ಪ್ರತಿಫಲನ : ತಾವೋ ಧ್ಯಾನ ~ 4

ಪ್ರತಿಬಿಂಬ ಸ್ಷಷ್ಟವಾಗುವಲ್ಲಿ ಚಂದ್ರನ ಶ್ರಮವೂ ಇಲ್ಲ ನೀರಿನ ಪ್ರಯತ್ನವೂ ಇಲ್ಲ. ಹಾಗೆಯೇ ಧ್ಯಾನ, ಸಹಜ ಮತ್ತು ತಕ್ಷಣದ ಲೀಲೆ ~  ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ನೀರ ಮೇಲೆ ಚಂದ್ರ ಉಸಿರ ಗಮನಿಸುತ್ತ ಕೂಡು ಸರೋವರ ಪ್ರಶಾಂತವಾಗಿದ್ದಾಗ ಚಂದ್ರನ ಬಿಂಬವೂ ಪರಿಪೂರ್ಣ. ಹಾಗೆಯೇ ಪ್ರಶಾಂತ ಮನುಷ್ಯ, ದಿವ್ಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತಾನೆ. ನಮ್ಮ ಉದ್ವಿಗ್ನತೆ, ಪ್ರಕೃತಿಯ ಸಹಜ ವ್ಯವಹಾರಗಳಲ್ಲಿ ನಿರಂತರ ಹಸ್ತಕ್ಷೇಪ, ಅಷ್ಟೇ ಅಲ್ಲ ಅಂತರಂಗದ ವಹಿವಾಟುಗಳಲ್ಲೂ ‘ನಾನು’ ಮುಂದಾಳಾಗಿ ಎಲ್ಲವನ್ನೂ ನಿಯಂತ್ರಿಸುವುದು ನಮ್ಮ ಪ್ರಶಾಂತತೆಯನ್ನು […]

ಧ್ವನಿ : ತಾವೋ ಧ್ಯಾನ ~ 3

ಹೊರಗಿವಿ ಕಿವುಡಾಗಿ ಒಳಗಿವಿ ತೆರೆದುಕೊಂಡಾಗ ಮಾತ್ರ ಸೂಕ್ಷ್ಮ ಧ್ವನಿಗಳು ಕೇಳಿಸಲಾರಂಭಿಸುತ್ತವೆ. ಈ ಧ್ವನಿಯೊಳಗೆ ಕಾಲಿಡುವುದೆಂದರೆ ಪರಮ ಸ್ಪಷ್ಟತೆಯೊಂದರೊಳಗೆ ಪ್ರವೇಶ ಮಾಡಿದಂತೆ. ಆದ್ದರಿಂದಲೇ ಅನೇಕ ಧಾರ್ಮಿಕ ಸಂಪ್ರದಾಯಗಳು, ಪ್ರಾರ್ಥನೆ, ಸ್ತುತಿಗಾನ, ಮಂತ್ರ ಮುಂತಾದವನ್ನು ದಿವ್ಯ ಮೌನಕ್ಕೆ ಮುನ್ನುಡಿಯಾಗಿ ಬಳಸುತ್ತವೆ  ~ ಡೆಂಗ್ ಮಿಂಗ್ ದಾವೋ |  ಚಿದಂಬರ ನರೇಂದ್ರ ಗುಹೆಯೊಳಗೆ ಬಿರುಗಾಳಿ : ಸ್ಥಾವರದೊಳಗೆ ಜಂಗಮನ ಮಿಸುಕಾಟ ಮೌನ, ಎದ್ದು ನಿಂತ ಮದ್ದಾನೆ. ಹೊರಗಿನಿಂದ ಗುಹೆಯೊಳಗೆ ಬರುವ ಸದ್ದುಗಳನ್ನ, ಕಲ್ಲು ಬಂಡೆ ಮತ್ತು ಮಣ್ಣು ಸೌಮ್ಯಗೊಳಿಸುತ್ತವೆ ಆಗ ಹೃದಯದ […]

