ಅದೃಷ್ಟವೂ ಇರಬಹುದು, ದುರಾದೃಷ್ಟವೂ ಇರಬಹುದು : ಝೆನ್ ಕಥೆ

ಒಂದೂರಿನಲ್ಲಿ ಒಬ್ಬ ರೈತನಿದ್ದ. ಅವನು ತನ್ನ ಪಾಡಿಗೆ ತಾನು ಹೊಲದಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದ. ಒಂದು ದಿನ ಅವನ ಕುದುರೆ ಲಾಯದಿಂದ ಕಣ್ಮರೆಯಾಯಿತು. ಎಷ್ಟು ಹುಡುಕಿದರೂ ಸಿಗಲಿಲ್ಲ. ಸುದ್ದಿ ತಿಳಿದ ನೆರೆಹೊರೆಯವರು ಬಂದರು. ರೈತನೆದುರು ನಿಂತು, “ನಿನ್ನ ಕುದುರೆ ಕಣ್ಮರೆಯಾಗಿದೆ ಎಂದು ಕೇಳಿಪಟ್ಟೆವು. ಛೆ!! ಎಂಥಾ ದುರದೃಷ್ಟ! ” ಎಂದು ಸಂತಾಪ ಸೂಚಿಸಿದರು. ರೈತ ಅವರ ಮುಖವನ್ನೊಮ್ಮೆ ನೋಡಿ ‘ಇರಬಹುದು’ ಅಂದ. ಮಾರನೆ ದಿನ ಆ ಕುದುರೆ ಮೂರು ಇತರ ಕಾಡು ಕುದುರೆಗಳೊಡನೆ ಹೊಲಕ್ಕೆ ಹಿಂದಿರುಗಿತು. ಸುದ್ದಿ ತಿಳಿದ […]