವ ದಾರಿ. ಸಹಜೀವಿಗಳೊಡನೆ ಸೌಹಾರ್ದದ ಬದುಕು ಬಾಳಲು ಮನುಷ್ಯ ತನಗೆ ತಾನೆ ಹಾಕಿಕೊಂಡ ನಿಯಮ. ದಾರಿ ಅಂದ ಮೇಲೆ ಅದು ಒಂದಕ್ಕೆ ಸೀಮಿತವಲ್ಲ. ಸೃಷ್ಟಿಯೊಂದು ಬಯಲು. ಬಯಲಲ್ಲಿ ಯಾರು ಎಲ್ಲಿ ನಡೆಯುತ್ತಾರೋ ಅದೆಲ್ಲವೂ ದಾರಿಯೇ.  ಕೆಲವರು ಒಬ್ಬರು ನಡೆದ ದಾರಿಯನ್ನೇ ಅನುಸರಿಸಿ, ಈ ಅನುಚರರ ಸಂಖ್ಯೆ ಹೆಚ್ಚಾಗಿದ್ದಿರಬಹುದು. ಇನ್ನು ಕೆಲವು ದಾರಿಗಳಲ್ಲಿ ಕಡಿಮೆ ಸಂಖ್ಯೆಯ ಪಥಿಕರಿರಬಹುದು. ಆಯಾ ದಾರಿಗೊಂದು ಗುರುತಿನ ಅನುಕೂಲಕ್ಕಾಗಿ ಹೆಸರು ಕೊಟ್ಟಿರಬಹುದು. ಕೆಲವು ನಿಶ್ಶಬ್ದ ದಾರಿಗಳು ಹೆಸರಿಲ್ಲದೆಯೂ […]

‘ಶತಾವರಿ’ ತಾವೋಯಿಸಂ ~ ತಾವೋ ಅಗಣಿತ ಸ್ವರೂಪದ 101 ದಾರಿಗಳು

ಒಂದೇ ಮತ, ಒಂದೇ ಧರ್ಮ ಎಂಬ ಏಕಾಂತ ದೃಷ್ಟಿಗೆ ಬದ್ಧವಾಗದೆ, ಮುಕ್ತವಾದ ಮನಸ್ಸಿನ ಅನೇಕಾಂತ ದಾರಿಗಳ ತೆರೆದಬಾಗಿಲೇ ತಾವೋಮಾರ್ಗ ಅಥವಾ ತಾವೋಯಿಸಂ. ತಾವೋಯಿಸಂ ಹೃದಯಪೂರ್ವಕವಾಗಿ ಬದುಕುವ ಬಗೆಯನ್ನು ವ್ಯಕ್ತಿಗೆ ಕಲಿಸುವುದು. ಯಾರನ್ನೂ ಯಾವುದನ್ನೂ ಕುರುಡಾಗಿ ಅನುಸರಿಸದೆ ಕಣ್ಣು ತೆರೆದು ಎಚ್ಚರದಿಂದ ನಡೆಯಬೇಕೆಂದು ಹೇಳುವುದು ~ ಚಂದ್ರಶೇಖರ ನಂಗಲಿ ಸಾಹಿತ್ಯ ಲೋಕದಲ್ಲಿ ‘ಶತಕ’ ಎಂಬ ಪ್ರಕಾರವಿದೆ. ಯಾವುದಾದರೊಂದು ಛಂದೋ ಪ್ರಕಾರದಲ್ಲಿ ಕವಿಯೊಬ್ಬ ನೂರಕ್ಕೂ ಮೇಲ್ಪಟ್ಟು ಪದ್ಯರಚನೆ ಮಾಡಿದರೆ ಅದನ್ನು ‘ಶತಕ’ ಎಂದು ಕರೆಯಬಹುದು. ಶತಕ (ನೂರು) ಸಾಹಿತ್ಯಕ್ಕೆ ನಿರ್ದಿಷ್ಟ ಸಂಖ್ಯಾಮಿತಿಯಿಲ್ಲ. […]

