ದಾರಿ ಸ್ಪಷ್ಟವಿದ್ದಾಗ, ವ್ಯಕ್ತಿತ್ವಗಳು ಒಂದಾದಾಗ ಒಳ ಜಗತ್ತು ಮತ್ತು ಹೊರ ಜಗತ್ತುಗಳ ನಡುವೆ ಯಾವುದೇ ಅಂತರವಿಲ್ಲ. ಆಗ ಯಾವದೂ ದೂರವಲ್ಲ, ಯಾವ ಬಾಗಿಲೂ ನಮಗಾಗಿ ತೆರೆದುಕೊಳ್ಳಲು ನಿರಾಕರಿಸುವುದಿಲ್ಲ ~ ಡೆಂಗ್ ಮಿಂಗ್ ದಾವೋ | ಚಿದಂಬರ ನರೇಂದ್ರ ಬಾಗಿರುವುದ ನೇರ ಮಾಡು ನೇರವಾಗಿರುವುದ ಹರಿಯಗೊಡು ನೀರು, ಬೆಂಕಿ, ಬೆಳಕು ಕಲೆಹಾಕಿ ಜಗವನ್ನು ಬಿಂದುವಿನಲಿ ನಿಲಿಸು ಅಧ್ಯಾತ್ಮದ ದಾರಿಯ ಬಗ್ಗೆ ಭಕ್ತಿ, ನಿಷ್ಠೆ, ಶೃದ್ಧೆ ಮತ್ತು ಬದ್ಧತೆ, ನಿಜವಾಗಿಯೂ ನಮ್ಮೊಳಗೆ ಮನೆ ಮಾಡಿದ್ದೇ ಆದಲ್ಲಿ ನಮ್ಮ ಧೃಢತೆ ಸಹಜವಾಗಿ ಚಲನಶೀಲವಾಗುವುದು. […]
ನಿಷ್ಠೆಗೆ ರೂಪಕವಾದ ಒಡಿಸಿಯಸ್ಸನ ನಾಯಿ ಆರ್ಗೋಸ್ : ಗ್ರೀಕ್ ಪುರಾಣ ಕಥೆಗಳು ~ 20
ಒಡೆಯನಿಗಾಗಿ ಇಪ್ಪತ್ತು ವರ್ಷಗಳ ಕಾಲ ಕಾದಿದ್ದ ಆರ್ಗೋಸ್, ಅವನನ್ನು ನೋಡಿ, ಬಾಲವಾಡಿಸಿ ಕೊನೆಯುಸಿರೆಳೆಯಿತು. “ನಿಷ್ಠೆಯೆಂದರೆ ನಾಯಿಯದು” ಎಂದು ಉದ್ಗರಿಸಿದ ಒಡಿಸ್ಸಿಯಸ್ ಹೆಜ್ಜೆ ಮುಂದಿಟ್ಟ. ಅವನ ಕಣ್ಣಾಲಿಗಳು ದುಃಖದಿಂದ ತುಂಬಿಹೋಗಿದ್ದವು. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಇಥಾಕಾದ ದೊರೆ ಒಡಿಸ್ಸಿಯಸ್ ಟ್ರಾಯ್ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದ. ಹತ್ತು ವರ್ಷಗಳಷ್ಟು ದೀರ್ಘ ಕಾಲ ನಡೆದ ಯುದ್ಧ ಮುಗಿಸಿ ಮರಳುವಾಗ ಅನೇಕ ಅಡ್ಡಿ ಆತಂಕಗಳನ್ನು ಅವನು ಎದುರಿಸಬೇಕಾಯ್ತು. ಸಿಸಿಲಿ ಸಮುದ್ರವನ್ನು ಹಾದು ಬರುವಾಗ ಭಯಾನಕ ಜಲಪಿಶಾಚಿಯಾಗಿ ಮಾರ್ಪಾಟಾಗಿದ್ದ […]