ನಾನಾ ವಿಧದ ನವರಾತ್ರಿ ~ 5 : ಗುಜರಾತಿನ ರಾಸಗರ್ಬಾ, ಮಹಾರಾಷ್ಟ್ರದ ಖಂಡೇ ನವಮಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, ಈ ಕಂತಿನಲ್ಲಿ  ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಮಾಹಿತಿ ಇದೆ.  ಗುಜರಾತಿನ ದಾಂಡಿಯಾ ದಸರೆ! ನವರಾತ್ರಿ ಎಂದಾಕ್ಷಣ ನಮಗೆ ನೆನಪಾಗುವುದು ಗುಜರಾತಿ ಬಂಧುಗಳ ‘ರಾಸ-ಗರ್ಬಾ’ ಮತ್ತು ’ದಾಂಡಿಯಾ ರಾಸ’ ನೃತ್ಯಗಳು. ಇದರ ವೈಭವವನ್ನು ನೋಡಬೇಕೆಂದರೆ ನೀವು ಅಹಮದಾಬಾದಿಗೆ ಬರಬೇಕು. ಆಗ ಊರಿಗೆ ಊರೇ ನರ್ತಿಸುತ್ತಿದೆಯೇನೋ ಎಂಬಷ್ಟು ಸಂಭ್ರಮದ ವಾತಾವರಣ. ನವರಾತ್ರಿಯಲ್ಲಿ  ಗುಜರಾತಿನ ಯಾವ ಮೂಲೆಗೆ ಹೋದರೂ ನೀವು […]

ನಾನಾ ವಿಧದ ನವರಾತ್ರಿ ~ 4 : ಈಶಾನ್ಯ ರಾಜ್ಯಗಳಲ್ಲಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, ಈ ಕಂತಿನಲ್ಲಿ ಈಶಾನ್ಯ ರಾಜ್ಯಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಮಾಹಿತಿ ಇದೆ.  ಮಾತಾ ತ್ರಿಪುರೇಶ್ವರಿ ಮಂದಿರದಲ್ಲಿ…      ಈಶಾನ್ಯ ಭಾರತದ ರಾಜ್ಯಗಳಲ್ಲೊಂದು ತ್ರಿಪುರಾ. ಮೂರು ಕಡೆ ಬಾಂಗ್ಲಾ ದೇಶ ಮತ್ತು ಒಂದು ಕಡೆ ಅಸ್ಸಾಮ್ ಹಾಗೂ ಮಿಜೊರಾಮ್  ಈ ರಾಜ್ಯವನ್ನು ಸುತ್ತುವರಿದಿವೆ. ಮಾತಾ ತ್ರಿಪುರೇಶ್ವರಿ ಅಥವಾ ಮಾತಾ ತ್ರಿಪುರಸುಂದರಿ ದೇವಿಯ ನೆಲೆಯಾದ್ದರಿಂದ ಈ ರಾಜ್ಯಕ್ಕೆ ತ್ರಿಪುರಾ ಎಂಬ ಹೆಸರು ಬಂತು.  ‘ಮಾತಾಬಾರಿ’ ಮಂದಿರ ಎಂದೂ ಕರೆಯಲ್ಪಡುವ ಮಾತಾ ತ್ರಿಪುರೇಶ್ವರಿ ದೇವಾಲಯ ಭಾರತದ […]