ಪ್ರತಿಯೊಬ್ಬರೂ ತಮ್ಮ ಪಾಲಿನ ಸತ್ಯವನ್ನಷ್ಟೆ ಕಂಡುಕೊಳ್ಳಬಲ್ಲರು

ಯಾವುದೇ ಒಂದು ವಿಚಾರವನ್ನಾಗಲೀ ಅಥವಾ ಸಿದ್ಧಾಂತವನ್ನಾಗಲೀ ಯಾರೋ ಒಬ್ಬರು ಫ್ರೇಮ್ ಹಾಕಿ ಕೂರಿಸಲು ಬರುವುದಿಲ್ಲ.  ಅವರು ಕಂಡುಕೊಂಡಿರುವುದು ಸತ್ಯವೇ ಆದರೂ ಅದು ಅವರ ಪಾಲಿನ ಸತ್ಯ. ಅದು ಕೇವಲ ಅವರ ಪಾಲಿನ ದರ್ಶನ ಮಾತ್ರವಷ್ಟೆ ಅನ್ನುವುದನ್ನು ನಾವು ಅರಿತುಕೊಳ್ಳಬೇಕು. ~  ಜಿಡ್ಡು ಕೃಷ್ಣಮೂರ್ತಿ ಬದುಕಿಗೆ ನಿಜಕ್ಕೂ ಒಂದು ಅರ್ಥ ಎಂಬುದು ಇದೆಯಾ, ನಾವು ಆಚರಿಸುವ ಧರ್ಮಗಳು, ಈ ಯುದ್ಧ, ಸಂಪ್ರದಾಯಗಳು, ಹಿಂಸೆ, ಭಿನ್ನ ಭಿನ್ನವಾಗಿ ಹೊರಹೊಮ್ಮುವ ಕ್ರೌರ್ಯ, ನಮ್ಮ ಐಡಿಯಾಲಜಿಗಳು – ಏನು ಇವೆಲ್ಲಾ? ನಿಜಕ್ಕೂ ಇದೇ […]

ನಾನೇನೂ ಕಳೆದುಹೋಗಿಲ್ಲ, ಆದ್ರೆ… : ಅರಳಿಮರ Comics Quotes

ನಾನೇನೂ ಕಳೆದುಹೋಗಿಲ್ಲ. ನಾನೆಲ್ಲಿದೀನಿ ಅಂತ ನಂಗೆ ಗೊತ್ತಿದೆ. ಆದ್ರೆ… ನಾನು ಕಳೆದುಹೋಗಿದ್ದಕ್ಕೇ ಈಗ ಇಲ್ಲಿದೀನಾ…!? ಅದು ಮಾತ್ರ ಗೊತ್ತಿಲ್ಲ!! ~ Winnie – the Pooh  ಊರಿಗೊಂದು ದಾರಿ ಆದ್ರೆ, ಜಾಣನಿಗೇ ಒಂದು ದಾರಿ ಅನ್ನುವ ಮಾತಿದೆ. ಜನಸಾಮಾನ್ಯರಿಗೆ ಜಾಣರ ದಾರಿಗಳು ಯಾವತ್ತೂ ತಪ್ಪಾಗಿಯೇ ಕಾಣುತ್ತವೆ. ವಿಚಿತ್ರವಾಗಿಯೂ ವಿಲಕ್ಷಣವಾಗಿಯೂ ತೋರುತ್ತವೆ. ಕೊರೆದಿಟ್ಟ ದಾರಿಗಳಲ್ಲಿ ನಡೆದು, ಗುರುತು ಮಾಡಿಟ್ಟ ಗುರಿಯನ್ನಷ್ಟೆ ಸೇರುವ ಈ ಜನಸಾಮಾನ್ಯರು, ತಮ್ಮದೇ ದಾರಿ ಮಾಡಿಕೊಂಡು ನಡೆಯುವ ಜಾಣರನ್ನು ಜೀವನ ಯಾನದಲ್ಲಿ “ಕಳೆದುಹೋದವರು” ಎಂದೇ ಭಾವಿಸುತ್ತಾರೆ.  […]

