ದೇವೇಂದ್ರನು ಶುಕ್ರಾಚಾರ್ಯರಲ್ಲಿಗೆ ಬಂದು ಮೋಕ್ಷ ಸಾಧನೆಯ ಜ್ಞಾನವನ್ನು ಪಡೆದುಕೊಂಡನು. ಅನಂತರ “ಗುರುವೆ, ಇದಕ್ಕಿಂತ ಮಿಗಿಲಾದ ಶ್ರೇಯಸ್ಸು ಉಂಟೆ?” ಎಂದು ಕೇಳಿದನು. ಅವರು “ಉಂಟು, ಅದನ್ನು ಯುದ್ಧದಲ್ಲಿ ನಿನ್ನನ್ನು ಜಯಿಸಿದ ಪ್ರಹ್ಲಾದ ಬಲ್ಲನು, ಹೋಗಿ ಆತನನ್ನು ಕೇಳು” ಎಂದರು. ಆಮೇಲೆ…. ಭಗವಂತನು ನರಸಿಂಹಾವತಾರ ತಾಳಿ ದೈತ್ಯ ಚಕ್ರವರ್ತಿ ಹಿರಣ್ಯಕಷಿಪುವನ್ನು ಸಂಹರಿಸಿದ ನಂತರ ಅವನ ಮಗ ಪ್ರಹ್ಲಾದ ಪಟ್ಟಕ್ಕೇರಿದನು. ಭಕ್ತಭಾಗವತನಾಗಿದ್ದ ಪ್ರಹ್ಲಾದ, ಮೂರು ಲೋಕಗಳನ್ನೂ ಉತ್ತಮವಾಗಿ ಆಳ್ವಿಕೆ ಮಾಡುತ್ತ ಮೆಚ್ಚುಗೆಗೆ ಪಾತ್ರನಾಗಿದ್ದನು. ಆವನ ಆಳ್ವಿಕೆಯಲ್ಲಿ ಎಲ್ಲರೂ ನೆಮ್ಮದಿಯಿಂದ ಬಾಳುತ್ತಿದ್ದರು. ಎಲ್ಲೆಲ್ಲಿಯೂ […]
ಹುಟ್ಟಿ ಬೆಳೆದ ಮರವನ್ನು ಬಿಡಲೊಪ್ಪದ ಗಿಳಿ ಮತ್ತು ದೇವೇಂದ್ರ
ಹೀಗೇ ಒಂದು ದಿನ ದೇವೇಂದ್ರ ತನ್ನ ಪರಿವಾರದೊಂದಿಗೆ ಲಕ್ಷ್ಮೀ ಕಟಾಕ್ಷ ಹೊಂದುವ ಸಲುವಾಗಿ ಹೊರಟಿದ್ದ. ದಾರಿಯುದ್ದಕ್ಕೂ ಬಗೆ ಬಗೆಯ ವೃಕ್ಷರಾಜಿಗಳು ಕಂಗೊಳಿಸ್ತಿದ್ದವು. ಬಗೆ ಬಗೆಯ ಹೂ ಹಣ್ಣು ಹೊತ್ತ ಮರಗಳು. ಅವುಗಳಲ್ಲಿ ಮನೆ ಮಾಡಿ ಚಿಲಿಪಿಲಿಗುಟ್ಟುತ್ತ ಹರ್ಷಿಸುತ್ತಿದ್ದ ಹಕ್ಕಿಗಳು, ಚಿನ್ನಾಟವಾಡುತ್ತಿದ್ದ ಮೃಗ ಸಮೂಹ ಇವೆಲ್ಲವೂ ಶಚೀಪತಿಯ ಮನಸ್ಸನ್ನು ಉಲ್ಲಾಸಗೊಳಿಸಿತ್ತು. ಹೀಗಿರಲಾಗಿ, ದಾರಿಯಲ್ಲೊಂದು ದೈತ್ಯಾಕಾರದ ವೃಕ್ಷವೊಂದು ಎದುರಾಯ್ತು. ಆದರೆ ಅದು ಪೂರ್ತಿಯಾಗಿ ಒಣಗಿ, ಬೋಳಾಗಿಹೋಗಿತ್ತು. ಜೀವವಿಲ್ಲದ ತೊಗಟೆಗಳನ್ನು ಹೊದ್ದು ನಿಂತಿದ್ದ ಆ ಮರ ವಿಕಾರವಾಗಿಯೂ ಭಯಾನಕವಾಗಿಯೂ ತೋರುತ್ತಿತ್ತು. ಅದರ […]