ನಾರ್ಸಿಸಿಸ್ಟ್ ಪ್ರೇಮಿಯನ್ನು ಗುರುತಿಸುವುದು ಹೇಗೆ?

ನೀವು ಒಬ್ಬ/ಳು ಪ್ರೇಮಿಯಾಗಿದ್ದು, ನಿಮ್ಮಲ್ಲಿ ನಾರ್ಸಿಸಿಸ್ಟ್ ಗುಣವಿದ್ದರೆ, ನಿಮ್ಮ ಪ್ರೇಮ ಯಾವತ್ತೂ ಸಫಲವಾಗುವುದಿಲ್ಲ. ಏಕೆಂದರೆ ಪ್ರೇಮವು ಪರಸ್ಪರ ಪೂರಕವಾದ ಪ್ರಕ್ರಿಯೆ. ಅಲ್ಲಿ ನೀವು ನಿಮ್ಮ ಕುರಿತು ಕಡಿಮೆ ಮತ್ತು ಪ್ರೇಮಿಯ ಕುರಿತು ಹೆಚ್ಚು ಯೋಚಿಸಬೇಕಾಗುತ್ತದೆ. ನಿಮ್ಮಲ್ಲಿ ಈ ಕೆಳಗಿನ ಸಂಭಾಷಣೆಯಲ್ಲಿ ಕಾಣಿಸುವಂಥ ಆಲೋಚನೆ ಅಥವಾ ಅಸಹನೆ ಇರುವುದೇ ಆದರೆ, ನೀವು ನಾರ್ಸಿಸಿಸ್ಟ್ ಆಗಿದ್ದೀರಿ ಎಂದರ್ಥ ~ ಅಲಾವಿಕಾ ಈ ಸಂಭಾಷಣೆಯನ್ನು ಗಮನಿಸಿ. ಪ್ರೇಮಿಗಳಿಬ್ಬರು ಮಾತಾಡುತ್ತಾ ಕುಳಿತಿರುತ್ತಾರೆ. ಅವಳ ಫೋನ್’ಗೆ ಅವಳ ಅಮ್ಮನ ಕರೆ ಬರುತ್ತದೆ. ಅವನು : […]

ಸ್ವಯಂ ವ್ಯಾಮೋಹಿ ನಾರ್ಸಿಸಸ್ :  ಗ್ರೀಕ್ ಪುರಾಣ ಕಥೆಗಳು ~ 18

ತನ್ನದೇ ಬಿಂಬವನ್ನು ಬೇರೊಬ್ಬನಾಗಿ ಭಾವಿಸಿ ಮೋಹಗೊಂಡ ನಾರ್ಸಿಸಸ್, ಆ ಕಡುಮೋಹದಲ್ಲೇ ಕೊನೆಯಾಗಿ ಹೋದ. ಈತನ ಕಥನದ ಹಿನ್ನೆಲೆಯಲ್ಲಿ ಆಧುನಿಕ ಮನಶ್ಶಾಸ್ತ್ರ ಮತ್ತು ಸಾಹಿತ್ಯಗಳು ಸ್ವಮೋಹಿಯನ್ನು ನಾರ್ಸಿಸಿಸ್ಟ್ ಎಂದೂ ಸ್ವಮೋಹವನ್ನು ನಾರ್ಸಿಸಿಸಮ್ ಎಂದೂ ಕರೆಯುತ್ತವೆ.  ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ನಾರ್ಸಿಸಸ್ ನದಿ ದೇವತೆ ಸಿಫಿಸಸ್ ಮತ್ತು ಲಿರಿಯೋಪೆಯರ ಮಗ, ಅತ್ಯಂತ ಸುಂದರ ರೂಪವನ್ನು ಹೊಂದಿದ್ದ ನಾರ್ಸಿಸಸ್, ದೇವತೆಗಳ ಲೋಕದಲ್ಲಿ ಯುವತಿಯರ ಕಣ್ಮಣಿಯಾಗಿದ್ದ. ಆದರೆ ಆತ ಯಾವತ್ತೂ ತನ್ನ ಮುಖವನ್ನೇ ನೋಡಿಕೊಂಡಿರಲಿಲ್ಲ. ದೇವಲೋಕದ ಕುವರಿಯರು, ಅಪ್ಸರೆಯರು […]