ಪ್ರೇಮವು ಎಲ್ಲ ದಾರಿಗಳನ್ನೂ ಮುಕ್ತಗೊಳಿಸಿತು! ~ ಮಾಹ್ ಸತಿ

“ಪ್ರೇಮವೆಂದರೆ ಅದು ಹಾಗೇ. ಎಲ್ಲ ಅಡೆತಡೆಗಳನ್ನು ನಿವಾರಿಸುವ ಮಾಂತ್ರಿಕತೆ ಪ್ರೇಮಕ್ಕಿದೆ” ಅನ್ನುತ್ತಾಳೆ ಸೂಫಿ ಕವಿ ಮಾಹ್’ಸತಿ ಗಂಜವಿ  ~ ಚೇತನಾ ನನ್ನ ಹೃದಯ ಸಾಮ್ರಾಜ್ಯವನ್ನು ಪ್ರೇಮವೇ ಆಳತೊಡಗಿದಾಗ ಅದು ನಂಬಿಕೆ, ಅಪನಂಬಿಕೆ ಎರಡರಿಂದಲೂ ಮುಕ್ತಗೊಂಡಿತು. ನನ್ನ ಪ್ರಯಾಣಕ್ಕೆ ನಾನೇ ಅಡ್ಡಿಯಾಗಿದ್ದೆ, ನನ್ನ ಇರುವನ್ನೇ ತೆರವುಗೊಳಿಸಿದ ಪ್ರೇಮ ಎಲ್ಲ ದಾರಿಗಳನ್ನೂ ಮುಕ್ತಗೊಳಿಸಿತು  ~ ಅನ್ನುತ್ತಾಳೆ ಮಾಹ್’ಸತಿ.  ಈ ಪದ್ಯ ಎಷ್ಟು ಸುಂದರವಾಗಿದೆ ನೋಡಿ! ನಮ್ಮ ನಮ್ಮ ಪ್ರಯಾಣಕ್ಕೆ ನಾವೇ ಅಡ್ಡಿಯಾಗಿರುತ್ತೇವೆ. ಅದನ್ನು ಅರ್ಥ ಮಾಡಿಕೊಳ್ಳದೆ ಯಾರುಯಾರನ್ನೋ ಬೆಟ್ಟು ಮಾಡಿ ತೋರಿಸುತ್ತಾ […]

ನಿಮ್ಮ ದಾರಿಯನ್ನು ನೀವೇ ರೂಪಿಸಿಕೊಳ್ಳಿ : ವೇದ ಬೋಧೆ

ಪ್ರತಿಯೊಂದು ಜೀವಿಯ ಬದುಕು ಒಂದು ಪ್ರಯಾಣವೇ ಆಗಿರುತ್ತದೆ. ಜನನ ಮರಣ ಚಕ್ರದ ನಿರಂತರ ಪ್ರಯಾಣದಲ್ಲಿ ನಮ್ಮ ದಾರಿಯನ್ನು ನಾವೇ ರೂಪಿಸಿಕೊಳ್ಳಬೇಕಾಗುತ್ತದೆ ~ ಸಾ.ಹಿರಣ್ಮಯೀ   ಬಹುತೇಕವಾಗಿ ನಾವು ಒಂದು ತಪ್ಪು ಮಾಡುತ್ತೇವೆ. ಬದುಕು ನಮ್ಮದೇ ಆಗಿದ್ದರೂ ಅದರ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಬಿಡುತ್ತೇವೆ, ವಾಸ್ತವವಾಗಿ ನಮ್ಮ ನಮ್ಮ ಬದುಕಿನ ಪ್ರಯಾಣವನ್ನು ನಾವೇ ಮಾಡಬೇಕಾಗಿರುತ್ತದೆ. ಏಕೆಂದರೆ ಜನನಮರಣದ ನಿರಂತರ ಚಕ್ರದಲ್ಲಿ ನಾವು ಸಿಲುಕಿಕೊಂಡಿರುತ್ತೇವೆ. ನಮ್ಮ ಚಕ್ರದ ಪ್ರಯಾಣದ ಸುತ್ತಿನಿಂದ ತಪ್ಪಿಸಿಕೊಂಡರೆ, ಅದೇ ಮುಕ್ತಿ. ಹೀಗೆ ಮುಕ್ತಿ ಪಡೆಯಲು ಚಕ್ರದ ಸುತ್ತಿನಿಂದ […]

