ಸರಿ ತಪ್ಪುಗಳ ನಿರ್ಧಾರವಾಗೋದು ಹೇಗೆ? : ಝೆನ್ ಕಥೆ

ಒಂದು ಝೆನ್ ಕಪ್ಪೆ, ತನ್ನ ಶಿಷ್ಯ ಕಪ್ಪೆಗೆ ಪ್ರಕೃತಿಯಲ್ಲಿನ ಸಮತೋಲನದ ಬಗ್ಗೆ ಪಾಠ ಮಾಡುತ್ತಿತ್ತು. “ನೋಡು, ನೊಣ ಹೇಗೆ ಆ ಹುಳುವನ್ನು ಬಾಯಿಗೆ ಹಾಕಿಕೊಂಡಿತು, ಈಗ ನೋಡು (ನುಂಗುತ್ತಾ) ನಾನು ಹೇಗೆ ಆ ನೊಣವನ್ನು ತಿಂದು ಮುಗಿಸಿದೆ…  ಇದೆಲ್ಲಾ ಪ್ರಕೃತಿಯ ನಿಯಮ.” “ಕೊಂದು ಬದುಕುವುದು ಸಾಧು ಅಲ್ಲ ಅಲ್ಲವೆ?” ಕೇಳಿತು ಶಿಷ್ಯ ಕಪ್ಪೆ. “ಅದು ಹೇಗೆ ಅಂದ್ರೆ……” ಮಾತು ಮುಗಿಸುವುದರ ಮೊದಲೇ, ಒಂದು ಹಾವು ಝೆನ್ ಕಪ್ಪೆಯನ್ನು ನುಂಗಲು ಶುರು ಮಾಡಿತು. “ಹೇಗೆ, ಹೇಗೆ…?” ಕೂಗಿ ಕೇಳಿತು ಶಿಷ್ಯ […]

ಸಂತೋಷದಿಂದ ಇರಲು ಕಷ್ಟಪಡಬೇಕಿಲ್ಲ!

ಸಂತಸದಿಂದಿರಲು ಹೆಚ್ಚು ಕಷ್ಟ ಪಡಬೇಕಿಲ್ಲ. ಸಂತಸದಿಂದ ಇರುತ್ತೇನೆಂದು ನಿರ್ಧಾರ ಮಾಡಿಕೊಂಡರೆ ಸಾಕು! ಸಂತೋಷ ಒಂದು ಮನಸ್ಥಿತಿ. ಕೆಲವೊಮ್ಮೆ ಅದು ತಾನಾಗಿ ಒದಗಿಬರುತ್ತದೆ. ಬಹಳಷ್ಟು ಸಲ ಅದು ನಮ್ಮ ನಿರ್ಧಾರದಿಂದ ಹೊಮ್ಮುತ್ತದೆ. ನಾವು ಸಂತಸದಿಂದ ಇರುವಾಗ ನಮಗದು ಗೊತ್ತಾಗುವುದಿಲ್ಲ. ನಮ್ಮ ಈ ಸ್ಥಿತಿ ನಮ್ಮ ಆಯ್ಕೆಯಾಗಿದೆ, ನಮ್ಮ ನಿರ್ಧಾರವಾಗಿದೆ ಎಂಬುದನ್ನು ನಾವು ಗಮನಿಸಿರುವುದಿಲ್ಲ. ನಾವು ಸಂತೋಷಪಡಲು ಬಯಸದೇ ಹೋದರೆ ನಮ್ಮಿಂದ ಆ ಸ್ಥಿತಿಯನ್ನು ಹೊಂದಲು ಸಾಧ್ಯವಿದೆಯೆ? ಖಂಡಿತಾ ಇಲ್ಲ, ಅಲ್ಲವೆ?  ನಾವು ಬಹಳ ಬಾರಿ ಒಂದು ತಪ್ಪು ಮಾಡುತ್ತೇವೆ. […]

