ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #29

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನೀವು ಇನ್ನೊಬ್ಬರ ಬಗ್ಗೆ ಆಡಿರಬಹುದಾದ ಒಳ್ಳೆಯ ಅಥವಾ ಕೆಟ್ಟ ಮಾತು, ತಿರುಗಿ ವಾಪಸ್ ಬಂದು ನಿಮ್ಮ ಅಂತಃಕರಣವನ್ನೇ ಮುಟ್ಟುವುದು. ನಿಮ್ಮ ಬಗ್ಗೆ ಕೆಟ್ಟ ವಿಚಾರಗಳನ್ನು ಪೋಷಿಸುತ್ತಿರುವ ವ್ಯಕ್ತಿಯೊಬ್ಬನ ಬಗ್ಗೆ, ನೀವೂ ಕೆಟ್ಟ ಭಾವನೆಗಳನ್ನೇ ಇಟ್ಟುಕೊಳ್ಳವುದು ಪರಿಸ್ಥಿತಿಯನ್ನು ಇನ್ನೂ ಅಪಾಯ ಅಂಚಿಗೆ ಎಳೆದುಕೊಂಡು ಹೋದಂತೆ. ಕೆಡುಕಿನ ವಿಷ ವರ್ತುಲದಲ್ಲಿ ಸಿಕ್ಕು ನೀವು, ಇನ್ನಿಲ್ಲದಂತೆ ಒದ್ದಾಡುವಿರಿ. ನನ್ನದೊಂದು ಸಲಹೆ, ನಲವತ್ತು ಹಗಲು, ನಲವತ್ತು ರಾತ್ರಿ ಆ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #27

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಭಗವಂತನ ಸೃಷ್ಟಿಯಲ್ಲಿ ಮನುಷ್ಯನ ಸ್ಥಾನ ಅನನ್ಯ. “ನನ್ನ ಚೇತನವನ್ನೇ ಮನುಷ್ಯನಿಗಾಗಿ ಧಾರೆ ಎರೆದಿದ್ದೇನೆ” ಎನ್ನುತ್ತಾನೆ ಭಗವಂತ. ಭೂಮಿಯ ಮೇಲೆ ಭಗವಂತನ ರಾಯಭಾರಿಗಳನ್ನಾಗಿ ನಮ್ಮನ್ನು (ಯಾವ ವಿನಾಯತಿಯೂ ಇಲ್ಲದೆ) ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಯಾವತ್ತಾದರೂ ನಾವು ಭಗವಂತನ ಪ್ರತಿನಿಧಿಗಳ ಹಾಗೆ ವರ್ತಿಸಿದ್ದೀವಾ? ನೆನಪಿರಲಿ ನಮ್ಮೊಳಗಿನ ದಿವ್ಯ ಚೇತನವನ್ನು ಕಂಡುಕೊಳ್ಳುವುದು ಮತ್ತು ಅದನ್ನು ಜೀವಿಸುವುದು ಮಾತ್ರ ಭಗವಂತನಿಗೆ ನಾವು ಸಲ್ಲಿಸಬಹುದಾದ ನಿಜವಾದ ಕೃತಜ್ಞತೆ. 26ನೇ ನಿಯಮ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #26

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಸತ್ಯದ ಹಾದಿಯ ಮೇಲೆ ನಮ್ಮನ್ನು ಕೈ ಹಿಡಿದು ಮುನ್ನಡೆಸುವುದು ಹೃದಯವೇ ಹೊರತು ಬುದ್ಧಿಯಲ್ಲ. ಈ ಪ್ರಯಾಣದಲ್ಲಿ ಹೃದಯ ನಿಮ್ಮ ಪ್ರಧಾನ ಮಾರ್ಗದರ್ಶಿಯಾಗಿರಲಿ. ‘ಅಹಂ’ ತಕರಾರು ಮಾಡಿದರೆ ಮುಟ್ಟಿ ಮಾತನಾಡಿಸಿ, ಒಪ್ಪಿಸಿ ಸಾಧ್ಯವಾಗದಿದ್ದರೆ ಸವಾಲು ಹಾಕಿ ಭೀಕರ ಯುದ್ಧವಾದರೂ ಚಿಂತೆಯಲ್ಲ ಹೃದಯ, ನಿಮ್ಮ ಸುಳ್ಳು ಅಹಂ ಮೇಲೆ ವಿಜಯ ಸಾಧಿಸಲಿ. ನಿಮ್ಮೊಳಗಿನ ‘ಅಹಂ’ ನ ಎಳೆಗಳನ್ನು ಸ್ಪಷ್ಟವಾಗಿ ಗುರುತಿಸಬಲ್ಲಿರಾದರೆ, ಸತ್ಯದ ಹಾದಿಯಲ್ಲಿನ ದೊಡ್ಡ ಆತಂಕವೊಂದನ್ನು […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #25

