ದೇವರು ಕಷ್ಟವೇಕೆ ಕೊಡುತ್ತಾನೆ? ನಿಯತಿಯ ತಪ್ಪಿಗೆ ನಾವು ಹೊಣೆಯೇ? : ಅರಳಿಮರ ಸಂವಾದ

ನಾವು ಕಷ್ಟ ಮಾತ್ರವಲ್ಲ, ಸುಖವನ್ನೂ ದೇವರ ತಲೆಯ ಮೇಲೆ ಹೊರಿಸಿ, ಅವನು ಕೊಟ್ಟ ಎಂದುಬಿಡುತ್ತೇವೆ. ಆದ್ದರಿಂದ, ತಪ್ಪು ದೇವರದ್ದಲ್ಲ, ನಮ್ಮದು. ಸುಖವನ್ನು ನಾವು ದೇವರ ಮೇಲೆ ಹೊರಿಸೋದು, ಅದನ್ನು ನಿಭಾಯಿಸುವ ಮತ್ತು ಕಾಯ್ದುಕೊಳ್ಳುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಅಷ್ಟೆ. ಹಾಗೆಯೇ ಕಷ್ಟವನ್ನು ದೇವರ ಮೇಲೆ ಹೊರಿಸೋದು, ಅದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು! ~ ಚಿತ್ಕಲಾ ದೇವರು ಕಷ್ಟಗಳನ್ನೇಕೆ ಕೊಡುತ್ತಾನೆ? ಇದು ಅರಳಿಮರದ ಚರ್ಚೆಯಲ್ಲಿ ಓದುಗರಾದ ಲಕ್ಷ್ಮಿಮಧು ಅವರು ಮುಂದಿಟ್ಟ ಪ್ರಶ್ನೆ. ಎಲ್ಲಕ್ಕಿಂತ ಮೊದಲು, ದೇವರು ಅನ್ನುವ ಅಸ್ತಿತ್ವ ಒಂದಿದೆ ಮತ್ತು […]

ನಿಯತಿ : ಅಸ್ತಿತ್ವದ ಯೋಜನೆಯ ಕಾರ್ಯನಿರ್ವಾಹಕಿ

‘ಈ ಸೃಷ್ಟಿಯೊಂದು ಕಾಸ್ಮಿಕ್ ಕಾನ್ಸ್‍ಪಿರೆಸಿ – ಅಸ್ತಿತ್ವದ ಪಿತೂರಿ’ ಅನ್ನುತ್ತಾರೆ ಓಶೋ ರಜನೀಶ್. ಎಲ್ಲವನ್ನೂ ಅದು ಮೊದಲೇ ನಿರ್ಧರಿಸಿಯಾಗಿರುತ್ತದೆ. ತನ್ನ ನಡೆಯನ್ನೇ ಅದು ನಡೆಯುತ್ತಲೂ ಇರುತ್ತದೆ. ಸೃಷ್ಟಿಯ ಎಲ್ಲ ಜಡ ಚೇತನಗಳನ್ನು ಅದರ ಈಡೇರಿಕೆಗಾಗಿ ಬಳಸಿಕೊಳ್ಳುತ್ತದೆ. ಅಸ್ತಿತ್ವದ ಈ ಯೋಜನೆಯ ಕಾರ್ಯನಿರ್ವಾಹಕಿಯೇ `ನಿಯತಿ’. ನಿಯತಿಯು `ವಿಧಿ’ಯ ಒಡತಿ.  ~ಆನಂದಪೂರ್ಣ ಸೃಷ್ಟಿಯ ಯಾವುದೇ ಜೀವಿ ಪರಿಪೂರ್ಣ ಸ್ವಾತಂತ್ರ್ಯ ಹೊಂದಿರುವುದಿಲ್ಲ. ರಂಗಮಂಚದ ಮೇಲೆ ನಟರು ಎಷ್ಟೇ ಸ್ವತಂತ್ರವಾಗಿ ಪಾತ್ರ ನಿಭಾಯಿಸುತ್ತಿದ್ದರೂ ಅವರ ಪಾತ್ರ ಹಾಗೂ ಕಥನಗಳು ಸೂತ್ರಧಾರನ ನಿರ್ದೇಶನಕ್ಕೆ ತಕ್ಕಂತೆ […]

ನೆರೆಯೊಂದಿಗೆ ಹರಿದ ಶರ್ಮಿಷ್ಟೆಯ ಮಾದರಿ

ಬಂಡಾಯ ಏಳುವುದೆಂದರೆ ಸತ್ಯವನ್ನು ನಿರಾಕರಿಸುವುದಲ್ಲ. ಪ್ರವಾಹದ ವಿರುದ್ಧ ಈಜಬೇಕಿರುವುದು, ವಿರುದ್ಧ ದಿಕ್ಕಿನಲ್ಲಿ ಗುರಿ ಇದೆಯೆಂದಾಗ ಮಾತ್ರವೇ ಹೊರತು ಕೈಗಳಲ್ಲಿ ಕಸುವಿದೆ ಎಂದಲ್ಲ. ಅನಗತ್ಯವಾಗಿ ವಿರುದ್ಧ ದಿಕ್ಕಿನ ದಾರಿಯಲ್ಲಿ – ಯಾವುದು ನಮಗಾಗಿ ಇಲ್ಲವೋ, ಯಾವುದು ಸುಳ್ಳೊ ಆ ದಾರಿಯಲ್ಲಿ ನಡೆಯುವ ರಿಸ್ಕ್ ಮೂರ್ಖತನ ಎನ್ನಿಸಿಕೊಳ್ಳುತ್ತದೆ. ~ ಚೇತನಾ ತೀರ್ಥಹಳ್ಳಿ ನಿಯತಿಯ ಆಟಕ್ಕೆ ನಿದರ್ಶನವಾಗಿ ಹಲವಾರು ಚಿತ್ರಣಗಳು ನಮ್ಮೆದುರಿಗಿವೆ. ಪಟ್ಟಾಭಿಷೇಕಕ್ಕೆ ಸಿದ್ಧನಾಗಿ ಮಂಗಳ ಸ್ನಾನದಲ್ಲಿದ್ದ ರಾಮ, ನಾರುಮಡಿಯುಟ್ಟಿದ್ದು; ಪಣ ಗೆದ್ದ ಅರ್ಜುನನಿಗೆ ಮಾಲೆ ಹಾಕಿದ ದ್ರೌಪದಿ ಉಳಿದ ನಾಲ್ವರನ್ನೂ […]