ಸ್ಟೀವ್ ಜಾಬ್ಸ್ ಹೇಳಿದ್ದು : ಅರಳಿಮರ POSTER

“ಎಲ್ಲರನ್ನೂ ಖುಷಿ ಪಡಿಸಬೇಕು ಅನ್ನುವ ಯೋಚನೆ ನಿಮ್ಮದಾಗಿದ್ದರೆ, ನಾಯಕರಾಗುವ ಕನಸು ಬಿಟ್ಟುಬಿಡಿ; ಐಸ್ ಕ್ರೀಮ್ ವ್ಯಾಪಾರ ಶುರುಹಚ್ಚಿಕೊಳ್ಳಿ!!” ~ ಸ್ಟೀವ್ ಜಾಬ್ಸ್ ಯಾವಾಗಲೂ ಎಲ್ಲರನ್ನೂ ಖುಷಿ ಪಡಿಸಲು ಸಾಧ್ಯವಿಲ್ಲ. ನಾವೂ ಸೇರಿದಂತೆ ಪ್ರತಿಯೊಬ್ಬರೂ ಮತ್ತೊಬ್ಬರ ಮೇಲೆ ನಮ್ಮದೇ ನಿರೀಕ್ಷೆ ಇಟ್ಟುಕೊಂಡಿರುತ್ತೇವೆ. ಯಾವ ವ್ಯಕ್ತಿಯಿಂದಲೂ ತನ್ನ ಮೇಲಿನ ಎಲ್ಲ ನಿರೀಕ್ಷೆಗಳನ್ನು ಈಡೇರಿಸುವುದು ಸಾಧ್ಯವಿಲ್ಲ. “ಐಸ್ ಕ್ರೀಂ ಅಂಗಡಿಯಲ್ಲಿ ವಿವಿಧ ಗ್ರಾಹಕರಿಗಾಗಿ ವಿವಿಧ ಫ್ಲೇವರಿನ ಐಸ್ ಕ್ರೀಂ ಇಟ್ಟಿರುತ್ತಾರೆ. ಯಾರಿಗೆ ಯಾವುದು ಬೇಕೋ ಅದನ್ನು ಕೊಡುತ್ತಾರೆ. ಹಾಗೆ ನಾವು ಕೂಡಾ […]

ಬಯಕೆ ಬಳ್ಳಿಗಳನ್ನು ಕತ್ತರಿಸುವುದೇ ಶಾಶ್ವತ ಸಂತೋಷ ಹೊಂದುವ ಮಾರ್ಗ

ಒಂದು ಬಯಕೆ ಎದ್ದ ಘಳಿಗೆಯಲ್ಲಿ ನಾವು ಅದನ್ನು ತೃಪ್ತಿಪಡಿಸಲು ಪ್ರಯತ್ನ ಮಾಡುತ್ತೇವೆ. ಬಯಕೆಯನ್ನು ಪೂರೈಸಿಕೊಳ್ಳುವುದು ತೃಪ್ತಿ ಮತ್ತು ಆನಂದವನ್ನು ನೀಡುತ್ತದೆ ಎಂದು ನಾವು ಭಾವಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ನಾವು  ಅನಂತ ಬಯಕೆಗಳನ್ನು ಹುಟ್ಟುಹಾಕುತ್ತ, ಅವುಗಳನ್ನು ತೃಪ್ತಿಪಡಿಸಲು ಹೆಣಗಾಡುತ್ತ ಇರುತ್ತೇವೆ  ~ ಸಾ.ಹಿರಣ್ಮಯಿ ಬಹುತೇಕರು ಇದೊಂದು ತಪ್ಪು ಮಾಡುತ್ತಾರೆ. ಕೆಲಸ ಮಾಡುವ ಮೊದಲೇ ಅದರ ಫಲದ ನಿರೀಕ್ಷೆ ಶುರುವಿಡುತ್ತಾರೆ. ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ, ಆದರೆ ಫಲಿತಾಂಶವು ನಮ್ಮ ಕೈಯಲ್ಲಿಲ್ಲ ಎಂಬುದನ್ನು ನೆನಪಿಟ್ಟುಕೊಂಡರೆ, ವೈಫಲ್ಯದ ನೋವು ಬಾಧಿಸುವುದಿಲ್ಲ. ಏಕೆಂದರೆ […]

