“ನಾನು ಯಾರು?” ರಮಣ ಮಹರ್ಷಿಗಳೊಡನೆ ಪ್ರಶ್ನೋತ್ತರ  : ಭಾಗ 2

ರಮಣ ಮಹರ್ಷಿಗಳು ಮತ್ತು ಶಿವಪ್ರಕಾಶಂ ಪಿಳ್ಳೈಯವರ  ಆಧ್ಯಾತ್ಮಿಕ ಸಂವಾದದ ಆಯ್ದ ಭಾಗ ಇಲ್ಲಿದೆ. ಇದು  ಪ್ರಶ್ನೋತ್ತರ ಸರಣಿಯ ಎರಡನೇ ಭಾಗ. ಮೊದಲ ಭಾಗ ಇಲ್ಲಿದೆ : https://aralimara.com/2019/02/16/ramana-6/ ಶಿವಪ್ರಕಾಶಂ ಪಿಳ್ಳೈ :  ಮನೋನಿಗ್ರಹಕ್ಕೆ ಬೇರೆ ಯಾವ ಉಪಾಯಗಳೂ ಇಲ್ಲವೆ? ರಮಣ ಮಹರ್ಷಿ : ಮನೋನಿಗ್ರಹಕ್ಕೆ ಆತ್ಮ ವಿಚಾರವನ್ನು ಬಿಟ್ಟು ಬೇರೆ ಯಾವ ಉಪಾಯಗಳೂ ಇಲ್ಲ. ಇತರ ಉಪಾಯಗಳಿಂದ ಮನಸ್ಸು ನಿಗ್ರಹಿಸಲ್ಪಟ್ಟಂತೆ ಕಂಡುಬಂದರೂ ಅದು ಮತ್ತೆ ತಲೆದೋರುವುದು. ಪ್ರಾಣಾಯಾಮದಿಂದ ಮನಸ್ಸು ನಿಗ್ರಹಿಸಿದಂತೆ ತೋರಿದರೂ ಪ್ರಾಣಾಯಾಮದ ಬಳಿಕ ಮತ್ತೆ ಉಸಿರಾಟವು ಪ್ರಾರಂಭವಾದಾಗ ಮನಸ್ಸೂ […]

“ನಾನು ಯಾರು?” ರಮಣ ಮಹರ್ಷಿಗಳೊಡನೆ ಪ್ರಶ್ನೋತ್ತರ  : ಭಾಗ 1

ರಮಣ ಮಹರ್ಷಿಗಳು ಮತ್ತು ಶಿವಪ್ರಕಾಶಂ ಪಿಳ್ಳೈಯವರ  ಆಧ್ಯಾತ್ಮಿಕ ಸಂವಾದದ ಆಯ್ದ ಭಾಗ ಇಲ್ಲಿದೆ. ‘ನಾನು ಯಾರು’ ಎಂಬ  ಮೂಲಭೂತ ಪ್ರಶ್ನೆಗೆ ರಮಣರು ಇಲ್ಲಿ ಉತ್ತರಿಸಿದ್ದಾರೆ.  ಶಿವಪ್ರಕಾಶಂ ಪಿಳ್ಳೈ : ಸಪ್ತ ಧಾತು(ಮಜ್ಜೆ, ಮೂಳೆ, ಕೊಬ್ಬು, ಮಾಂಸ, ರಕ್ತ, ಒಳಚರ್ಮ, ಹೊರಚರ್ಮ)ಗಳಿಂದ ಕೂಡಿರುವ ಸ್ಥೂಲ ಶರೀರವು ನಾನಲ್ಲ. ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆನ್ನುವ ಪಂಚವಿಷಯಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಅರಿಯುವ ಪಂಚ ಜ್ಞಾನೇಂದ್ರಿಯಗಳೂ ನಾನಲ್ಲ. ವಾಕ್ಕು, ಕೈಕಾಲುಗಳು, ಗುದೋಪಸ್ಥಗಳೆಂಬ ಪಂಚ ಕರ್ವೇಂದ್ರಿಯಗಳೂ ನಾನಲ್ಲ. ಪ್ರಾಣ, ಅಪಾನ, ವ್ಯಾನ, […]