ಒಂದರಲ್ಲೇ ಶ್ರದ್ಧೆ ಇಟ್ಟು ಪ್ರಯತ್ನಿಸಿದರೆ ಸಾಧನೆ ನಿಶ್ಚಿತ

ಯಾರು ನಿಜವಾಗಿಯೂ ಯೋಗಿಗಳಾಗಬೇಕೆಂದು ಬಯಸುವರೋ ಅವರು ಎಲ್ಲವನ್ನೂ ಸ್ವಲ್ಪ ಸ್ವಲ್ಪ ರುಚಿ ನೋಡುವ ಅಭ್ಯಾಸವನ್ನು ಒಂದೇ ಸಲ ಬಿಟ್ಟಬಿಡಬೇಕು. ಒಂದು ಭಾವನೆಯನ್ನು ತೆಗೆದುಕೊಳ್ಳಿ. ಅದನ್ನು ನಿಮ್ಮ ಜೀವನದಲ್ಲಿ ಅಭ್ಯಾಸ ಮಾಡಿ, ಅದನ್ನೇ ಆಲೋಚನೆ ಮಾಡಿ. ಅದನ್ನೇ ಕನಸು ಕಾಣಿ. ಆ ಒಂದು ಭಾವನೆಗಾಗಿ ನಿಮ್ಮ ಬಾಳನ್ನೆಲ್ಲ ಸವೆಸಿ; ಮೆದುಳು, ಮಾಂಸಖಂಡಗಳು, ನರಗಳು ಮತ್ತು ನಿಮ್ಮ ದೇಹದ ಪ್ರತಿಯೊಂದು ಭಾಗವೂ ಕೂಡಾ ಆ ಭಾವದಿಂದ ತುಂಬಿ ತುಳುಕಾಡಲಿ. ಉಳಿದ ಆಲೋಚನೆಗಳನ್ನೆಲ್ಲ ಅವುಗಳ ಪಾಡಿಗೆ ಬಿಡಿ. ಜಯ ಪಡೆಯುವುದಕ್ಕೆ ಇದೊಂದೇ […]

ರಾಮತೀರ್ಥರ ವಿಚಾರಧಾರೆ : ನಿಮ್ಮ ಪಂಚೇಂದ್ರಿಯಗಳನ್ನು ಸರಿಯಾಗಿ ಬಳಸಿ

ಇನ್ನೊಬ್ಬರ ಅಭಿಪ್ರಾಯವನ್ನು ಅನುಮೋದಿಸುವಾಗ ಅದು ಮೊದಲು ನಮಗೆ ಸಂಪೂರ್ಣ ಸಮ್ಮತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಗುಂಪಿನಲ್ಲಿ ಸುಮ್ಮನೆ ಕೈಯೆತ್ತುವುದರಿಂದ ನಿಮಗೆ ನೀವೇ ದ್ರೋಹ ಮಾಡಿಕೊಂಡಂತಾಗುತ್ತದೆ. ಜನರು ಸಾಮಾನ್ಯವಾಗಿ ತಮ್ಮ ಸ್ವಂತ ಕಿವಿಗಳಿಂದ ಕೇಳುವುದಿಲ್ಲ. ಬದಲಿಗೆ ಬೇರೆಯವರ ಕಿವಿಗಳಿಂದ ಕೇಳುತ್ತಾರೆ. ಅವರು ತಮ್ಮ ಸ್ವಂತ ಕಣ್ಣುಗಳಿಂದ ನೋಡುವುದಿಲ್ಲ. ಬದಲಿಗೆ ಬೇರೆಯವರ ಕಣ್ಣುಗಳಿಂದ ನೋಡುತ್ತಾರೆ. ಅವರು ತಮ್ಮ ರಸನೇಂದ್ರಿಯಗಳಿಗೆ ಬದಲಾಗಿ ಇತರರ ರಸನೇಂದ್ರಿಯಗಳ ರುಚಿ ಅರುಚಿಗಳನ್ನು ತಮ್ಮದಾಗಿ ಭಾವಿಸುತ್ತಾರೆ. ಪ್ರಪಂಚದ ಜನರು ಇರುವುದೇ ಹೀಗೆ! ಅವರು ತಮಗೇನು ಬೇಕೋ ಅದನ್ನು ಮಾಡುವುದಿಲ್ಲ. […]