ಬಾಕ್ಸಿಂಗ್ ರಿಂಗ್’ನಿಂದ ಸೂಫಿ ಪ್ರೇಮದೆಡೆಗೆ : ಅಲಿ ಪಯಣದ ಹಾದಿ

ಮಹಮ್ಮದ್ ಅಲಿ ಬದುಕಿನ ಅತಿ ಶ್ರೇಷ್ಠ ಸಾಧನೆ ಅವರ ಯುದ್ಧ ನಿರಾಕರಣೆ. ಯುದ್ಧಕ್ಕೆ ಬೆನ್ನು ತಿರುಗಿಸೋದು ಎಲ್ಲ ಸಲವೂ ಹೇಡಿಗಳ ಲಕ್ಷಣವೇ ಆಗಿರೋದಿಲ್ಲ. ಬಹಳ ಸಲ ಅದಕ್ಕೆ ಹೆಚ್ಚಿನ ಎದೆಗಾರಿಕೆಯೇ ಬೇಕಾಗುತ್ತೆ. ಬಲವಿದ್ದೂ ಯುದ್ಧ ನಿರಾಕರಿಸುವುದು ಧೀರರಿಂದಷ್ಟೇ ಸಾಧ್ಯವಾಗುವ ಕೆಲಸ. ಮಹಮ್ಮದ್ ಅಲಿ ಅಂತಹ ಧೀರರಲ್ಲಿ ಒಬ್ಬರಾಗಿದ್ದರು ~ ಚೇತನಾ “ನಾನು ಯುದ್ಧಕ್ಕೆ ಹೋಗೋದಿಲ್ಲ. ನಾನು ಬಾವುಟಗಳನ್ನ ಸುಡೋದಿಲ್ಲ. ಕೆನಡಾಕ್ಕೆ ಓಡೋ ಧಾವಂತ ನನಗಿಲ್ಲ. ನಾನಿಲ್ಲೇ ಇರುವವನು. ನನ್ನನ್ನ ನೀವು ಸೆರೆಮನೆಗೆ ಕಳಿಸ್ತೀರೇನು!? ಒಳ್ಳೆಯದು!! ಈಗಲೇ ಆ […]

ನೆರೆಯೊಂದಿಗೆ ಹರಿದ ಶರ್ಮಿಷ್ಟೆಯ ಮಾದರಿ

ಬಂಡಾಯ ಏಳುವುದೆಂದರೆ ಸತ್ಯವನ್ನು ನಿರಾಕರಿಸುವುದಲ್ಲ. ಪ್ರವಾಹದ ವಿರುದ್ಧ ಈಜಬೇಕಿರುವುದು, ವಿರುದ್ಧ ದಿಕ್ಕಿನಲ್ಲಿ ಗುರಿ ಇದೆಯೆಂದಾಗ ಮಾತ್ರವೇ ಹೊರತು ಕೈಗಳಲ್ಲಿ ಕಸುವಿದೆ ಎಂದಲ್ಲ. ಅನಗತ್ಯವಾಗಿ ವಿರುದ್ಧ ದಿಕ್ಕಿನ ದಾರಿಯಲ್ಲಿ – ಯಾವುದು ನಮಗಾಗಿ ಇಲ್ಲವೋ, ಯಾವುದು ಸುಳ್ಳೊ ಆ ದಾರಿಯಲ್ಲಿ ನಡೆಯುವ ರಿಸ್ಕ್ ಮೂರ್ಖತನ ಎನ್ನಿಸಿಕೊಳ್ಳುತ್ತದೆ. ~ ಚೇತನಾ ತೀರ್ಥಹಳ್ಳಿ ನಿಯತಿಯ ಆಟಕ್ಕೆ ನಿದರ್ಶನವಾಗಿ ಹಲವಾರು ಚಿತ್ರಣಗಳು ನಮ್ಮೆದುರಿಗಿವೆ. ಪಟ್ಟಾಭಿಷೇಕಕ್ಕೆ ಸಿದ್ಧನಾಗಿ ಮಂಗಳ ಸ್ನಾನದಲ್ಲಿದ್ದ ರಾಮ, ನಾರುಮಡಿಯುಟ್ಟಿದ್ದು; ಪಣ ಗೆದ್ದ ಅರ್ಜುನನಿಗೆ ಮಾಲೆ ಹಾಕಿದ ದ್ರೌಪದಿ ಉಳಿದ ನಾಲ್ವರನ್ನೂ […]