ನಾನಾ ವಿಧದ ನವರಾತ್ರಿ ~ 3 : ಬಸ್ತಾರ್ ಮತ್ತು ಬಂಗಾಳದಲ್ಲಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, ಈ ಕಂತಿನಲ್ಲಿ ಬಸ್ತಾರ್ ಮತ್ತು ಪಶ್ಚಿಮ ಬಂಗಾಳಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಮಾಹಿತಿ ಇದೆ.  ಬಂಗಾಲಿಗಳ ಅತಿ ದೊಡ್ಡ ಹಬ್ಬ! ದುರ್ಗಾ ಮಾತೆ… ಬಂಗಾಲಿಗಳ ಮಾತೃ ದೇವತೆ.  ನಮ್ಮಲ್ಲಿ ಗಲ್ಲಿ-ಗಲ್ಲಿಗೆ ಸಾರ್ವಜನಿಕ ಗಣೇಶನನ್ನು ಕೂರಿಸುವ ಹಾಗೆ, ಪಶ್ಚಿಮ ಬಂಗಾಳ ಮತ್ತು ಬಂಗಾಲಿಗಳು ಇರುವಲ್ಲೆಲ್ಲ ಸಾರ್ವಜನಿಕ ದುರ್ಗಾ ವಿಗ್ರಹದ ಪೂಜೆ  ನಡೆಯುತ್ತದೆ. ಇದೇ ‘ಸರ್ಬೋಜನೀನ ದುರ್ಗಾ ಪೂಜಾ.’ ಮೊದಮೊದಲು ಕೇವಲ ಜಮೀನುದಾರರು, ಶ್ರೀಮಂತರು ತಮ್ಮ ಮನೆಯಂಗಣದಲ್ಲಿ ವಿಜ್ರಂಭಣೆಯಿಂದ ದುರ್ಗಾ ಪೂಜೆ ನಡೆಸುತ್ತಿದ್ದರು. ಇಂಥಾ ಪೂಜೆಗೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. 1606 ರಲ್ಲಿ ಒಮ್ಮೆ ಹೂಗ್ಲಿ ಜಿಲ್ಲೆಯ 12 ಜನ  […]

ರಾಮಲೀಲಾ, ರಾವಣ ದಹನ, ಇತ್ಯಾದಿ : ನಾನಾ ವಿಧದ ನವರಾತ್ರಿ ~ 2

ಕರ್ನಾಟಕದಲ್ಲಿ ನಾವು ನವರಾತ್ರಿಯನ್ನು ಹೇಗೆ ಆಚರಿಸುತ್ತೇವೆ ಎಂಬುದು ನಮಗೆ ಗೊತ್ತಿದೆ. ಇದು ನಾಡಹಬ್ಬ ಎಂಬ ಸಂಭ್ರಮಕ್ಕೆ ಪಾತ್ರವಾದ ವೈಭವದ ಉತ್ಸವ. ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನಾಲ್ಕು ಕಂತುಗಳಲ್ಲಿ ನೀಡಲಿದೆ. ಈ ಕಂತಿನಲ್ಲಿ ಉತ್ತರ ರಾಜ್ಯಗಳ ನವರಾತ್ರಿ ಉತ್ಸವ ಮಾಹಿತಿ ಇದೆ. ಉತ್ತರ ಭಾರತದಲ್ಲಿ… ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ‘ದಶ-ಹರ’ (ಹತ್ತು ತಲೆಯವನ ನಿರ್ನಾಮ) […]

ಆದಿ ಶಕ್ತಿಯ ಒಂಭತ್ತು ರೂಪಗಳು : ನವರಾತ್ರಿ ವಿಶೇಷ

ಸಾಮಾನ್ಯ ಮನುಷ್ಯ ಯೋನಿಯಲ್ಲಿ ಜನಿಸಿದ ಪಾರ್ವತಿಯು ತನ್ನೊಳಗಿನ ಮಹಾಕಾಳಿ ಸ್ವರೂಪವನ್ನು ಕಂಡುಕೊಂಡು ಲೋಕೋಪಕಾರಿಯಾಗಿ ಮುನ್ನಡೆಯುವ ಹಲವು ಹಂತಗಳೇ ಆದಿಶಕ್ತಿಯ ನವ ರೂಪಗಳು. ಇವುಗಳ ಸಂಸ್ಮರಣೆಯೇ ನವರಾತ್ರಿ ~ ಆನಂದಪೂರ್ಣ ಪ್ರಥಮಂ ಶೈಲಪುತ್ರೀ ಚ  ದ್ವಿತೀಯಂ ಬ್ರಹ್ಮಚಾರಿಣಿ | ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ || ಪಂಚಮಂ ಸ್ಕಂದಮಾತೇತಿ  ಷಷ್ಠಂ ಕಾತ್ಯಾಯಿನೀತಿ ಚ | ಸಪ್ತಮಂ ಕಾಲರಾತ್ರಿಶ್ಚ  ಮಹಾಗೌರೀತಿ ಚಾಷ್ಟಮಮ್ || ನವಮಂ ಸಿದ್ಧಿಧಾತ್ರೀ ಚ ನವದುರ್ಗಾಃ ಪ್ರಕೀರ್ತಿತಾಃ | ಸ್ವತಃ ಶಕ್ತಿಯೇ ಆಗಿರುವ ದೇವಿ ಒಂಭತ್ತು ರೂಪಗಳಲ್ಲಿ […]