ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದಿದ್ದರೆ…. : ಒಂದು ನಸ್ರುದ್ದೀನ್ ಕಥೆ

ನಶೆಯೇರಿ ಅಲೆಯುತ್ತಿದ್ದ ಮುಲ್ಲಾ ನಸ್ರುದ್ದೀನನನ್ನು ಪೊಲೀಸನೊಬ್ಬ ತಡೆದು “ಯಾರು ನೀನು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿದ್ದೀಯ?” ಎಂದು ಕೇಳಿದ. ಅದಕ್ಕೆ ನಸ್ರುದ್ದೀನ್ ಕೊಟ್ಟ ಉತ್ತರವೇನು ಗೊತ್ತೆ!? 

ಹಾಲು ಕುಡಿದು ಮಲಗಿದರೆ ನಶೆ ಏರುವುದು ಹೇಗೆ?

ಮುಲ್ಲಾ ನಸ್ರುದ್ದೀನ್ ಯಾವತ್ತಿನಂತೆ ತನ್ನ ಕತ್ತೆಯನ್ನೇರಿ ಎಲ್ಲಿಗೋ ಹೋಗುತ್ತಿದ್ದ. ದಾರಿಯಲ್ಲಿ ಹಾಲು ಮಾರುವಾತ ಎದುರಾದ. ಆತ ಯಾವುದೋ ಚಿಂತೆಯಲ್ಲಿದ್ದ. ಆತ ನಸ್ರುದ್ದೀನನನ್ನು ತಡೆದು, “ನನಗೊಂದು ಸಮಸ್ಯೆ ಇದೆ. ದಯವಿಟ್ಟು ಪರಿಹಾರ ಹೇಳು” ಎಂದು ಕೇಳಿದ. ಅವನು ಹೆಗಲ ಮೇಲೆ ಹೊತ್ತುಕೊಂಡಿದ್ದ ಅಡ್ಡ ಕೋಲಿನ ಎರಡೂ ತುದಿಗಳಿಗೆ ಕಟ್ಟಿದ ಮಡಿಕೆಯ್ಲಲಿ ಹಾಲಿತ್ತು. ನಸ್ರುದ್ದೀನ್ ಉದಾರ ಬುದ್ಧಿ ತೋರಿ “ಅದೇನು ಸಮಸ್ಯೆ ಹೇಳು ನೋಡೋಣ” ಅಂದ.  “ಬೆಳಗ್ಗೆ ನಿದ್ದೆಯಿಂದ ಎದ್ದಾಗ ನಶೆಯಲ್ಲಿರುವ ಭಾವನೆ ಉಂಟಾಗುತ್ತದೆ. ತಲೆಸುತ್ತುವುದರ ಜೊತೆಗೆ ಕುಡಿತದ ನಶೆ […]