ಮೋಶೆ ಹೇಳಿದ್ದು : ಅರಳಿಮರ POSTER

“ನಿಮಗೆ ಪ್ರೇಮದ ಹೊರತು ಇನ್ಯಾವ ದೇವರೂ ಇರದಿರಲಿ” ಅನ್ನುತ್ತಾನೆ ಮೋಶೆ ಸೃಷ್ಟಿಯಲ್ಲಿ ಸ್ವಾರ್ಥವಿಲ್ಲದ್ದು ಎನ್ನುವಂಥದೇನಾದರೂ ಇದ್ದರೆ ಅದು ಪ್ರೇಮ. ಆದ್ದರಿಂದಲೇ ಅದು ‘ದೇವರು’. ಪ್ರೇಮವೇ ದೇವರು, ಪ್ರೇಮಿಸುವುದೇ ಪೂಜೆ. ಅದು ಇದ್ದಲ್ಲಿ ದ್ವೇಷಕ್ಕೆ, ಸ್ಪರ್ಧೆಗೆ, ಪೈಪೋಟಿಗೆ ಅವಕಾಶವೇ ಇರುವುದಿಲ್ಲ.  ಆದ್ದರಿಂದ ಮೋಸೆಸ್* (ಮೋಶೆ) ಹೇಳುತ್ತಾನೆ, “ನಿಮಗೆ ಪ್ರೇಮದ ಹೊರತು ಇನ್ಯಾವ ದೇವರೂ ಇರದಿರಲಿ” ಎಂದು.  (* ಮೋಸೆಸ್ ಹಳೆಯ ಒಡಂಬಡಿಕೆಯಲ್ಲಿ ಕಾಣಸಿಗುವ ಪ್ರವಾದಿ. ಯಹೂದಿ ಮತ್ತು ಕ್ರೈಸ್ತ ಸಮುದಾಯಗಳ ಪೂರ್ವಜ. ಇಸ್ಲಾಂ ಧರ್ಮದಲ್ಲಿ ಈತ ಪ್ರವಾದಿ ಮೂಸಾ […]

ದೇವರ ಅವಶ್ಯಕತೆ ಗಾಳಿಯಷ್ಟೇ ಮುಖ್ಯವಾದಾಗ ಬಾ : ಝೆನ್ ಕಥೆ

ಒಬ್ಬ ಝೆನ್ ಮಾಸ್ಟರ್ ನದಿಯ ದಂಡೆಯ ಮೇಲೆ ಧ್ಯಾನ ಮಗ್ನನಾಗಿದ್ದಾಗ ಯುವಕನೊಬ್ಬ ಅವನ ಹತ್ತಿರ ಬಂದು ಕೇಳಿಕೊಂಡ. ಯುವಕ : ಮಾಸ್ಟರ್, ನನ್ನನ್ನು ಶಿಷ್ಯನಾಗಿ ಸ್ವೀಕರಿಸಿ ಮಾಸ್ಟರ್ : ಯಾಕೆ? ಏನು ವಿಷಯ? ಯುವಕ : ನಾನು ದೇವರನ್ನು ಹುಡುಕಬೇಕು ಈ ಮಾತನ್ನು ಕೇಳುತ್ತಿದ್ದಂತೆಯೇ, ಮಾಸ್ಟರ್ ತನ್ನ ಜಾಗದಿಂದ ಕೆಳಗೆ ಜಿಗಿದು, ಯುವಕನ ಅಂಗಿಯ ಕಾಲರ್ ಹಿಡಿದು, ಅವನನ್ನು ದರದರನೇ ಎಳೆದುಕೊಂಡು ನದಿಯ ಹತ್ತಿರ ಬಂದು, ಅವನ ತಲೆಯನ್ನು ನದಿಯಲ್ಲಿ ಮುಳುಗಿಸಿ ಹಾಗೇ ಹಿಡಿದುಕೊಂಡ. ಕೆಲ ನಿಮಿಷಗಳಾಗುತ್ತಿದ್ದಂತೆಯೇ, […]