ಶುದ್ಧೀಕರಣ : ತಾವೋ ಧ್ಯಾನ ~ 2

ಶುದ್ಧೀಕರಣವೆಂದ ಕೂಡಲೇ ನಾವು ಅಂತರ್ಮುಖರಾಗುವುದು ಸಹಜ. ನಂಬಿಕೆಯ ಪ್ರಕಾರ ನಮ್ಮ ದೇಹದೊಳಗೆ 36,000 ದೇವತೆಗಳಿದ್ದಾರೆ. ದೇಹಕ್ಕೆ ಸಹಜವಲ್ಲದ ಹಾನಿಕಾರಕ ಆಹಾರವನ್ನು ನಾವು ಸೇವಿಸುವುದಾದರೆ, ನಮ್ಮ ದೇಹವನ್ನು ವಿಷಮಯವನ್ನಾಗಿ ಮಾಡುವುದಾದರೆ ನಮ್ಮೊಳಗಿನ ದೇವತೆಗಳು ಅಸಹ್ಯದಿಂದ ನಮ್ಮನ್ನು ದೂರ ಮಾಡುವುದರಲ್ಲಿ ಸಂಶಯವಿಲ್ಲ ~ ಡೆಂಗ್ ಮಿಂಗ್ ದಾವೋ | ಅನುವಾದ : ಚಿದಂಬರ ನರೇಂದ್ರ ಪ್ರಾತಃಕಾಲ, ಶುದ್ಧೀಕರಣದ ಕಾಲ, ಕನಸುಗಳ ತೊಳೆಯಬೇಕು. ಒಳಗಿನ ದೇವರುಗಳನು ತೊಳೆಯಬೇಕು. ಮತ್ತು ಚೇತನದ ಸ್ಪಷ್ಟತೆಯನ್ನು ಸಾರಬೇಕು. ಎಲ್ಲ ಅಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಶುದ್ಘೀಕರಣ ಮೊಟ್ಟ ಮೊದಲ […]

`ಇಡಿಯ ಜಗತ್ತು ನನ್ನ ವಿರುದ್ಧ ಕತ್ತಿ ಮಸೆಯುತ್ತಿದೆ….’ ಏನಿದರ ಅರ್ಥ?

`ಇಡಿಯ ಜಗತ್ತು ನನ್ನ ವಿರುದ್ಧ ಕತ್ತಿ ಮಸೆಯುತ್ತಿದೆ….’ ಏನಿದರ ಅರ್ಥ? ಜಗತ್ತಿಗೆ ತನ್ನದೇ ಆದ ಪಾಡು ಇರುತ್ತದೆ. ಜನಕ್ಕೆ ನಿತ್ಯವೂ ತುತ್ತಿನ ಚೀಲ ತುಂಬಿಸಿಕೊಳ್ಳುವ ಅನಿವಾರ್ಯತೆ. ಹೀಗಿರುವಾಗ ಯಾರದ್ದಾದರೂ ವಿರುದ್ಧ ಕತ್ತಿ ಮೆಸೆಯುತ್ತ ಕೂರಲು ಅದಕ್ಕೆಲ್ಲಿ ಪುರುಸೊತ್ತು? ನಮಗೆ ಹಾಗನ್ನಿಸುವುದು ನಮ್ಮೊಳಗಿನ ಕೊರತೆಯಿಂದಲಷ್ಟೆ.  ~ ಗಾಯತ್ರಿ ಮನುಷ್ಯ ತನ್ನ ಅಸ್ತಿತ್ವವನ್ನು ಖಾತ್ರಿಪಡಿಸಿಕೊಳ್ಳುವುದೇ ಅಹಂಕಾರದಿಂದ. ಒಂದು ದಿನ ತಾನು ಅವಜ್ಞೆಗೆ ಒಳಗಾದೆ, ಯಾರೂ ನನ್ನನ್ನು ಗಮನಿಸುತ್ತಿಲ್ಲ ಎಂದು ಅನ್ನಿಸಿದರೂ ಸಾಕು ತೀವ್ರ ಚಡಪಡಿಸಿಹೋಗುತ್ತಾನೆ. ಜನರ ಗಮನ ಸೆಳೆಯಲು ತಂತ್ರಗಳನ್ನು ಹೂಡುತ್ತಾನೆ. […]

ಸಂಪ್ರದಾಯವೊಂದು ಅವನತಿಯ ಹಾದಿ ಹಿಡಿದಾಗ…

ಮೂಲ: ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಸಂಪ್ರದಾಯವೊಂದು ಅವನತಿಯ ಹಾದಿ ಹಿಡಿದಾಗ ಕರುಣೆ ಮತ್ತು ನೈತಿಕತೆ ಹುಟ್ಟಿಕೊಳ್ಳುತ್ತವೆ. ಕಲಿಕೆ ಮತ್ತು ಜಾಗರೂಕತೆ ಮೇರೆ ಮೀರುತ್ತಿದ್ದಂತೆಯೇ ಬೂಟಾಟಿಕೆ ಹುಟ್ಟಿಕೊಳ್ಳುತ್ತದೆ. ಒಡೆದ ಮನೆಯಲ್ಲಿ ಮಕ್ಕಳು ಮತ್ತು ತಂದೆ ತಾಯಂದಿರು ಕರ್ತವ್ಯಪರಾಯಣರು. ಛಿದ್ರಗೊಂಡ ಸಮಾಜದ ತುಂಬ ನಂಬಿಕಸ್ತ ಭಕ್ತರ ಮೆರವಣಿಗೆ, ಉರವಣಿಗೆ.

