ಇಂದೇ ಬದುಕಿಬಿಡಿ; ಏಕೆಂದರೆ, ನಾಳೆ ಎಂಬುದಿಲ್ಲ….!

ಸೃಷ್ಟಿಯ ಪ್ರತಿಯೊಂದೂ ಹೀಗೆ ವರ್ತಮಾನದಲ್ಲಿ ಸಹಜವಾಗಿ ಬದುಕುತ್ತವೆ. ಆದರೆ ಮಾನವನಿಗೆ ಮಾತ್ರ ನಾಳೆಯದೇ ಚಿಂತೆ. ಮನುಷ್ಯರಷ್ಟೆ ನಾಳೆಗೆ ಬೇಕಾಗುತ್ತದೆ, ನಾಡಿದ್ದಿಗೆ ಬೇಕಾಗುತ್ತದೆ ಎಂದು ವ್ಯವಸ್ಥೆ ಮಾಡಿಟ್ಟುಕೊಳ್ಳುವುದು. ಈ ಗೀಳು ಎಷ್ಟೆಂದರೆ, ಕೆಲವರು ತಾವು ಸತ್ತ ಮೇಲೆ ನಮ್ಮ ಗೋರಿ ಹೀಗೇ ಇರಬೇಕೆಂದು ವ್ಯವಸ್ಥೆ ಮಾಡುವವರೂ ಇದ್ದಾರೆ! : ಓಶೋ ರಜನೀಶ್ ಮನುಷ್ಯ ಇವತ್ತಿಗಿಂತ ನಾಳೆಗಾಗಿ ಜೀವಿಸುವುದೇ ಹೆಚ್ಚು. ನೀವೆಲ್ಲರೂ ನಾಳೆಗಾಗಿ ವ್ಯವಸ್ಥೆ ಮಾಡುತ್ತಿರುವಿರಿ. ಮತ್ತು ಈ ಭರದಲ್ಲಿ ಇಂದಿನ ದಿನವನ್ನು ಮರೆಯುತ್ತಿದ್ದೀರಿ. ಇದು ಹೀಗೆಯೇ ಮುಂದುವರೆಯುತ್ತದೆ. ನಾಳೆಗಾಗಿ […]

ನಾಳೆ ಬರುವುದು ನಾಳೆಯೇ, ಈ ದಿನವನ್ನು ಸಂತಸದಿಂದ ಕಳೆಯಿರಿ : ಬೆಳಗಿನ ಹನಿ

ದೂರದೃಷ್ಟಿ ಇರಬೇಕು ನಿಜ. ನಾಳೆಯ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು ಅನ್ನುವುದೂ ನಿಜ. ಹಾಗೆಂದು ನಾಳೆಯ ಆಲೋಚನೆಗಳಲ್ಲೇ ಇಂದು ಮಾಡಬೇಕಾದ ಕೆಲಸಗಳಿಂದ ವಿಮುಖರಾಗುವುದು ಸರಿಯಲ್ಲ. ಇಂದು ಅನುಭವಿಸಬೇಕಾದ ಆನಂದದಿಂದ ನಮ್ಮನ್ನು ವಂಚಿಸಿಕೊಳ್ಳುವುದೂ ಸರಿಯಲ್ಲ. ಇಂದಿನ ದುಡಿಮೆಯನ್ನು ನಾಳೆಗಾಗಿಯೂ ಕೊಂಚ ಎತ್ತಿಡುವುದು ಜಾಣ ನಡೆ. ಇತರ ಪ್ರಾಣಿಗಳಂತಲ್ಲದೆ ಮನುಷ್ಯನ ಬದುಕಿನಲ್ಲಿ ಮನೆ, ಮಕ್ಕಳು (ಕುಟುಂಬ) ಮತ್ತು ಸ್ವಾಭಿಮಾನಗಳು ಹೆಚ್ಚುವರಿಯಾಗಿರುತ್ತವೆ. ಅವುಗಳನ್ನು ಕಾಯ್ದುಕೊಳ್ಳುವುದು ಕೂಡ ಮನುಷ್ಯನ ಕರ್ತವ್ಯಗಳ ಸಾಲಿಗೆ ಸೇರುತ್ತದೆ. ಆದ್ದರಿಂದ ಉಳಿತಾಯ ಯಾವುದೇ ಮನುಷ್ಯನ ಮೂಲಭೂತ ಕರ್ತವ್ಯವಾಗಿದೆ.  ಆದರೆ ಉಳಿತಾಯವನ್ನು ಒಂದು […]