ನಾಲ್ಕು ವಿಧದ ಮನುಷ್ಯರು : ಭರ್ತೃಹರಿಯ ನೀತಿ ಶತಕ

ಏತೇ ಸತ್ಪುರುಷಾಃ ಪತಾರ್ಥಘಟಕಾಃ ಸ್ವಾರ್ಥಾನ್ಪರಿತ್ಯಜ್ಯ ಯೇ ಸಾಮಾನ್ಯಸ್ತುಪರಾರ್ಥಮುದ್ಯಮಭೃತಃ ಸ್ವಾರ್ಥಾವಿರೋಧೇನ ಯೇ | ತೇಮೀ ಮಾನುಷರಾಕ್ಷಸಾಃ ಪರಹಿತಂ ಸ್ವಾರ್ಥಾಯ ನಿಘ್ನಂತಿಯೇ ಯೇ ತು ಘ್ನಂತಿ ನಿರರ್ಥಕಂ ಪರಹಿತಂ ತೇ ಕೇ ನ ಜಾನೀಮಹೇ || ನೀತಿ ಶತಕ || ಅರ್ಥ : “ಮನುಷ್ಯರಲ್ಲಿ ನಾಲ್ಕು ವಿಧ. ತಮ್ಮ ಸ್ವಾರ್ಥವನ್ನು ಬದಿಗಿಟ್ಟು ಇನ್ನೊಬ್ಬರ ಹಿತವನ್ನು ಸಾಧಿಸುವ ಸತ್ಪುರುಷರು (ಉತ್ತಮರು). ತಮ್ಮ ಹಿತಕ್ಕೆ ತೊಂದರೆ ಆಗದಂತೆ ಮತ್ತೊಬ್ಬರ ಹಿತ ಸಾಧನೆ ಮಾಡುವ ಜನ ಸಾಮಾನ್ಯರು (ಮಧ್ಯಮರು). ತಮ್ಮ ಹಿತಾಸಕ್ತಿಯನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಇನ್ನೊಬ್ಬರ […]

ಭರ್ತೃಹರಿಯ ನೀತಿ ಶತಕ : ಬೆಳಗಿನ ಹೊಳಹು

ಪ್ರಾರಭ್ಯತೇ ನ ಖಲು ವಿಘ್ನಭಯೇನ ನೀಚೈಃ ಪ್ರಾರಭ್ಯ ವಿಘ್ನನಿಹತಾ ವಿರಮಂತಿ ಮಧ್ಯಾಃ | ವಿಘೈರ್ಮುಹುರ್ಮುಹುರಪಿ ಪ್ರತಿಹನ್ಯಮಾನಾಃ ಪ್ರಾರಬ್ಧಮುತ್ತಮಗುಣಾ ನ ಪರಿತ್ಯಜಂತಿ || ಅರ್ಥ: ಅಡೆ – ತಡೆಗಳು ಬರಬಹುದು ಎಂಬ ಭಯದಿಂದ ಕೆಲವರು ಒಳ್ಳೆಯ ಕೆಲಸಗಳನ್ನು ಆರಂಭಿಸುವುದೇ ಇಲ್ಲ. ಇವರು ಕನಿಷ್ಠರು. ಮಧ್ಯಮರು ಕೆಲಸವನ್ನೇನೋ ಆರಂಭಿಸುತ್ತಾರೆ. ಮಧ್ಯದಲ್ಲಿ ವಿಘ್ನವೇನಾದರೂ ಬಂದರೆ ಕೈಗೆತ್ತಿಕೊಂಡ ಕೆಲಸವನ್ನು ಅರ್ಧದಲ್ಲಿಯೇ ನಿಲ್ಲಿಸಿ ಬಿಡುತ್ತಾರೆ. ಆದರೆ ಉತ್ತಮರು ಪ್ರಾರಂಭ ಮಾಡಿದ ಕೆಲಸದಲ್ಲಿ ಪದೇ ಪದೇ ವಿಘ್ನಗಳು ಬರುತ್ತಿದ್ದರೂ ಫಲ ಸಿಗುವವರೆಗೂ ವಿಚಲಿತರಾಗದೇ ಕೆಲಸವನ್ನು ಮಾಡಿ […]

