ನಾವು ಶಾಪದಿಂದ ಭೂಮಿಗೆ ಬಂದವರಲ್ಲ, ಭೂಮಿಯನ್ನೆ ಶಾಪವಾಗಿಸಿಕೊಂಡವರು!

ವಾಸ್ತವದಲ್ಲಿ ಭೂಮಿಯಲ್ಲಿ ಜನಿಸುವುದು ಶಿಕ್ಷೆಯಲ್ಲ, ಈ ಜನನದ ಕಾರಣದಿಂದ ಆವರಿಸಿಕೊಳ್ಳುವ ಆತ್ಮವಿಸ್ಮೃತಿಯೇ ನಿಜವಾದ ಶಿಕ್ಷೆ. ಅದೇ ನಿಜವಾದ ಶಾಪ. ಹಿರಣ್ಯಕಷಿಪುವನ್ನು ಮುಸುಕಿದ್ದ ಈ ವಿಸ್ಮೃತಿಯಿಂದ ಮುಕ್ತಗೊಳಿಸಲು ಭಗವಂತ ಅವತರಿಸಿ ಬರುತ್ತಾನೆ. ತನ್ನನ್ನು ತಾನು ಭೂಮಿಯಲ್ಲಿ ಉಳಿಸಿಕೊಳ್ಳಲು ಹಿರಣ್ಯಕಷಿಪು ಎಷ್ಟೆಲ್ಲ ಜಾಣತನದ ಸುರಕ್ಷೆಗಳನ್ನು ಏರ್ಪಡಿಸಿಕೊಳ್ಳುತ್ತಾನೋ ಭಗವಂತ ಆ ಎಲ್ಲವನ್ನೂ ನಿವಾರಿಸಿ, ಆತನ ಮುಕ್ತಿಗಾಗಿ ಧಾವಿಸುತ್ತಾನೆ ~ ಚೇತನಾ ತೀರ್ಥಹಳ್ಳಿ ಭಗವಾನ್ ಮಹಾವಿಷ್ಣುವಿನ ನಾಲ್ಕನೇ ಅವತಾರ ಮಾನವಾಕೃತಿಯ ಸಿಂಹ – ನರಸಿಂಹಾವತಾರ. ಮನೆಯ ಒಳಗೂ, ಹೊರಗೂ, ಭೂಮಿಯ ಮೇಲೂ ಅಂತರಿಕ್ಷದಲ್ಲೂ ಸ್ತ್ರೀ – […]

ಶ್ರೀ ನರಸಿಂಹ ಅಷ್ಟೋತ್ತರ ಶತನಾಮ ಸ್ತೋತ್ರ : ಇಂದು ನರಸಿಂಹ ಚತುರ್ದಶಿ

ನರಸಿಂಹ ಜಯಂತಿ ಪ್ರಯುಕ್ತ ನರಸಿಂಹದೇವರ 108 ಹೆಸರುಗಳನ್ನು ಸೂಚಿಸುವ ಸ್ತೋತ್ರವನ್ನು ಇಲ್ಲಿ ನೀಡಲಾಗಿದೆ. ಹಾಗೂ ಕನ್ನಡದಲ್ಲಿ ಅದರ ಸರಳ ಅರ್ಥವನ್ನು ಕೂಡಾ ನೀಡಲಾಗಿದೆ…  ನಾರಸಿಂಹೋ ಮಹಾಸಿಂಹೋ ದಿವ್ಯಸಿಂಹೋ ಮಹಾಬಲಃ ಉಗ್ರಸಿಂಹೋ ಮಹಾದೇವಃ ಸ್ಥಂಭಜಚೋSಗ್ರಲೋಚನಃ || 1 || ಭಾವಾರ್ಥ: ಮಹಾಬಲಶಾಲಿಯೂ ಉಗ್ರರೂಪಿಯೂ ದೇವರ ದೇವನೂ ಕಂಬದಲ್ಲಿ ಮೂಡಿಬಂದವನೂ ಕೆರಳಿದ ಕಣ್ಣುಳ್ಳವನೂ ಆದ ನರಸಿಂಹದೇವನಿಗೆ ನಮಸ್ಕಾರ ರೌದ್ರ ಸರ್ವಾದ್ಭುತಃ ಶ್ರೀಮಾನ್ ಯೋಗಾನಂದ ತ್ರಿವಿಕ್ರಮಃ ಹರಿಃ ಕೋಲಾಹಲಃ ಚಕ್ರೀ ವಿಜಯೋ ಜಯವರ್ಧನಃ || 2 || ಭಾವಾರ್ಥ: ರುದ್ರರೂಪಿಯೂ ಎಲ್ಲ ಬಗೆಯಿಂದಲೂ ಅದ್ಭುತವಾಗಿ […]