ಅಲೆಗಳನ್ನು ಸಮಸ್ಯೆ ಎಂದಲ್ಲ, ಸಾಧ್ಯತೆಗಳೆಂದು ಭಾವಿಸಿ…

ಬದುಕಿನಲ್ಲಿ ಯಾವ ಪ್ರಯತ್ನಕ್ಕೂ ಅಂತ್ಯ ಎನ್ನುವುದೊಂದಿಲ್ಲ. ಎಲ್ಲವೂ ಮುಗಿದೇಹೋಯ್ತು ಅಂದುಕೊಳ್ಳುವಾಗಲೇ ಹೊಸ ಸಾಧ್ಯತೆ ನಮಗಾಗಿ ತೆರೆದುಕೊಳ್ಳುತ್ತಿರುತ್ತದೆ. ಕಣ್ಣುಬಿಟ್ಟು ನೋಡುವ ಎಚ್ಚರ ನಮ್ಮಲ್ಲಿ ಇರಬೇಕಷ್ಟೆ.   ಸಮುದ್ರದಲ್ಲಿ ಅಲೆಗಳು ಒಂದಾದಮೇಲೆ ಒಂದು ಏಳುತ್ತಲೇ ಇರುತ್ತವೆ. ಒಂದು ಎದ್ದು ದಡ ಮುಟ್ಟಿ ತೀರಿತು ಎನ್ನುವಾಗ ಮತ್ತೊಂದು ಎದ್ದು ಬರುತ್ತದೆ. ಅದಕ್ಕೆ ದಣಿವೇ ಇಲ್ಲ. ನಾವು ಸಾಮಾನ್ಯವಾಗಿ ಈ ಅಲೆಗಳನ್ನು ಸಮಸ್ಯೆಗಳಿಗೆ ಹೋಲಿಸುತ್ತೇವೆ. ಸಮಸ್ಯೆಗಳು ಮುಗಿಯುವುದೇ ಇಲ್ಲ, ಒಂದು ತೀರಿತು ಎಂದಕೂಡಲೇ ಮತ್ತೊಂದು ಉದ್ಭವವಾಗುತ್ತದೆ ಎಂದು ಗೊಣಗುತ್ತೇವೆ. ಆದರೆ ಯಾವಾಗಲೂ ನಾವೇಕೆ […]

ಅಧ್ಯಾತ್ಮ ಡೈರಿ : ನಾವು ನಡೆದ ದಾರಿಗಳ ಮೊತ್ತವೇ ನಮ್ಮ ಗುರುತು!