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಿಯತಿ ಎಂದರೆ ಬದುಕು, ಪೂರ್ವ ನಿರ್ಧಾರಿತ ಎಂದಲ್ಲ. ವಿಧಿ ಎಂದು ಕೈ ಚೆಲ್ಲಿ ಬದುಕಿನ ಸಂಗೀತಕ್ಕೆ ಯಾವ ಹೊಸ ರಾಗಗಳನ್ನೂ ಸೇರಿಸದೆ ಸುಮ್ಮನಿರುವುದು ಅಪ್ಪಟ ಮೂರ್ಖತನ. ನಲವತ್ತು ಹಂತಗಳಲ್ಲಿ ಸಂಯೋಜನೆಗೊಂಡಿರುವ ಬದುಕಿನ ಸಂಗೀತ, ಬ್ರಹ್ಮಾಂಡದ ಪ್ರತಿಯೊಂದರಲ್ಲೂ ತನ್ನ ಗುಟ್ಟು ಬಚ್ಚಿಟ್ಟುಕೊಂಡಿದೆ. ನಿನ್ನ ನಿಯತಿ ನಿರ್ಧಾರವಾಗೋದು ಯಾವ ಹಂತದಲ್ಲಿ ನಿಂತು ನೀನು ರಾಗ ನುಡಿಸುತ್ತಿರುವೆ ಎನ್ನುವುದರ ಮೇಲೆ. ವಾದ್ಯ ಬದಲಾಯಿಸುವುದು ಸಾಧ್ಯವಾಗದೇ ಹೋಗಬಹುದು ಆದರೆ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #24

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಶರಣಾಗತಿ ಎಂದರೆ ಎದುರು ಮಂಡಿಯೂರುವುದಲ್ಲ, ಬೇರೆಲ್ಲ ವಿಷಯಗಳಲ್ಲಿ ಅನಾಸಕ್ತರಾಗುವುದಲ್ಲ. ವಿಧಿ ಎಂದು ಹತಾಶರಾಗುವುದಲ್ಲ, ಎದುರಾಳಿಯೆದುರು ಶಸ್ತ್ರತ್ಯಾಗ ಮಾಡುವುದಲ್ಲ, ಬದಲಾಗಿ ಈ ಎಲ್ಲದಕ್ಕೆ ತದ್ವಿರುದ್ಧವಾದುದು ಅಪಾರ ಧೈರ್ಯದ ವಿಷಯ. ಶರಣಾಗತಿಯೊಳಗೆ ಹುಟ್ಟುವ ಶಕ್ತಿಯೇ ನಿಜದ ಶಕ್ತಿ. ಬದುಕಿನ ದಿವ್ಯ ಸ್ವಾರಸ್ಯಕ್ಕೆ ಶರಣಾಗುವವರು, ಇಡೀ ಜಗತ್ತು ಒಂದರ ಮೇಲೊಂದು ಉದ್ವಿಗ್ನ ಪರಿಸ್ಥಿತಿಗಳನ್ನು ಎದುರಿಸುತ್ತಿರುವಾಗಲೂ ಅಚಲ ಪ್ರಶಾಂತತೆಯಲ್ಲಿ ಸ್ಥಿರವಾಗುವರು. 23ನೇ ನಿಯಮ ಇಲ್ಲಿ ನೋಡಿ: https://aralimara.com/2020/01/20/sufi-74/

