ಸೌಗಂಧಿಕಾ ಪುಷ್ಪ ತರಲು ಹೋದ ಭೀಮ, ದಾರಿಗೆ ಅಡ್ಡ ಬಂದ ಹನುಮ! : ಇದೇನು ಕಥೆ?

ದ್ರೌಪದಿ ಕೇಳಿದಳೆಂದು ಭೀಮೇನ ಸೌಗಂಧಿಕಾಪುಷ್ಟ ತರಲು ಹೊರಟ. ನಡುವೆ ಸಾಧಾರಣ ವಾನರನ ರೂಪದಲ್ಲಿ ಅಡ್ಡ ಬಂದ ಹನುಮ ಅವನಿಗೆ ದಾರಿ ಬಿಡದೆ ಸತಾಯಿಸಿದ! ಮಹಾಭಾರತದ ಈ ಕುತೂಹಲಕಾರಿ ಕಥೆ ಓದಿ… ಅದು ಪಾಂಡವರು ವನವಾಸದಲ್ಲಿದ್ದ ಕಾಲ. ಒಂದು ಸಂಜೆ ಭೀಮಸೇನ ದ್ರೌಪದಿಯೊಡನೆ ವಿಹರಿಸುತ್ತಿದ್ದ. ಅದೇವೇಳೆಗೆ ದಿವ್ಯ ಸುಗಂಧ ಸೂಸುತ್ತಾ ಹೂವೊಂದು ಗಾಳಿಯಲ್ಲಿ ತೇಲಿ ಬಂದು ದ್ರೌಪದಿಯ ಪಾದಗಳ ಬಳಿ ಬಿದ್ದಿತು. ಅದರ ಹೆಸರು ಸೌಂಗಧಿಕಾ ಪುಷ್ಟ. ಅದನ್ನು ನೋಡಿ ದ್ರೌಪದಿಗೆ ಬಹಳ ಸಂತೋಷವಾಯಿತು. ಇಂಥಾ ಮತ್ತಷ್ಟು ಹೂಗಳು […]