ಚಾಮ್: ಟಿಬೆಟ್ಟಿನ ನರ್ತನ ಧ್ಯಾನ

ನರ್ತನವು ಕೂಡಾ ಧ್ಯಾನ – ತಂತ್ರದ ಭಾಗವಾಗಿದೆ. ಬೌದ್ಧ ಧರ್ಮೀಯರು ಆಚರಿಸುವ ನರ್ತನ ಧ್ಯಾನ ತಂತ್ರ ‘ಚಾಮ್’ ಬಗ್ಗೆ ಕಿರಿ ಮಾಹಿತಿ ಇಲ್ಲಿದೆ…. ನಮ್ಮ ತಟ್ಟೀರಾಯನನ್ನು ಮೀರಿಸುವಂಥ ಮುಖವಾಡಗಳು. ತಣ್ಣಗೆ ಸಾಗುತ್ತಲೇ ಭೀಕರ ಎನ್ನಿಸುವ ಆಂಗಿಕ ಚಲನೆ. ಹಿಮ್ಮೇಳದಲ್ಲಿ ಪುನರಾವರ್ತಿತ ಮಂತ್ರದ ಗುಂಗು. ಬೆಳ್ಳನೆ ಹಿಮ ರಾಶಿಯ ಹಿನ್ನೆಲೆಯಲ್ಲಿ ಗಾಢ ಬಣ್ಣಗಳ ದಟ್ಟಣೆ. ಈ ಎಲ್ಲವನ್ನು ಒಳಗೊಂಡಿರುತ್ತದೆ `ಚಾಮ್’ ನೃತ್ಯ. ವಾಸ್ತವದಲ್ಲಿ ಚಾಮ್ ಅಂದರೇನೇ ನೃತ್ಯ, ಟಿಬೆಟನ್ ಭಾಷೆಯಲ್ಲಿ. ಇದು ಬೌದ್ಧ ಆಚರಣೆಗಳಲ್ಲಿ ಮಹತ್ವದ ಪಾತ್ರ ಹೊಂದಿರುವಂಥದ್ದು. […]

ಕುಣಿದು ಕರೆದರೆ ಬಾರದಿರುವನೇ ಭಗವಂತ!?

ಭಗವಂತ ಬಯಲಿನಲ್ಲಿರುತ್ತಾನೆ. ಸ್ವಾತಂತ್ರ್ಯದಲ್ಲಿರುತ್ತಾನೆ. ನಗುವಿನಲ್ಲಿ, ಸಂಭ್ರಮದಲ್ಲಿ, ಪ್ರೇಮದಲ್ಲಿ ನೆಲೆಗೊಂಡಿರುತ್ತಾನೆ. ಇಂಥಾ ಅವ್ಯಕ್ತ ಭಗವಂತನ ಇರುವಿಕೆಯ ಅನುಭೂತಿ ಪಡೆಯುವ ಬಗೆಗಳಲ್ಲಿ ನರ್ತನವೂ ಒಂದು ~ ಆನಂದಪೂರ್ಣ ಕೌನ್ ಕಹ್‍ತೇ ಹೈ ಭಗವಾನ್ ಆತೇ ನಹೀ | ತುಮ್ ಮೀರಾ ಕೆ ಜೈಸೆ ಬುಲಾತೇ ನಹೀ || ಎಂದು ಶುರುವಾಗುವ ಭಜನೆಯೊಂದು – ಕೌನ್ ಕಹ್‍ತೇ ಹೈ ಭಗವಾನ್ ನಾಚ್ತೇ ನಹೀ | ಗೋಪಿಯೋಂ ಕಿ ತರಹ್ ತುಮ್ ನಚಾತೇ ನಹೀ || ಎಂಬ ಸಾಲುಗಳೊಂದಿಗೆ ಮುಕ್ತಾಯವಾಗುತ್ತದೆ. `ಮೀರಾಳ ತರಹ […]

ಧ್ಯಾನ ಮಾಡಲು ಕಲಿಯಿರಿ : ಕೆಲಸದ ಒತ್ತಡ ನಿವಾರಣೆಗೆ #2 ~ ಡ್ಯಾನ್ಸ್ ಮೆಡಿಟೇಶನ್

ಉಲ್ಲಾಸವಿಲ್ಲದ ದೈಹಿಕ ಚಟುವಟಿಕೆಗಳು ಯಾವತ್ತಿದ್ದರೂ ಶ್ರಮವೇ. ಆದ್ದರಿಂದ ನಾವು ಕಾಳಜಿ ವಹಿಸಿ ದೇಹವನ್ನು ಸಂತೈಸಬೇಕಾಗುತ್ತದೆ. ಇದಕ್ಕೆ ನರ್ತನ ಅಥವಾ ಡ್ಯಾನ್ಸ್ ಮೆಡಿಟೇಶನ್ ಉತ್ತಮ ಮದ್ದಾಗಬಲ್ಲದು ~ ಚಿತ್ಕಲಾ ವಾರ ಪೂರ್ತಿ ಒಂದು ಸ್ಥಳದಲ್ಲಿ ಕುಳಿತುಕೊಂಡು ಅಥವಾ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಓಡಾಡುತ್ತಾ ಕೆಲಸ ಮಾಡುವುದು ನಮ್ಮಲ್ಲಿ ಒಂದು ಬಗೆಯ ಸುಸ್ತನ್ನೂ ಅಸಹನೆಯನ್ನೂ ಹುಟ್ಟುಹಾಕುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ವಾರಕ್ಕೊಮ್ಮೆಯಾದರೂ ಬ್ರೇಕ್ ತೆಗೆದುಕೊಂಡು ದೇಹಕ್ಕೆ ಉಲ್ಲಾಸದ ಸ್ಪರ್ಶ ನೀಡುವುದು ಅಗತ್ಯ. ಉಲ್ಲಾಸವಿಲ್ಲದ ದೈಹಿಕ ಚಟುವಟಿಕೆಗಳು ಯಾವತ್ತಿದ್ದರೂ ಶ್ರಮವೇ. ಆದ್ದರಿಂದ ನಾವು ಕಾಳಜಿ […]