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #23

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ನಿನ್ನ ಜೊತೆ ಬೇರೆಯವರು ನಡೆದುಕೊಳ್ಳುವ ರೀತಿಯನ್ನ ನೀನು ಬದಲಾಯಿಸ ಬಯಸುವೆಯಾದರೆ, ಮೊದಲು ನೀನು, ನಿನ್ನೊಂದಿಗೆ ವ್ಯವಹರಿಸುವ ರೀತಿಯನ್ನ ಪೂರ್ಣವಾಗಿ, ಪ್ರಾಮಾಣಿಕವಾಗಿ ಬದಲಾಯಿಸಿಕೋ. ಜನ, ನಿನ್ನನ್ನ ಪ್ರೀತಿಸುವಂತೆ ಮಾಡುವ ಇನ್ನೊಂದು ಪ್ರಭಾವಶಾಲಿ ವಿಧಾನ ನನಗಂತೂ ಗೊತ್ತಿಲ್ಲ. ಈ ಹಂತ ದಾಟಿದ ಮೇಲೆ ನಿನ್ನ ದಾರಿಯಲ್ಲಿ ಎಸೆಯಲಾಗುವ ಪ್ರತೀ ಮುಳ್ಳಿಗೂ ಕೃತಜ್ಞನಾಗಿರು. ನಿನ್ನ ಮೇಲೆ ಗುಲಾಬಿಯ ಸುರಿಮಳೆಯಾಗುವ ಮುನ್ಸೂಚನೆ ಇದು. 22ನೇ ನಿಯಮ ಇಲ್ಲಿ ನೋಡಿ: […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #22

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ವಿರೋಧಿಗಳು, ತನ್ನ ಮೇಲೆ ಅನ್ಯಾಯವಾಗಿ ಎಲ್ಲ ದಿಕ್ಕುಗಳಿಂದ ಆರೋಪ, ಆಕ್ರಮಣ, ಖಂಡನೆ ಮಾಡಿದಾಗಲೂ, ನಿಜದ ಸೂಫೀ ಎಲ್ಲವನ್ನೂ ಸಮಾಧಾನದಿಂದ ಸಹಿಸುತ್ತಾನೆ. ಸೂಫೀ, ನಿಂದನೆಗಳನ್ನು ಎಂದೂ ಪಾಲುಮಾಡಿ ಹಂಚುವುದಿಲ್ಲ. ‘ಸ್ವ’ ಎನ್ನುವುದೇ ಇಲ್ಲದಿರುವಾಗ ವಿರೋಧಿಗಳು, ಪ್ರತಿಸ್ಪರ್ಧಿಗಳು ಇರುವುದು ಹೇಗೆ ಸಾಧ್ಯ ? ಇರುವವ ‘ಒಬ್ಬನೇ’ ಆಗಿರುವಾಗ ನಿಂದಿಸಲು ಆ ‘ಇನ್ನೊಬ್ಬ’ ಎಲ್ಲಿಂದ ಬರುತ್ತಾನೆ? 20ನೇ ನಿಯಮ ಇಲ್ಲಿ ನೋಡಿ: https://aralimara.com/2020/01/16/sufi-72/