ಸಂಬಂಧಗಳಲ್ಲಿ ನಿರೀಕ್ಷೆಯನ್ನು ಹೇರುವುದು ಮೂರ್ಖತನವಷ್ಟೆ

ಗೆಳೆತನವೊಂದು ಅಕಾಲ ಮರಣವನ್ನಪ್ಪೋದಕ್ಕೆ ಕಾರಣವೇನು? ಓಶೋ ಹೇಳುತ್ತಾರೆ, `ಹತಾಶೆ ನಿರೀಕ್ಷೆಯ ನೆರಳೇ ಆಗಿದೆ’ ಎಂದು. ಇಲ್ಲಿಯೂ ಸಂಭವಿಸಿದ್ದು ನಿರೀಕ್ಷೆಯ ಪ್ರತಿಫಲವೇ ಹೊರತು ಇನ್ನೇನಲ್ಲ. ಒಂದು ವಿಷಯದ ಮೇಲೆ ಸಮಾನ ಅಭಿಪ್ರಾಯಗಳನ್ನು ಹೊಂದಿದ್ದ ತಕ್ಷಣ ಎಲ್ಲ ಸಂಗತಿಗಳನ್ನೂ ಒಪ್ಪಿಬಿಡಬೇಕು ಎಂಬ ನಿರೀಕ್ಷೆ ಅವರಿಬ್ಬರ ನಡುವಿನ ಗೆಳೆತನವನ್ನು ಕೊನೆಗೊಳಿಸಿಬಿಡುತ್ತದೆ ~ ಸುನೈಫ್ ಯಾವುದೋ ಒಂದು ಮದುವೆ ಕಾರ್ಯಕ್ರಮದಲ್ಲಿ ಅಥವಾ ಇನ್ಯಾವುದೋ ವೈಚಾರಿಕ ಚರ್ಚೆ ನಡೆಯುವ ಕಾರ್ಯಕ್ರಮದಲ್ಲಿ ಅಪರಿಚಿತರೊಬ್ಬರಿಬ್ಬರ ಪರಿಚಯವಾಗುತ್ತದೆ. ಕುಶಲೋಪರಿ ಮುಗಿಯುವಾಗ ಗೆಳೆತನದ ಹೊಸ್ತಿಲಲ್ಲಿ ನಿಂತಿರುತ್ತಾರೆ. ಆ ಸಲುಗೆಯಲ್ಲಿ ಮುಂದಿನ ದಿನಗಳಲ್ಲಿ […]

ಫಲದ ನಿರೀಕ್ಷೆಯಿಂದಲೇ ಕೆಲಸ ಮಾಡುವಾಗ ಮನಸ್ಸನ್ನು ಸಂಭಾಳಿಸುವುದು ಹೇಗೆ?

ಭಗವದ್ಗೀತೆಯ ಶ್ರೀಕೃಷ್ಣ ಹೇಳಿದಂತೆ ಫಲಾಫಲಗಳ ಬಗ್ಗೆ ಚಿಂತಿಸದೆ ಕೇವಲ ಕರ್ಮವನ್ನು ಮಾಡಬೇಕು. ಆದರೆ ಫಲವನ್ನು ಅಪೇಕ್ಷಿಸಿಯೇ ಒಂದು ಕೆಲಸವನ್ನು ಹಿಡಿದಿರುವಾಗ, ಸಾಹಸಕ್ಕೆ ಕೈಹಾಕಿದಾಗ ಏನು ಮಾಡಬೇಕು? ~ ಆನಂದಪೂರ್ಣ ಕೆಲವೊಂದು ಪರೀಕ್ಷೆಗಳು ಪೂರ್ವ ನಿರ್ಧಾರಿತವಾಗಿರುತ್ತವೆ. ನಮಗೆ ಅದರ ಕುರಿತು ಮೊದಲೇ ಮಾಹಿತಿ ಇದ್ದು, ಅದರಲ್ಲಿ ಉತ್ತೀರ್ಣರಾಗುವ ಎಲ್ಲ ಸಿದ್ಧತೆ ಮಾಡಿಕೊಂಡಿರುತ್ತೇವೆ. ಮತ್ತೆ ಕೆಲವು ಪರೀಕ್ಷೆ ಅನಿರೀಕ್ಷಿತವಾಗಿ ಧುತ್ತೆಂದು ನಮ್ಮೆದುರು ಬಂದು ನಿಲ್ಲುತ್ತವೆ. ಯಾವ ತಯಾರಿಯೂ ಇಲ್ಲದೆ ನಾವು ಅದನ್ನು ಎದುರಿಸಬೇಕಾಗುತ್ತದೆ. ಎಷ್ಟೋ ಬಾರಿ ಪೂರ್ವ ನಿರ್ಧಾರಿತ ಪರೀಕ್ಷೆಗಳಲ್ಲಿ […]