ದುರ್ಯೋಧನನ ಸಾವಿಗೆ ತಾಯಿ ಗಾಂಧಾರಿಯ ಮೈಮರೆವು ಕಾರಣವಾಗಿದ್ದು ಹೇಗೆ?

ಪಟ್ಟಿ ಕಟ್ಟಿಕೊಂಡಿದ್ದ ಕಣ್ಣುಗಳಲ್ಲಿ ಸಂಚಯವಾಗಿದ್ದ ಶಕ್ತಿಯನ್ನು ತನ್ನ ಮಗ ದುರ್ಯೋಧನನ ಮೇಲೆರೆದು ಆತನನ್ನು ವಜ್ರಕಾಯನನ್ನಾಗಿಸಲು ಗಾಂಧಾರಿ ಮುಂದಾದಳು. ಆದರೂ ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ಭೀಮ ದುರ್ಯೋಧನನ ತೊಡೆ ಮುರಿದು ಸಂಹರಿಸಿದ. ಹಾಗಾದರೆ ಗಾಂಧಾರಿ ಎಡವಿದ್ದೆಲ್ಲಿ? ಅವಳ ಮೈಮರೆವೇ ದುರ್ಯೋಧನನ ಸಾವಿಗೆ ಕಾರಣವಾಯಿತೇ…? ಗಾಂಧಾರ ದೇಶದ ರಾಜಕುಮಾರಿ ಗಾಂಧಾರಿ ಕುರುಡನಾಗಿದ್ದ ಧೃತರಾಷ್ಟ್ರನನ್ನು ಸ್ವ ಇಚ್ಛೆಯಿಂದಲೇ ಮದುವೆಯಾದಳು. ಆಮೇಲೆ ಗಂಡ ನೋಡದ ಲೋಕವನ್ನು ನಾನೇಕೆ ನೋಡಲಿ ಎಂದು ಕಣ್ಣಿಗೆ ಪಟ್ಟಿ ಕಟ್ಟಿಕೊಂಡಳು. ಗಂಡನ ಕುರುಡುತನವನ್ನು ನಾನೂ ಅನುಭವಿಸುತ್ತೇನೆ ಎಂದು ಬದ್ಧಸಂಕಲ್ಪ […]