ನಮಗೆ ನಾವು ಎಲ್ಲಿ ತಲುಪುತ್ತೀವಿ ಅಂತ ಗೊತ್ತಿರೋದಿಲ್ಲ. ಯಾವ ದಾರಿಯಲ್ಲಿ ಹೋಗಬೇಕಂತಲೂ ಗೊತ್ತಿರೋದಿಲ್ಲ. ಹಾಗಂತ ನಿಂತಲ್ಲೇ ಇದ್ದುಬಿಟ್ಟರೆ ಅಲ್ಲೇ ಮುಗಿದುಹೋಗಬೇಕಾಗುತ್ತೆ. ಆದ್ದರಿಂದ ಯಾವುದಾದರೊಂದು ಗುರಿ ತಲುಪಲಿಕ್ಕೆ, ಏನಾದರೊಂದು ಸಾಧನೆ ಮಾಡಲಿಕ್ಕೆ ನಡಿಗೆ ನಿಲ್ಲಿಸದಿರುವುದೊಂದೇ ಉಪಾಯ ~ ಅಲಾವಿಕಾ “ನೀನು ಯಾರು?” ಕಂಬಳಿ ಹುಳು ಆಲೀಸ್’ಳನ್ನು ಕೇಳಿತು. ಸಂಭಾಷಣೆ ಇಂಥದೊಂದು ಪ್ರಶ್ನೆಯಿಂದ ಶುರುವಾದರೆ ಮುಂದುವರಿಯೋದು ಹೇಗೆ? ಆಲಿಸ್ ಗಲಿಬಿಲಿಯಾದಳು. ಸಾವರಿಸಿಕೊಂಡು, “ನಾನು ಯಾರು ಅಂದ್ರೆ…. ಇವತ್ತು ಬೆಳಗ್ಗೆ ಏಳುವಾಗ ನಾನು ಏನಾಗಿದ್ದೆ ಅನ್ನೋದು ನನಗೆ ಗೊತ್ತಿದೆ ಸರ್. ಆದ್ರೆ, […]

ಸಾಧನೆಯ ದಾರಿ ಕಂಡುಕೊಂಡ ವಾ-ಐನ್-ಸಾಇಲ್

ಮೂರ್ಖನಾದ ವಾ-ಐನ್-ಸಾಇಲ್ ವಿದ್ಯಾರ್ಥಿಯಾಗಿ ರಾ-ಉಮ್ ಆಶ್ರಮ ಸೇರಿ ಒಂದೆರಡು ವಾರವಾಗಿತ್ತಷ್ಟೇ. ಶಿಷ್ಯನನ್ನು ಕರೆದ ರಾ-ಉಮ್ ನೀನೀಗ ಸಾಧನೆಯನ್ನು ಆರಂಭಿಸಬೇಕು ಎಂದಳು. ವಾ-ಐನ್ ಏನು ಮಾಡಲಿ ಎಂಬ ಪ್ರಶ್ನೆಯೊಂದಿಗೆ ನಿಂತ. “ಸ್ಮಶಾನಕ್ಕೆ ಹೋಗಿ ಸಮಾಧಿಯೊಳಗಿರುವವರನ್ನು ತೀವ್ರವಾಗಿ ಖಂಡಿಸು” ಎಂದು ರಾ-ಉಮ್ ಆದೇಶಿಸಿದಳು. ವಾ-ಐನ್ ಅದನ್ನು ಅಕ್ಷರಶಃ ಪಾಲಿಸಿದ. ಬೆಳಗಿನಿಂದ ಬೈಗಿನವರೆಗೂ ಸ್ಮಶಾನದಲ್ಲಿ ನಿಂತು ಸತ್ತ ಪ್ರತಿಯೊಬ್ಬರನ್ನೂ ಬೈಗುಳಗಳಿಂದ ಅಲಂಕರಿಸಿದ. ಸಂಜೆ ಸುಸ್ತಾಗಿ ಹಿಂದಿರುಗಿದ ಶಿಷ್ಯನನ್ನು ರಾ-ಉಮ್ ಮತ್ತೆ ಪ್ರಶ್ನಿಸಿದಳು. ‘ಏನಾದರೂ ಪ್ರತಿಕ್ರಿಯೆ ಬಂತೇ?’ ವಾ-ಐನ್ ದೈನ್ಯದಿಂದ ಹೇಳಿದ… ‘ಇಲ್ಲ… […]