ನೈಜ ಧಾರ್ಮಿಕತೆಯ 10 ಲಕ್ಷಣಗಳಿವು… ನೀವೆಷ್ಟು ಧಾರ್ಮಿಕರು? ಪರೀಕ್ಷಿಸಿಕೊಳ್ಳಿ!

ಯಾವುದು ಆತ್ಮೋದ್ಧಾರಕ್ಕಾಗಿಯೂ ಪರಹಿತಕ್ಕಾಗಿಯೂ  ಆಚರಿಸಲ್ಪಡುತ್ತದೆಯೋ ಅದು ಧರ್ಮ. ಇದಕ್ಕೆ ಶಾಸ್ತ್ರಾಧಾರವಿಲ್ಲ. ನಿಯಮ – ನಿರ್ಬಂಧಗಳಿಲ್ಲ. ಧರ್ಮ ಎಂದರೆ ಮನುಷ್ಯರು ಅತ್ಯಗತ್ಯವಾಗಿ ಧರಿಸಬೇಕಾದ ಗುಣ. ಸಹಜವಾಗಿ ನಡೆಸಬೇಕಾದ, ಒಳಗೊಳಿಸಿಕೊಳ್ಳಬೇಕಾದ ಕರ್ತವ್ಯ. ಈ ಧರ್ಮ religion ಅರ್ಥದಲ್ಲಿ ಹೇಳಲಾಗುವ ಧರ್ಮವಲ್ಲ. ಈ ಸಹಜತೆಗೆ ಹೆಸರಿಲ್ಲ. ಇದು ಆಚರಣೆಯಲ್ಲಿ, ನಡವಳಿಕೆಯಲ್ಲಿ ವ್ಯಕ್ತವಾಗುವಂಥದ್ದು. ಇದನ್ನು ಗುರುತಿಸಲು ಈ ಕಿರುಚಿತ್ರಿಕೆಯಲ್ಲಿರುವ 10 ಲಕ್ಷಣಗಳು ಸಹಾಯ ಮಾಡಬಹುದು.  ನಿಮ್ಮಲ್ಲಿ ಈ 10 ಲಕ್ಷಣಗಳಿದ್ದರೆ ನೀವು ನಿಜವಾದ ಧಾರ್ಮಿಕರು. ಇವು ಅಲ್ಪ ಪ್ರಮಾಣದಲ್ಲಾದರೂ ಇದ್ದರೆ, ಧರ್ಮ ಮಾರ್ಗದಲ್ಲಿ […]

ಧಾರ್ಮಿಕತೆಯ ಹತ್ತು ಲಕ್ಷಣಗಳು

ಧಾರ್ಮಿಕತೆ, ದೇವತೆಗಳ ಪೂಜೆಗೆ ಸಂಬಂಧಿಸಿದ ಸಂಗತಿಯಲ್ಲ.  ಅದು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವ ನಡತೆಯಲ್ಲಿರುತ್ತದೆ. ಇಲ್ಲಿವೆ, ಧಾರ್ಮಿಕತೆಯ ಹತ್ತು ಸಲ್ಲಕ್ಷಣಗಳು.  ಧೃತಿ : ಎಲ್ಲಕ್ಕಿಂತ ಮೊದಲು ಧೈರ್ಯವಿರಬೇಕು. ಮನದಲ್ಲಿ ಮೂಡಿದ ಒಂದು ಒಳ್ಳೆಯ ಚಿಂತನೆಯನ್ನು ಕಾರ್ಯರೂಪಕ್ಕೆ ತರುವೆನೆಂಬ ಧೈರ್ಯ, ಆತ್ಮ ವಿಶ್ವಾಸವಿದ್ದರೆ ಮುಂದಿನದೆಲ್ಲಾ ಸುಲಭ. 2. ಕ್ಷಮಾ : ನಿಂದೆ-ಸ್ತುತಿ, ಲಾಭ-ನಷ್ಟ, ಸುಖ-ದುಃಖ ಮೊದಲಾದ ದ್ವಂದ್ವಗಳಲ್ಲಿ ಸಹನೆಯನ್ನು ಕಾಪಾಡಿಕೊಳ್ಳುವ ಪರಿ. ಕಷ್ಟವಾದರೂ ಅಸಾಧ್ಯವೇನಲ್ಲ. 3. ದಮ : ಮನಸ್ಸು ಸದಾ ಧರ್ಮ ಮಾರ್ಗದಲ್ಲಿದಾಗ ಮಾತ್ರ ಅಧರ್ಮಾಚರಣೆಯನ್ನು ತಡೆಯಲು ಸಾಧ್ಯ. […]

ಸಂತ ಪರಂಪರೆ ಮತ್ತು ರಾಷ್ಟ್ರ ಭಾವನೆ

ಭಾರತದ ಕೇಂದ್ರ ಇರುವುದು ಧಾರ್ಮಿಕತೆಯಲ್ಲಿಯೇ. ಈ ಎಳೆಯೇ ನೂರಾರು ವೈವಿಧ್ಯಗಳ ಪ್ರಾಂತ್ಯಗಳನ್ನು ಒಂದು ಸೂತ್ರದಲ್ಲಿ ಬೆಸೆದಿಟ್ಟಿರುವುದು. ಅದಕ್ಕೆ ಪೂರಕವಾಗಿ ಇಲ್ಲಿ ಆಗಿಹೋದ ಸಂತರನೇಕರು ಸಮಾಜ ಸುಧಾರಣೆಯ ಹರಿಕಾರರಾಗಿಯೂ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ  ~ ಆನಂದಪೂರ್ಣ ಭಾರತ  ರಾಜಕೀಯವಾಗಿ ಹಲವು ರಾಜ್ಯಗಳ ಒಕ್ಕೂಟ ಎನ್ನುವುದು ನಿಜ. ಆದರೆ ವಾಸ್ತವದಲ್ಲಿದು ಹಲವು ಸಂಸ್ಕೃತಿಗಳ, ಧರ್ಮಗಳ, ತತ್ತ್ವಗಳ, ಸಂಪ್ರದಾಯಗಳ ಒಕ್ಕೂಟ. ಈ ವಿಭಿನ್ನತೆಯನ್ನು ಒಗ್ಗೂಡಿಸಿರುವ ಮಹಾನ್ ಶಕ್ತಿಯೆಂದರೆ ಅದು ಅಧ್ಯಾತ್ಮ. ಭಾರತ ಸ್ವಾತಂತ್ರ್ಯಾನಂತರ ಒಂದು ಗಣರಾಜ್ಯವಾಗಿ ರೂಪುಗೊಂಡಿರುವಲ್ಲಿ ರಾಜಕೀಯ ಇಚ್ಛಾಶಕ್ತಿಯಷ್ಟೇ ಧಾರ್ಮಿಕ – ಆಧ್ಯಾತ್ಮಿಕ […]