ತಾವೋ ತಿಳಿವು #80 ~ ಕೊನೆಯ ಕಂತು

ತಾವೋ ಪ್ರವರ್ತಕ ಲಾವೋತ್ಸುವಿನ ‘ತಾವೊ ತೆ ಚಿಂಗ್’ ಅಥವಾ ‘ದಾವ್ ದ ಜಿಂಗ್’ ಅನ್ನು ಅರಳಿ ಬಳಗದ ಲೇಖಕ ಚಿದಂಬರ ನರೇಂದ್ರ ಕನ್ನಡಕ್ಕೆ ತಂದಿದ್ದಾರೆ. ಕಳೆದ  ನಾಲ್ಕು ತಿಂಗಳಿನಿಂದ 79 ಕಂತುಗಳಲ್ಲಿ ಈ ಅನುವಾದವನ್ನು ಪ್ರಕಟಿಸಿದ್ದು, ಇಂದಿನದು ‘ತಾವೋ ತಿಳಿವು’ ಸರಣಿಯ ಕೊನೆಯ ಕಂತು. ಮುಂದಿನ ದಿನಗಳಲ್ಲಿ ಖಲೀಲ್ ಗಿಬ್ರಾನ್’ರ ‘ಪ್ರವಾದಿ’ ಕೃತಿಯು ಚಿದಂಬರ ನರೇಂದ್ರ ಅವರು ಅನುವಾದದಲ್ಲಿ ಪ್ರಕಟವಾಗಲಿದೆ.  ಓದುಗರ ಆಸಕ್ತಿ ಮತ್ತು ಪ್ರೀತಿಗೆ ಶರಣು ~ ಅರಳಿ ಬಳಗ ಅಧಿಕಾರ ಚಲಾಯಿಸುವ ಹುಕಿ ಇಲ್ಲದಿರುವುದರಿಂದ ಸಂತ […]

ತಾವೋ ತಿಳಿವು #79 ~ ಪೂರ್ಣವಾಗುವುದೆಂದರೆ ತಾವೋಗೆ ಮರಳುವುದು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಪೂರ್ಣವಾಗಬೇಕಾದರೆ, ಚೂರುಚೂರಾಗು. ನೇರವಾಗಬೇಕಾದರೆ, ಬಾಗು, ಮಣಿ. ತುಂಬಿಕೊಳ್ಳಬೇಕಾದರೆ, ಖಾಲಿಯಾಗು. ಮತ್ತೆ ಹುಟ್ಟಬೇಕಾದರೆ ಮೂದಲು ಸತ್ತು ನೋಡು ಕಳೆದುಕೊಂಡವ ಶ್ರೀಮಂತ ಕೂಡಿಟ್ಟವ ತಬ್ಬಿಬ್ಬು. ಅಂತೆಯೇ ಸಂತ ಒಂದನ್ನು ಮುಂದಿಟ್ಟುಕೊಂಡು ಇನ್ನೊಂದನ್ನು ಒರೆಗೆ ಹಚ್ಚುತ್ತಾನೆ. ಅವ ಪರದೆಯ ಹಿಂದೆ ಇರುವುದರಿಂದ ಜನ ಅವನ ಬೆಳಕನ್ನು ಮಾತ್ರ ಕಾಣುತ್ತಾರೆ. ಸ್ವಂತ ಸಮರ್ಥನೆಗೆ ಇಳಿಯುವದಿಲ್ಲವಾದ್ದರಿಂದ ತಾನೇ ಸ್ವತಃ ಪ್ರಮಾಣವಾಗಿದ್ದಾನೆ. ತನ್ನ ಬಗ್ಗೆ ಮಾತಾಡುವದಿಲ್ಲವಾದಿದರಿಂದ ಜನರ ದನಿಯಾಗಿದ್ದಾನೆ. ಸ್ಪರ್ಧೆಗಳಿಂದ ದೂರವಿರುವುದರಿಂದ ಸೋಲು […]