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #21

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಈ ಜಗತ್ತಿನಲ್ಲಿ ಒಬ್ಬರು, ಇನ್ನೊಬ್ಬರ ಹಾಗಿಲ್ಲ. ಒಂದು ಹೃದಯದ ಹಾಗೆ ಇನ್ನೊಂದು ಹೃದಯ ಮಿಡಿಯುವುದಿಲ್ಲ. ಎಲ್ಲ ಭಗವಂತನ ಕಲ್ಪನೆ ಸಮಸ್ತವೂ ವಿಭಿನ್ನ, ಪ್ರತಿಯೊಂದೂ ಅನನ್ಯ. ಎಲ್ಲವನ್ನೂ ಒಂದೇ ಎರಕಕ್ಕೆ ಹಾಕಿ ಸೃಷ್ಟಿಮಾಡುವ ಹುಕಿ ಭಗವಂತನದ್ದಾಗಿದ್ದರೆ ಆತ ಹಾಗೆ ಮಾಡಬಹುದಾಗಿತ್ತು ಮಾಡುತ್ತಿದ್ದ ಕೂಡ. ಆದರೆ ಪರಿಸ್ಥಿತಿ ಹಾಗಿಲ್ಲವಲ್ಲ. ನಮ್ಮ ನಡುವಿನ ವ್ಯತ್ಯಾಸವನ್ನು ಅವಮಾನಿಸುವುದು ನಮ್ಮ ಅಭಿಪ್ರಾಯಗಳನ್ನು, ಆಶಯಗಳನ್ನು ಇನ್ನೊಬ್ಬರ ಮೇಲೆ ಹೇರುವುದು, ಭಗವಂತನ ಪವಿತ್ರ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #20

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಈ ಜಗತ್ತಿನಲ್ಲಿ ನಮ್ಮ ವಿಕಾಸಕ್ಕೆ ಕಾರಣವಾಗಿರುವುದು ನಮ್ಮ ನಡುವೆ ಇರುವ ಸಮಾನತೆಗಳಲ್ಲ, ಸಮಾನ ಹೋಲಿಕೆಗಳಲ್ಲ, ಬದಲಾಗಿ ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತಿರುವುದು ನಮ್ಮ ನಡುವಿನ ವೈರುಧ್ಯಗಳು. ಬ್ರಹ್ಮಾಂಡದ ಎಲ್ಲ ವೈರುಧ್ಯಗಳು ಪ್ರತಿಯೊಬ್ಬರಲ್ಲೂ ಜಾಗ ಮಾಡಿಕೊಂಡಿವೆ. ಪ್ರತೀ ಆಸ್ತಿಕನೂ ತನ್ನೊಳಗಿರುವ ನಾಸ್ತಿಕನನ್ನು ಭೇಟಿ ಮಾಡಬೇಕು ಮತ್ತು, ಪ್ರತೀ ನಾಸ್ತಿಕನೂ ತನ್ನೂಳಗಿನ ಮೂಕ ಆಸ್ತಿಕನನ್ನು ಮುಟ್ಟಿ ಮಾತನಾಡಿಸಬೇಕು. ಮನುಷ್ಯ ತನ್ನ ಪರಿಪೂರ್ಣ ಸ್ಥಿತಿ ಮುಟ್ಟುವ ತನಕ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #19

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಭೂತ ಕಾಲದ ವಿಷಯ ವ್ಯಾಖ್ಯಾನಕ್ಕೆ ಮಾತ್ರ ಯೋಗ್ಯ , ಭವಿಷ್ಯದ ನಿರೀಕ್ಷೆಗಳು ಭ್ರಮೆಯ ಭಾಗ. ಭೂತದಿಂದ ಭವಿಷ್ಯಕ್ಕೆ ಕಾಲದ ಮೂಲಕ ಸಾಗುವ ಜಗತ್ತಿನ ಪಯಣ ಸರಳ ರೇಖೆಯಲ್ಲಲ್ಲ ಬದಲಾಗಿ ಕಾಲದ ಚಲನೆ ನಮ್ಮ ಮೂಲಕ, ನಮ್ಮೊಳಗೆ ಕೊನೆಯಿಲ್ಲದ ಸುರುಳಿಯಾಕಾರದ ದಿವ್ಯ ಪಥದಲ್ಲಿ. ಶಾಶ್ವತ ಎಂದರೆ ಅನಂತ ಕಾಲವಲ್ಲ, ಬದಲಾಗಿ ಶಾಶ್ವತ ಕಾಲದ ಪರಿವೆಯೇ ಇಲ್ಲದ್ದು. ಭೂತ, ಭವಿಷ್ಯಗಳನ್ನು ಬುದ್ಧಿಯ ಪರೀಧಿಯಿಂದ ಹೊರಗಿಟ್ಟು ವರ್ತಮಾನದ […]