ಮನೋನಿಯಂತ್ರಣವಿದ್ದರೆ ಮಾತ್ರ ಕಾರ್ಯಸಿದ್ಧಿ : ಸುಭಾಷಿತ

ಮನಸೋ ನಿಗ್ರಹಾಯತ್ತಮಭಯಂ ಸರ್ವಯೋಗಿನಾಮ್ | ದುಃಖಕ್ಷಯಃ ಪ್ರಬೋಧಶ್ಚಾಪ್ಯಕ್ಷಯಾ ಶಾಂತಿರೇವ ಚ || ಮಾಂಡೂಕ್ಯಕಾರಿಕಾ || “ಎಲ್ಲ ಯೋಗಿಗಳ ಲಕ್ಷಣವಾದ ಅಭಯವು ಅವರ ಮೋನಿಗ್ರಹದ ಫಲ. ಎಲ್ಲ ಶೋಕದ ನಾಶಕ್ಕೂ ಆತ್ಮಜ್ಞಾನಪ್ರಾಪ್ತಿಗೂ ಶಾಶ್ವತಶಾಂತಿಗೂ ಕಾರಣವಾಗಬಲ್ಲ ಏಕೈಕ ಸಾಧನವೆಂದರೆ ಮನಸ್ಸಿನ ನಿಗ್ರಹವೇ” ಎನ್ನುತ್ತದೆ ಮಾಂಡೂಕ್ಯಕಾರಿಕಾದ ಒಂದು ಸುಭಾಷಿತ. ನಾವು ಬಹುತೇಕರು ಮನಸ್ಸಿನ ಗುಲಾಮರಾಗಿದ್ದೇವೆ. ಈ ಮನಸ್ಸಾದರೂ ಹುಚ್ಚುಕುದುರೆಯಂತೆ ಕಡಿವಾಣವಿಲ್ಲದೆ ನಾಗಾಲೋಟ ನಡೆಸಿರುತ್ತದೆ. ಅದರ ವೇಗಕ್ಕೆ, ಅದು ಚಲಿಸುವ ದಿಕ್ಕುಗಳಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳಲಾಗದೆ ಹೈರಾಣಾಗಿಬಿಡುತ್ತೇವೆ. ನಾವು ಗೊಂದಲಕ್ಕೆ ಒಳಗಾಗುವುದು, ತಪ್ಪು […]

ಮನಸ್ಸನ್ನು ನಿಯಂತ್ರಿಸುವ ಮೊದಲು ಅದನ್ನು ಅರಿಯಿರಿ : ಸಾಮವೇದ

“ಮೊದಲು ನಿಮ್ಮ ಮನಸ್ಸಿನ ಸಾಮರ್ಥ್ಯವನ್ನು ಅರಿಯಿರಿ. ಆಮೇಲೆ ಅದನ್ನು ಪಳಗಿಸುವ ಪ್ರಯತ್ನ ಮಾಡಿ” ಅನ್ನುತ್ತದೆ ಸಾಮವೇದ.  ತನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಲ್ಲವರಷ್ಟೆ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸದೆ ಹೋದರೆ ಅದು ನಮ್ಮನ್ನು ತನ್ನ ಅಡಿಯಾಳಾಗಿ ಮಾಡಿಕೊಳ್ಳುತ್ತದೆ. ಹಾಗೇನಾದರೂ ಆದರೆ ನಾವು ಚಂಚಲಚಿತ್ತರಾಗಿಬಿಡುತ್ತೇವೆ. ಹೀಗಾದಾಗ ನಾವು ಯಾವುದೇ ವಿಷಯದಲ್ಲಿ ದೃಢನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ದೃಢ ನಿರ್ಧಾರ ತಾಳದ ಹೊರತು ಯಾವುದೇ ಕೆಲಸ ಸುಸೂತ್ರವಾಗಿ ನಡೆಯುವುದೂ ಸಾಧ್ಯವಿಲ್ಲ.  ಆದರೆ ಈ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದು […]

ಅಲ್ಲಮಪ್ರಭುಗಳ ವಚನ : ಬೆಳಗಿನ ಹೊಳಹು

ಕಾಲು ಗಳೆರಡು ಗಾಲಿ ಕಂಡಯ್ಯಾ, ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ, ಬಂಡಿಯ ಹೊಡೆವವರ್ಯೆವರು ಮಾನಿಸರು ಒಬ್ಬರಿಗೊಬ್ಬರು ಸಮನಿಲ್ಲವಯ್ಯಾ, ಅದರಿಚ್ಚೆಯನರಿದು ಹೊಡೆಯದಿರ್ದಡೆ ಅದರಚ್ಚು ಮುರಿದಿತ್ತು ಗುಹೇಶ್ವರಾ || ಅಲ್ಲಮ ಪ್ರಭು || ಅರ್ಥ : ದೇಹ ಒಂದು ಬಂಡಿ. ಕಾಲುಗಳೇ ಚಕ್ರಗಳು, ಇದನ್ನು ನಡೆಸುತ್ತಿರುವವರು ಐದು ಜನ!! ಈ ಐದ ಜನರೆಂದರೆ ಭಿನ್ನ ಕಾರ್ಯಗಳನ್ನು ನಡೆಸುವ ಪಂಚೇಂದ್ರಿಯಗಳು. ಆತ್ಮನೆಂಬ ಒಡಯನು ಈ ಬಂಡಿಯಲ್ಲಿ ಪ್ರಯಾಣ ಮಾಡುತ್ತಾನೆ. ಅವನು ಯೇರಿಗೂ ಏನನ್ನೂ ಹೇಳುವುದಿಲ್ಲ. ಆದ್ದರಿಂದ ಪಂಚೇಂದ್ರಿಯಗಳಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಈ […]