ಶಿವೋsಹಮ್ ಸರಣಿ ~ 6 : ಸತ್ ಅನ್ನು ಚಿತ್‍ನಿಂದ, ಚಿತ್ ಅನ್ನು ಆನಂದದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ…

ನೀವು ಪ್ರವಚನ ಕೇಳಿ ಮನೆಗೆ ಮರಳಿದ ಮೇಲೆ ನಿಮ್ಮ ತಾಯ್ತಂದೆಯರಿಗೆ, `ನೀವು ನಮ್ಮ ಅಪ್ಪ, ಅಮ್ಮ ಅಲ್ಲ’ ಎಂದು ಹೇಳಬೇಡಿ ಮತ್ತೆ! ಅಥವಾ ನಿಮ್ಮ ಮಕ್ಕಳಿಗೆ ‘ನಾವು ನಿಮ್ಮ ಅಪ್ಪ – ಅಮ್ಮ ಅಲ್ಲ’ ಅಂತಲೂ ಹೇಳಲು ಹೋಗಬೇಡಿ!! ಶಂಕರರು ಹೀಗೆ ಹೇಳಿದ್ದಾರೆ, ಗುರುದೇವ ಕೂಡ ಅದನ್ನು ಸಮರ್ಥಿಸಿದ್ದಾರೆಂದು ನೀವು ಹಾಗೆಲ್ಲ ಮಾಡಿಬಿಡಬೇಡಿ!! ಈ ಮಾತುಗಳನ್ನು ಬಲ್ಲಿದನಾದ ಜ್ಞಾನಿ ಮಾತ್ರವೇ ಹೇಳಬಲ್ಲ. ಮತ್ತು, ಇದು ಇದು ಕೇವಲ ಕೇಳಿ ಹೇಳುವಂಥ ಘೋಷಣೆಯಲ್ಲ, ಸ್ವತಃ ಅನುಭವಿಸಿ ಕಂಡುಕೊಳ್ಳುವಂಥದ್ದು  ~ […]

ಶಿವೋSಹಮ್ ಸರಣಿ ~ 5 : ಹಾಗಾದರೆ ನಿಜ ಯಾವುದು!?

ಕನ್ನಡಿಯಲ್ಲಿ ಅದೆಷ್ಟೋ ಬಿಂಬಗಳು ಮೂಡುತ್ತವೆ, ಅಳಿಯುತ್ತವೆ. ಆದರೆ ಕನ್ನಡಿ ಆ ಯಾವುದರಿಂದಲೂ ಪ್ರಭಾವಿತವಾಗುವುದಿಲ್ಲ. ಯಾವ ಬಿಂಬದ ಮೇಲೂ ಒಡೆತನ ಸಾಧಿಸಿ “ಇದು ನಾನು” ಎನ್ನುವುದಿಲ್ಲ.  ನಾನು ಕೂಡ ಆ ಕನ್ನಡಿಯಂತೆ ಯಾರಿಂದಲೂ  ಆಕರ್ಷಣೆ – ವಿಕರ್ಷಣೆಗಳಿಗೆ ಒಳಗಾಗುವುದಿಲ್ಲವೆಂದು ಅರಿತಿದ್ದೇನೆ. ಅದರಂತೆಯೇ ನಾನು ಸಾಕ್ಷಿ ಮಾತ್ರವಾಗಿ, ಕೇವಲ ದ್ರಷ್ಟಾ (ನೋಡುಗ) ಆಗಿ ಅಲಿಪ್ತನಾಗಿರುತ್ತೇನೆ : Whosoever JI  ನಾನೀಗ ನಿಮಗೆ ಹೇಳ್ತಿರೋದು ಶುದ್ಧ ಪ್ರಾಯೋಗಿಕ ಸಂಗತಿ. ಸಾಧಕನಿಗೆ, ಸಾಧನೆಗೆ ಅತ್ಯಗತ್ಯವಾಗಿರುವುದನ್ನೇ ನಾನು ಹೇಳ್ತಿದ್ದೀನಿ. ನಡು ನಡುವೆ ಅಲ್ಪ ಸ್ವಲ್ಪ […]

ಶಿವೋsಹಮ್ ಸರಣಿ ~ 4 : ಸಾಕ್ಷೀಭಾವದಿಂದ ನೋಡುವುದು…

ಒಂದೊಮ್ಮೆ ಹೀಗೆ ಮಾಡಲು ಸಾಧ್ಯವಾಗುವುದಾ ನೋಡಿ. ಸಿಟ್ಟು ಬಂದಾಗ ನೀವು ಸಿಟ್ಟು ಮಾಡಿಕೊಂಡೆ ಅನ್ನುವ ಬದಲು ಸಿಟ್ಟು ಉಂಟಾಯ್ತೆಂದು ಯೋಚಿಸಿ. ಇಷ್ಟಾದರೂ ಮಾಡಲು ಸಾಧ್ಯವಾದರೆ ನಿಮಗೆ ಸಾಕಷ್ಟು ದೊರೆತಂತಾಯ್ತು. ಇಷ್ಟು ಮಾತ್ರ ಮಾಡಲು ನಾನು ನಿಮಗೆ ಹೇಳ್ತಿದ್ದೀನಿ. – ಕೇವಲ ನೋಡಿ, ಸಾಕು             ~ Whosoever Ji ಸದ್ಗುರುವಿನ ಸನ್ನಿಧಿಯಲ್ಲಿ ಸಮ್ಯಕ್ ಪ್ರಯಾಸದಿಂದ, ಸಮ್ಯಕ್ ಅಭ್ಯಾಸ ನಡೆಸುವುದರಿಂದ ಇಂತಹ ವಿವೇಕ ಬುದ್ಧಿಯು ದೊರೆಯುವುದು. ಇಂತಹ ವಿವೇಕ ಬುದ್ಧಿಯನ್ನು ಹೊಂದಿದ ವ್ಯಕ್ತಿಯು […]

ಶಿವೋsಹಮ್ ಸರಣಿ ~ 2 : ಚಿಂತನ ಮನನ ಧ್ಯಾನ ವಿಧಿ

ವ್ಯಕ್ತ ಜಗತ್ತಿನಲ್ಲಿ ಪ್ರತಿ ವಸ್ತುವಿಗೂ ಎರಡು ಮಗ್ಗಲುಗಳಿರುತ್ತವೆ. ಆಂತರ್ಯ ಮತ್ತು ಬಾಹ್ಯ, ಸೂಕ್ಷ್ಮ ಮತ್ತು ಸ್ಥೂಲ. ಮನೋಬುದ್ಧಿ ಚಿತ್ತಾಹಂಕಾರಗಳು ಶರೀರದೊಳಗಿನ ಸೂಕ್ಷ್ಮ ಸಂಗತಿಗಳು. ಎಲ್ಲ ಬಗೆಯ ಮಾಹಿತಿ, ಜ್ಞಾನ ಹಾಗೂ ಅನುಭವಗಳ ಮೇಲೆ ಇವುಗಳ ಆಧಿಪತ್ಯ. ಮತ್ತು ಕಿವಿ, ನಾಲಗೆ, ಮೂಗು ಮತ್ತು ಕಣ್ಣುಗಳು – ಇವು ಶರೀರದ ಬಾಹ್ಯ ಅಥವಾ ಸ್ಥೂಲ ಸಂಗತಿಗಳು. ಇವುಗಳಿಂದ ಧ್ವನಿ, ಸ್ವಾದ, ಗಂಧ ಹಾಗೂ ದೃಶ್ಯಗಳನ್ನು ಗ್ರಹಿಸಬಹುದು. ಶಂಕರರು ಹೇಳುತ್ತಾರೆ, “ನಾನು ಈ ಎರಡೂ ಮಗ್ಗಲುಗಳಿಗೂ ಅತೀತನಾದವನು. ಮನೋಬುದ್ಧಿ ಚಿತ್ತಾಹಂಕಾರಗಳಿಗೆ […]

ಚಿಂತನ ಮನನದ ಧ್ಯಾನ ವಿಧಿ: ಶಿವೋsಹಮ್ ಸರಣಿ ~1

ಇಲ್ಲೊಂದು ತಮಾಷೆಯಿದೆ… ಈ ಹಾಡನ್ನು ನೀವು ಎಷ್ಟು ಬೇಕಾದರೂ ಕೇಳಿ. ಉರು ಹೊಡೆಯಿರಿ. ಕಂಟಸ್ಥಗೊಳಿಸಿಕೊಳ್ಳಿ. ಇದನ್ನು ನೀವು ಹಾಡುತ್ತಲೇ ಇರಿ. ಅಷ್ಟಾದರೂ ನಿಮಗೆ ನೀವು ಯಾರೆಂದು ಅರಿವಾಗುವುದಿಲ್ಲ! ಮತ್ತೊಬ್ಬರ ಹೇಳಿಕೆಯಿಂದ ನಮಗಿದು ಗೊತ್ತಾಗಿಬಿಡುವ ಹಾಗೆ ಇದ್ದಿದ್ದರೆ, ನಮಗೆಲ್ಲರಿಗೂ ನಾವಾರೆಂದು ಯಾವತ್ತೋ ತಿಳಿದುಹೋಗಿರುತ್ತಿತ್ತು. ಆದರೆ ಈ ಅನುಭಾವ ಗೀತೆಯನ್ನು ಕೇಳಿ – ಅರ್ಥೈಸಿಕೊಂಡ ನಂತರವೂ ನಮಗೆ ನಾವು ಯಾರೆಂದು ಅರಿವಾಗುವುದಿಲ್ಲ. ~ Whosoever Ji ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ ನ ಚ ಶ್ರೋತ್ರ ಜಿಹ್ವಾ ನ ಚ ಘ್ರಾಣನೇತ್ರಮ್ […]