ಬಿಡುಗಡೆಗೆ ತುಡಿಯುವ ಕಾಳಜಿ : ಜಿಡ್ಡು ಚಿಂತನೆ

ಮನುಷ್ಯರು ಎಲ್ಲಾ ಬ೦ಧನಗಳಿ೦ದ, ಎಲ್ಲಾ ಪ೦ಜರಗಳಿ೦ದ, ಎಲ್ಲಾ ಭಯಗಳಿ೦ದ ಮುಕ್ತರಾಗಿರಬೇಕು. ಅದು ಧರ್ಮದ ಭಯವಾಗಿರಲಿ, ಮೋಕ್ಷದ ಭಯವಾಗಿರಲಿ, ಪ್ರೇಮದ ಭಯವಾಗಿರಲಿ, ಸಾವಿನ ಭಯವಾಗಿರಲಿ, ಕೊನೆಗೆ ಬದುಕಿನ ಭಯವೇ ಆಗಿರಲಿ; ಅದರಿಂದ ಅವರನ್ನು ಮುಕ್ತಗೊಳಿಸಲು ಬಯಸುತ್ತೇನೆ ಅಷ್ಟೇ. ಸತ್ಯಕ್ಕೆ ಯಾವುದೇ ದಾರಿಗಳಿಲ್ಲ. ಧರ್ಮವಾಗಿರಲಿ, ಪ೦ಥವಾಗಿರಲಿ, ಸಿದ್ಧಾ೦ತವಾಗಿರಲಿ, ಆ ಸತ್ಯದ ನೆಲೆಯನ್ನು ತಲುಪಲಾಗುವುದಿಲ್ಲ. ಯಾವ ಸಂಘಟನೆಯೂ ಯಾವ ಸಂಸ್ಥೆಯೂ ನಿಮ್ಮನ್ನು ಸತ್ಯದ ದಾರಿಯಲ್ಲಿ ಕೊಂಡೊಯ್ಯಲಾರವು. ಯಾವುದೋ ಒ೦ದು ದಾರಿಯ ಮೂಲಕ ಮಾತ್ರ ಸತ್ಯವನ್ನು ಅರಸುವ೦ತೆ ಮಾಡಲು ಸಾಧ್ಯವೇ ಇಲ್ಲ. ಅಕಸ್ಮಾತ್ ಹಾಗೆ ಮಾಡಿದ್ದೇ […]

ದೇವರು ಅಂದರೆ ಬದನೆಕಾಯಿ

  ಅದೊಂದು ಸಂಜೆ ಊರಿನ ವಿದ್ವಾಂಸರೆಲ್ಲ ಸೇರಿ ಒಂದು ಸಭೆಯನ್ನು ಏರ್ಪಡಿಸಿದ್ದರು. ಅವರ ಚರ್ಚೆಯ ವಸ್ತು “ದೇವರ ಸ್ವರೂಪ” ಎಂಬುದಾಗಿತ್ತು. ಒಬ್ಬರಾದಮೇಲೆ ಒಬ್ಬರು ಪಂಡಿತರು ಗಹನವಾಗಿ ವಿಚಾರ ಮಂಡನೆ ಮಾಡಿದರು. ವೀಕ್ಷಕರಾಗಿ ಬಂದಿದ್ದವರೆಲ್ಲ ತಮ್ಮ ಮುಂಡಾಸಿನೊಳಗೆ ಕೈತೂರಿ ಕೆರೆದುಕೊಂಡು ಜಾಗ ಮಾಡಿಕೊಟ್ಟರೂ ಒಂದಕ್ಷರ ತಲೆಯೊಳಗೆ ಹೋಗಲಿಲ್ಲ. ಕೊನೆಗೆ ಮುಲ್ಲಾ ನಸ್ರುದ್ದೀನನ ಸರದಿ ಬಂತು. ಮುಲ್ಲಾ ಠೀವಿಯಿಂದ ಎದ್ದು ನಿಂತ. “ದೇವರೆಂದರೆ…” ಎಂದು ಶುರು ಮಾಡಿದ. ಮುಂದೇನು ಹೇಳಬೇಕೆಂದು ತೋಚದೆ ಗಂಟಲು ಸರಿ ಮಾಡಿಕೊಂಡು ಜನರತ್ತ ನೋಡಿದ. ಕೊನೆಗೆ […]