ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #16

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಭೂಮಿಯ ಮೇಲಿರುವ ನಕಲೀ ಗುರುಗಳ ಮತ್ತು ಕಪಟಿ ಶಿಕ್ಷಕರ ಸಂಖ್ಯೆ ಬ್ರಹ್ಮಾಂಡದಲ್ಲಿರುವ ಒಟ್ಟು ನಕ್ಷತ್ರಗಳ ಸಂಖ್ಯೆಗಿಂತ ಹೆಚ್ಚು. ಅಧಿಕಾರದ ಲಾಲಸೆ, ಸ್ವಂತ ಹಿತಾಸಕ್ತಿಗಳೇ ಉಸಿರಾಗಿರುವ ಇಂಥ ಮೋಸಗಾರರನ್ನ ನಿಜದ ಮಾರ್ಗದರ್ಶಕರೆಂದು ಗೊಂದಲ ಮಾಡಿಕೊಳ್ಳಬೇಡಿ. ನಿಜದ ಅಧ್ಯಾತ್ಮ ಸಾಧಕ ನಿಮ್ಮ ಗಮನವನ್ನ ತನ್ನೆಡೆಗೆ ಬಯಸುವುದಿಲ್ಲ, ಸಂಪೂರ್ಣ ಶರಣಾಗತಿಯನ್ನ ನಿಮ್ಮಿಂದ ನಿರೀಕ್ಷಿಸುವುದಿಲ್ಲ, ನಿಮ್ಮ ಮೆಚ್ಚುಗೆ ಮತ್ತು ಹೊಗಳಿಕೆಯನ್ನ ಸಹಿಸುವುದಿಲ್ಲ. ನಿಜದ ಗುರು, ಗಾಜಿನಂತೆ ಪಾರದರ್ಶಕ, ಭಗವಂತನ […]

ಶಮ್ಸ್ ಹೇಳಿದ ಪ್ರೇಮದ ನಲವತ್ತು ನಿಯಮಗಳು : ನಿಯಮ #6

ಮೂಲ : ಶಮ್ಸ್ ಎ ತಬ್ರೀಝ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಬದುಕಿನಲ್ಲಿ ಏನೇ ಘಟಿಸಿದರೂ, ಎಂಥ ಸಂಕಟದ ಸಮಯಗಳು ಎದುರಾದರೂ, ದಯವಿಟ್ಟು ಹತಾಶೆಯ ಮನೆ ಇರುವ ವಠಾರಕ್ಕೆ ಕಾಲಿಡಬೇಡ. ಎಲ್ಲ ಬಾಗಿಲುಗಳು ಸಂಪೂರ್ಣವಾಗಿ ಮುಚ್ಚಿದ್ದರೂ, ಭಗವಂತ ಕೇವಲ ನಿನಗಾಗಿ ಎಂದೇ ಹೊಸ ದಾರಿಯೊಂದನ್ನು ಹುಟ್ಟು ಹಾಕುತ್ತಾನೆ. ಅವನ ಅಪಾರ ಕರುಣೆಯನ್ನು ಸ್ಮರಿಸು ! ಎಲ್ಲ ಮನಸ್ಸಿನಂತೆ ನಡೆಯುತ್ತಿರುವಾಗ ಕೃತಜ್ಞತೆಗಳನ್ನು ಒಪ್ಪಿಸುವುದು ಸುಲಭ ಸಾಧ್ಯ. ಆದರೆ ತನಗೆ ಕೊಡಮಾಡಿರುವುದರ ಬಗ್ಗೆ ಮಾತ್ರ ಅಲ್ಲ ನಿರಾಕರಿಸಿದ್ದರ ಬಗ್ಗೆ […]

ತಾವೋ ತಿಳಿವು #21 ~ ನಿಯಮವಲ್ಲದ ನಿಯಮ…

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ‘ತಾವೋ’ ದಲ್ಲಿ ಒಂದಾಗುವುದೇ ಒಂದು ಗಳಿಸಬಹುದಾದ ಅರ್ಹತೆ. ಹೌದು ಹಿಡಿತಕ್ಕೆ ಸಿಗದು ವ್ಯಾಖ್ಯಾನ ಅಸಾಧ್ಯ. ತಾವೋ ಹಿಡಿತಕ್ಕೆ, ವ್ಯಾಖ್ಯಾನಕ್ಕೆ ಸಿಗದೇ ಹೋದರೆ ಹೇಗೆ ಒಂದಾಗಬಹುದು? ಸಿದ್ಧಾಂತಗಳಿಗೆ ಜೊತು ಬೀಳದೆ…!? ತಾವೋ ನಿಗೂಢ, ಅಪರಿಮಿತ ಕತ್ತಲು ಅಂತೆಯೇ ಶುದ್ಧ ಚೈತನ್ಯ ಇದೊಂದು ನಿಯಮವಲ್ಲದ ನಿಯಮ. ಹುಟ್ಟು, ಕಾಲ ದೇಶಗಳಿಗೂ ಮೊದಲು, ಇರುವುದು ಇರದುದರಾಚೆ, ಮನೆ. ಖಾತ್ರಿ ಮಾಡಿಕೊಳ್ಳಬೇಕಾದಾಗಲೆಲ್ಲ ನನ್ನೊಳಗೆ ಇಳಿಯುತ್ತೇನೆ ಇಳಿದು ಇಣುಕುತ್ತೇನೆ.