ಅಲ್ಪ ವಿದ್ಯೆ ಮಹಾಗರ್ವ : ಭರ್ತೃಹರಿಯ ನೀತಿ ಶತಕ

ನಮ್ಮ ವಿದ್ವತ್ತಿನ ಮಟ್ಟವನ್ನು ನಮಗಿಂತಲೂ ಹೆಚ್ಚು ವಿದ್ವಾಂಸರಾದರೊಡನೆ ತುಲನೆ ಮಾಡಿದಾಗ ನಾವೆಷ್ಟು ಚಿಕ್ಕವರು, ನಾವು ಓದುವುದು ಇನ್ನೂ ಇದೆ ಎನ್ನುವ ಅರಿವು ಮೂಡುತ್ತದೆ. ಆ ಅರಿವು ಮುಂದಿನ ಪ್ರಗತಿಗೆ ಪೂರಕವಾಗುತ್ತದೆ : ಭರ್ತೃಹರಿ | ಬೆಳಗಿನ ಹೊಳಹು ಯದಾ ಕಿಂಚಿತ್ ಜ್ಞೋಹಂ ದ್ವಿಪ ಇವ ಮದಾಂಧಃ ಸಮಭವಂ – ತದಾ ಸರ್ವಜ್ಞೋಸ್ಮೀತ್ಯ ಭವದಲಿಪ್ತಂ ಮಮ ಮನಃ | ಯದಾ ಕಿಂಚಿತ್ ಕಿಂಚಿತ್ ಬುಧ ಜನ ಸಕಾಶಾದವಗತಮ್ ತದಾ ಮುರ್ಖೋಸ್ಮೀತಿ ಜ್ವರ ಇವ ಮದೋಂ ಮೇ ವ್ಯಪಗತಃ ||ನೀತಿಶತಕ || […]

ಭರ್ತೃಹರಿಯ ನೀತಿಶತಕ #1 : ಬೆಳಗಿನ ಹೊಳಹು

ವಾಂಛಾ ಸಜ್ಜನಸಂಗಮೇ, ಪರಗುಣೇ, ಪ್ರೀತಿರ್ಗುರೌ ನಮ್ರತಾ ವಿದ್ಯಾಯಾಂ ವ್ಯಸನಂ, ಸ್ವಯೀಷಿತಿ ರತಿರ್ಲೋಕಾಪವಾದಾದ್ಭಯಮ್ | ಭಕ್ತಿಃ ಶೂಲಿನಿ, ಶಕ್ತಿರಾತ್ಮದಮನೇ, ಸಂಸರ್ಗಮುಕ್ತಿಃ ಖಲೇ ಏತೇ ಯೇಷು ವಸಂತಿ ನಿರ್ಮಲಗುಣಾಸ್ತೇಭ್ಯೋ ನರೇಭ್ಯೋ ನಮಃ || ಭರ್ತೃಹರಿಯ ನೀತಿ ಶತಕ | 2 || ಸಜ್ಜನರ ಸಹವಾಸದಲ್ಲಿ ಬಯಕೆ, ಬೇರೆಯವರ ಗುಣಗಳಲ್ಲಿ ಸಂತೋಷ, ಹಿರಿಯರಲ್ಲಿ ವಿನಯ, ಜ್ಞಾನದಲ್ಲಿ ಆಸಕ್ತಿ, ತನ್ನ ಪತ್ನಿಯಲ್ಲಿ ಮಾತ್ರ ಪ್ರೀತಿ, ಜನನಿಂದೆಯಿಂದ ಹೆದರಿಕೆ, ಈಶ್ವರನಲ್ಲಿ ಭಕ್ತಿ, ತನ್ನ ಇಂದ್ರಿಯಗಳನ್ನು ನಿಯಂತ್ರಿಸುವುದರಲ್ಲಿ ಸಾಮರ್ಥ್ಯ ಹಾಗೂ ದುಷ್ಟರಿಂದ ದೂರ ಇರುವುದು. ಈ […]