ಅಕ್ಕ, ಲಲ್ಲಾ, ರಾಬಿಯಾ… 3 ಪದ್ಯಗಳು

ಹೆಣ್ತನ ಸಹಜವಾಗಿ ಅಧ್ಯಾತ್ಮ ಪ್ರವೃತ್ತಿಯನ್ನು ಹೊಂದಿರುವಂಥದ್ದು. ಹೆಣ್ತನ ಅಂದರೆ ಹೆಣ್ಣಿನ ದೇಹವಲ್ಲ, ಹೆಣ್ಣಿನ ಭಾವ. ಆದ್ದರಿಂದಲೇ ಗಂಡು ಆಧ್ಯಾತ್ಮಿಕ ಸಾಧನೆ ಮಾಡಬೇಕೆಂದರೆ ಆತ ಹೆಣ್ತನವನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ. ಆದರೆ ಹೆಣ್ಣು ಹೆಚ್ಚು ಕಷ್ಟವಿಲ್ಲದೆ ಸಹಜವಾಗಿ ತನ್ನ ಅಂತರಂಗವನ್ನು ಕಂಡುಕೊಂಡು ಸಾಧಕಿಯಾಗುತ್ತಾಳೆ. ಮಹಿಳಾ ದಿನದ ಪ್ರಯುಕ್ತ ಇಲ್ಲಿ ಮೂವರು ಅಧ್ಯಾತ್ಮ ಸಾಧಕಿಯರ ಚಿಕ್ಕ ರಚನೆಗಳನ್ನು ನೀಡಲಾಗಿದೆ…

ಪ್ರತಿದಿನವೂ ಉಡುಗೊರೆ : ಅರಳಿಮರ POSTER

“ನಿಮ್ಮ ಹಕ್ಕಿನಿಂದ ಈ ದಿನ ನಿಮಗೆ ದೊರೆತಿಲ್ಲ. ಇದು ನಿಮಗೆ ಕೊಡಲಾದ ಉಡುಗೊರೆ” ಕೆಲವೊಮ್ಮೆ ನಾವು ನಮ್ಮ ದಿನವನ್ನು ಅದೆಷ್ಟು ಉಡಾಫೆಯಾಗಿ ಕಳೆದುಬಿಡುತ್ತೇವೆ. ಈ ಇಪ್ಪತ್ನಾಲ್ಕು ಗಂಟೆಗಳು ನಮ್ಮ ಹಕ್ಕಿನವು, ನಾವು ಅದನ್ನು ಏನು ಬೇಕಾದರೂ ಮಾಡುತ್ತೇವೆ ಅನ್ನುವ ಧೋರಣೆ ನಮಗಿರುತ್ತದೆ. ಈ ಧೋರಣೆಯಿಂದ ನಮಗೆ ನಷ್ಟ ಮಾಡಿಕೊಳ್ಳುವುದು ಮಾತ್ರವಲ್ಲ, ಇತರರಿಗೂ ಹಾನಿಯಾಗುವ ಸಾಧ್ಯತೆ ಹೆಚ್ಚು.  ವಾಸ್ತವದಲ್ಲಿ ದಿನದ ಇಪ್ಪತ್ನಾಲ್ಕು ಗಂಟೆಗಳು ನಮ್ಮ ಹಕ್ಕಲ್ಲ. ಅವು ನಮಗೆ ಕೊಡಲ್ಪಟ್ಟ ಉಡುಗೊರೆ ಎಂದು ಭಾವಿಸಬೇಕು. ಅವನ್ನು ಗೌರವದಿಂದ ವಿನಯೋಗಿಸಬೇಕು. […]