ತಾವೋ ತಿಳಿವು #78 ~ ಸಂತನಿಗೆ ಈ ಸೂಕ್ಷ್ಮ ಗೊತ್ತು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ತಾವೋದಲ್ಲಿ ಒಂದಾದಾಗ ಆಕಾಶ, ಶುಭ್ರ, ತಿಳಿ ಭೂಮಿ, ಸುಭದ್ರ ಚೈತನ್ಯ, ಸೃಷ್ಟಿಶೀಲ ಕಣಿವೆ, ಬಸಿರು ಒಂದನ್ನೊಂದು ಹುಟ್ಟಿಸುತ್ತ ಸತತವಾಗಿ ಹೊಸದಾಗುತ್ತ ಬದುಕು, ಜೀವಂತಿಕೆಯ ತಾಣ ಈ ಬಂಧ ತುಂಡಾದಾಗ ಆಕಾಶ, ಚೂರು ಚೂರು ಭೂಮಿಯಲ್ಲಿ ಬಿರುಕು ಚೈತನ್ಯ ನಿರ್ವೀರ್ಯ ಮತ್ತು ಕಣಿವೆ, ಬರಡು. ಸಂತನಿಗೆ ಈ ಸೂಕ್ಷ್ಮ ಗೊತ್ತು ಅಂತೆಯೇ ಸೃಷ್ಟಿಯ ಬಗ್ಗೆ ಅವನಿಗೆ ಅಪಾರ ಅಂತಃಕರಣ ವಿನಮ್ರತೆಯತ್ತ ಅವನ ಸಾಧನೆ ರತ್ನದಂತೆ ಹೊಳೆಯುವದಕ್ಕಿಂತ […]

ತಾವೋ ತಿಳಿವು #76 ~ ತಾವೋ ರುಚಿ ನಾಲಿಗೆಗೆ ಸಿಕ್ಕುವುದೇ ಇಲ್ಲ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ಅಗೋಚರ ತಾವೋ ಕಣ್ಣಿಗೆ ಕಟ್ಚಿಕೊಂಡಾಗ ಜಗತ್ತು ಮೊಣಕಾಲೂರುವುದು. ಇಲ್ಲಿ ಭಯಕ್ಕೆ ಜಾಗವಿಲ್ಲ ಅಶಾಂತಿಗೆ ನೆಲೆ ಇಲ್ಲ ಆತಂಕಕ್ಕೆ ಕಾರಣವಿಲ್ಲ. ಹಾಯ್ದು ಹೋಗುವ ಪ್ರವಾಸಿಗರಿಗೆ ಏರಿಳಿತದ ಹಾಡು ಇಷ್ಟ ರುಚಿ ರುಚಿಯಾದ ಊಟ ಪಂಚಪ್ರಾಣ. ಆದರೆ ತಾವೋ, ಪಕ್ಕಾ ಮಂದ್ರ ಸ್ಥಾಯಿ ರುಚಿ ನಾಲಿಗೆಗೆ ಸಿಕ್ಕುವುದೇ ಇಲ್ಲ. ಕಣ್ಣಿಗೆ ಕಾಣಿಸದು, ಕಿವಿಗೆ ಕೇಳಿಸದು ಬಳಸಿದರೆ ಮಾತ್ರ, ತೀರದು ಉಕ್ಕಿ ಉಕ್ಕಿ ಹರಿಯುವುದು

ತಾವೋ ತಿಳಿವು #75 ~ ಸಮಸ್ತರೂ ಹುಲ್ಲಿನ ನಾಯಿಗಳು

ಸ್ವರ್ಗ ಮತ್ತು ಧರೆ ಮನುಷ್ಯತ್ವದಿಂದ ಮುಕ್ತವಾಗಿವೆ. ಅವುಗಳ ಕಣ್ಣಿನಲ್ಲಿ ಸಮಸ್ತರೂ ಹುಲ್ಲಿನ ನಾಯಿಗಳು* ಹಾಗೆಯೇ ಸಂತರಿಗೂ ಮನುಷ್ಯತ್ವ ಎಂಬುದಿಲ್ಲ. ಅವರಿಗೂ ಎಲ್ಲ ಹುಲ್ಲಿನ ನಾಯಿಗಳಂತಯೇ.* ತಾವೋ ಬಲೂನಿನಂತೆ ಖಾಲಿ ಹೌದು ಆದರೆ ಅನಂತ ಸಾಧ್ಯತೆಗಳು, ಏರಿದಂತೆಲ್ಲ ಹಿಗ್ಗುತ್ತದೆ, ಮಾತು ಚುಚ್ಚಿದಾಗಲೆಲ್ಲ ಅಪ್ಪಚ್ಚಿ. ಮಾತಿನ ಮನೆಯೆದುರು ಮಸಣದ ತೋಟ, ತಾವೋಗೆ ಶರಣಾಗಿ, ಶರಣು ಎನ್ನಿ. *ಬಲಿ ಕೊಡವುದಕ್ಕಾಗಿ ತಯಾರಿಸಲಾಗುವ ಹುಲ್ಲಿನ ಬೊಂಬೆಗಳು. ವಿಧಿ ಪೂರ್ಣವಾದ ನಂತರ ತುಳಿದಾಡುತ್ತಾರೆ, ಒಲೆಗೆ ಹಾಕುತ್ತಾರೆ.